ಸರ್ಕಾರದಿಂದ ಎನ್‌ಪಿಎಸ್‌ ಯೋಜನೆ ನಿಧಿ ದುರ್ಬಳಕೆ


Team Udayavani, Jan 8, 2018, 1:03 PM IST

m6-sarkara.jpg

ಪಿರಿಯಾಪಟ್ಟಣ: ಎನ್‌ಪಿಎಸ್‌ ಯೋಜನೆಯ ಜಾರಿಯ ಮೂಲಕ ಸರ್ಕಾರಗಳು ಸರ್ಕಾರಿ ನೌಕರರ ಹಣವನ್ನು ದುರುಪಯೋಗಪಡಿಸಿಕೊಂಡು ನೌಕರರ ಜೀವನ ಭದ್ರತೆಯನ್ನು ಕಸಿದುಕೊಂಡಿವೆ ಎಂದು ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ತಿಳಿಸಿದರು.

ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ತಾಲೂಕು ಎನ್‌ಪಿಎಸ್‌ ನೌಕರರ ಸಂಘದ ವತಿಯಿಂದ ನಡೆದ ಎನ್‌ಪಿಎಸ್‌ ವಿಚಾರ ಸಂಕೀರ್ಣ ಮತ್ತು ಜಾಗೃತಿ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ  ಮಾತನಾಡಿದ ಅವರು, ನೂತನ ಪಿಂಚಣಿ ಯೋಜನೆ ಒಂದು ಅವೈಜಾnನಿಕ ಯೋಜನೆಯಾಗಿದ್ದು, ಯಾವುದೇ ಚರ್ಚೆಗೆ ಅವಕಾಶ ನೀಡದೆ ಇದನ್ನು ಜಾರಿಗೆ ತರಲಾಗಿದೆ. ಇದುವರೆಗೂ 1.75 ಲಕ್ಷ ಕೋಟಿ ರೂ.ಗಳ ಸರ್ಕಾರಿ ನೌಕರರ ಹಣ ಕಡಿತಗೊಳಿಸಿದೆ.

ಇವುಗಳನ್ನು ಖಾಸಗಿ ಕಂಪನಿಗಳಾದ ಎಲ್‌ಐಸಿ, ಎಸ್‌ಬಿಐ, ಯೂಟಿಐ ಮುಂತಾದ ಕಂಪನಿಗಳಲ್ಲಿ ಶೇರು ಹೂಡುವ ಮೂಲಕ ಜೂಜಾಟ ನಡೆಸುತ್ತಿದೆ. ಇದರಿಂದ ನಿವೃತ್ತಗೊಂಡ ಸರಕಾರಿ ನೌಕರರು ಪಿಂಚಣಿಯೂ ಸಿಗದೆ, ಇತ್ತ ಕಂತಿನ ಮಾಡಿದ ಹಣವನ್ನು ನೀಡದೆ ತೊಂದರೆಗೊಳಗಾಗಿದ್ದಾರೆ ಎಂದು ಆರೋಪಿಸಿದರು.

ಸಿಎಂ ಗಮನಕ್ಕೆ ಬೇಡಿಕೆ: ಶಾಸಕ ಕೆ.ವೆಂಕಟೇಶ್‌ ಮಾತನಾಡಿ, ನೌಕರಿಯಲ್ಲಿ ಜೀವನ ಭದ್ರತೆ ಇಲ್ಲದವರಿಗೆ ಆತಂಕ ಸಹಜವಾದುದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಮ್ಮ ಬೇಡಿಕೆಗಳನ್ನು ಸುಲಭವಾಗಿ ಈಡೇರಿಸುವಂತದಾಗಿದ್ದು, ತಾಳ್ಮೆಯಿಂದ ಹೋರಾಟ ನಡೆಸಬೇಕಿದೆ.

ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತಂದು ತಮ್ಮ ನೋವುಗಳನ್ನು ಸಂಘ ಸಂಸ್ಥೆಗಳು ಹಿರಿಯ ರಾಜಕಾರಣಿಗಳು ಮತ್ತು ಆಡಳಿತಾರೂಢ ಸರ್ಕಾರದ ಗಮನಸೆಳೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಮುಖ್ಯಮಂತ್ರಿ ಅವರು, ಜಿಲ್ಲೆಯವರಾಗಿದ್ದರಿಂದ ನಾನು ಖುದ್ದು ನಿಮ್ಮ ಸಮಸ್ಯೆಗಳನ್ನು ಗಮನಕ್ಕೆ ತರುತ್ತೇನೆ. ಅಲ್ಲದೆ ನಿಮ್ಮ ಬೇಡಿಕೆಗಳ ಬಗ್ಗೆ ಗಮಸೆಳೆಯಲು ಮಾಡುತ್ತಿರುವ ಹೋರಾಟಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಅಧಿಕಾರಿಗಳ ಮೋಸ: ಎನ್‌ಪಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್‌.ಆರ್‌.ರೂಪ ಮಾತನಾಡಿ, ಎನ್‌ಪಿಎಸ್‌ ಜಾರಿಯಾದ ಸಂದರ್ಭದಲ್ಲಿ ನಿವೃತ್ತಿಯ ವೇಳೆಗೆ ಕೋಟ್ಯಾದಿಪತಿಗಳಾಗುತ್ತೀರಾ ಎಂಬ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ ಅಧಿಕಾರಿಗಳು ಮೋಸ ಮಾಡಿದ್ದಾರೆ. ಅಲ್ಲದೆ 11 ವರ್ಷಗಳ ನಂತರ ಎನ್‌ಪಿಎಸ್‌ನ ಕರಾಳ ಮುಖದ ದರ್ಶನವಾಗುತ್ತಿದೆ. ಸರಕಾರಿ ನೌಕರಿ ಪಡೆದ ತಮ್ಮ ಮಕ್ಕಳು ತಮ್ಮನ್ನು ಇಳಿವಯಸ್ಸಿನಲ್ಲಿ ಸಾಕುತ್ತಾರೆಂಬ ತಂದೆತಾಯಿಯವರ ಭರವಸೆಗೆ ತಣ್ಣೀರೆರಚಿದಂತಾಗಿದೆ. 

ಸರ್ಕಾರದ ನಿರ್ಧಾರ ಖಂಡನೀಯ: ಪುರಸಭೆ ಅಧ್ಯಕ್ಷ ವೇಣುಗೋಪಾಲ್‌ ಮಾತನಾಡಿ, ಸರ್ಕಾರಿ ನೌಕರರ ಹಣವನ್ನು ಖಾಸಗಿ ಕಂಪನಿಗಳ ಶೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುವ ಸರ್ಕಾರದ ನಿರ್ಧಾರ ಖಂಡನೀಯ, ಹಳೆಯ ಪಿಂಚಿಣಿ ಪದ್ಧತಿಯೇ ಜಾರಿಯಾಗಬೇಕು.

ಅನ್ಯಾಯದ ವಿರುದ್ಧ ಒಗ್ಗಟಿನಿಂದ ಹೋರಾಟ ನಡೆಸಿದರೆ ಉತ್ತಮ ಫ‌ಲದೊರಕಲಿದೆ ಎಂದು ತಿಳಿಸಿದರು. ಪಟ್ಟಣದ ಅಗ್ನಿಶಾಮಕ ದಳದ ಎದುರಿಂದ ಸಾಯಿ ಸಮುದಾಯಭವನದ ವರೆಗೆ ಎನ್‌ಪಿಎಸ್‌ ನೌಕರರು ಮೆರವಣಿಗೆ ಮಾಡಿ ಜಾಗೃತಿ ಜಾಥಾ ನಡೆಸಿದರು.

ಸರಕಾರಿ ನೌಕರರ ಸಂಘದ ತಾ.ಅಧ್ಯಕ್ಷ ಎಂ.ಕೆ.ಪ್ರಕಾಶ್‌, ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಚಿಕ್ಕಮಾದಪ್ಪ ಮಾತನಾಡಿದರು. ಸಮಾರಂಭದಲ್ಲಿ ಎನ್‌ಪಿಎಸ್‌ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಿರೂಪ ರಾಜೇಶ್‌, ಸರಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಕಿರಣ್‌, ಎನ್‌ಪಿಎಸ್‌ ತಾ.ಸಂಘದ ಗೌರವಾಧ್ಯಕ್ಷ ಆರ್‌.ಟಿ.ಚಂದ್ರು, ಉಪಾಧ್ಯಕ್ಷರಾದ ಡಾ.ಆರ್‌.ಬಿ.ಶೋಭ, ಎಚ್‌.ಕೆ.ವಿಜಯ್‌, ಕಿರಣ್‌, ಗಾಯಿತ್ರಿ, ಸುರೇಂದ್ರ, ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.