ಪಾಕ್ನಲ್ಲಿ ಹೆಚ್ಚಿರುವ ಐಸಿಸ್ ಉಗ್ರರು : ಪಾಕ್ ಚಿಂತನ ಚಾವಡಿ
Team Udayavani, Jan 8, 2018, 4:54 PM IST
ಇಸ್ಲಾಮಾಬಾದ್ : ಪಾಕ್ ಸರಕಾರ ತನ್ನ ನೆಲದಲ್ಲಿ ಐಸಿಸ್ ಉಗ್ರರು ನೆಲೆಯೂರಿದ್ದಾರೆ ಎಂಬುದನ್ನು ಅಲ್ಲಗಳೆಯುತ್ತಾ ಬಂದಿದೆ; ಆದರೆ ವಾಸ್ತವದಲ್ಲಿ ಐಸಿಸ್ ಉಗ್ರರ ಸಂಖ್ಯೆ ದೇಶದಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಮತ್ತು ಇದು ದೇಶದ ಭದ್ರತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಲಿದೆ ಎಂದು ಪಾಕಿಸ್ಥಾನದ ಚಿಂತನ ಚಾವಡಿಯೊಂದು ಹೇಳಿದೆ.
ಪಾಕಿಸ್ಥಾನ್ ಇನ್ಸ್ಟಿಟ್ಯೂಟ್ ಫಾರ್ ಪೀಸ್ ಸ್ಟಡೀಸ್ (ಪಿಐಪಿಎಸ್) ವರದಿ ಪ್ರಕಾರ ಐಸಿಸ್ ಉಗ್ರರ ಉಪಸ್ಥಿತಿ ಉತ್ತರ ಸಿಂಧ್ ಮತ್ತು ಬಲೂಚಿಸ್ಥಾನದಲ್ಲಿ ಹೆಚ್ಚಿದೆ. ಕಳೆದ ವರ್ಷ ಇಬ್ಬರು ಚೀನೀ ಪ್ರಜೆಗಳ ಅಪಹರಣ ಮತ್ತು ಕೊಲೆಯ ಹಿಂದೆ ಐಸಿಸ್ ಉಗ್ರರೇ ಇದ್ದರು ಎಂಬುದನ್ನು “ಪಿಪ್ಸ್’ ವರದಿ ಉಲ್ಲೇಖೀಸಿ ಡಾನ್ ನ್ಯೂಸ್ ವರದಿ ಮಾಡಿದೆ.
ಪಾಕಿಸ್ಥಾನದ ಮುಂದಿರುವ ಭದ್ರತಾ ಸವಾಲುಗಳು ಎಂಬ ಬಗ್ಗೆ ಒಳನೋಟ ಬೀರುವ ಪಿಪ್ಸ್ ವಿಶ್ಲೇಷಣೆಯು 2017ರ ವಿಶೇಷ ವರದಿ ಎಂಬ ಶೀರ್ಷಿಕೆಯೊಂದಿಗೆ ಬಹಿರಂಗವಾಗಿದೆ.
ಪಾಕಿಸ್ಥಾನದಲ್ಲಿ ಐಸಿಸ್ ಉಗ್ರರ ಸಂಘಟಿತ ಉಪಸ್ಥಿತಿ ಎಂಬುದನ್ನು ಪಾಕ್ ಸರಕಾರ ಅಲ್ಲಗಳೆಯುತ್ತಲೇ ಬಂದಿದೆ. ಹಾಗಿದ್ದರೂ ಈಚಿನ ವರ್ಷಗಳಿಲ್ಲ ಬಲೂಚಿಸ್ಥಾನದಲ್ಲಿ ಮತ್ತು ಇತರೆಡೆಗಳಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗಳನ್ನು ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ವಹಿಸಿಕೊಂಡು ಬಂದಿರುವುದು ಪಾಕ್ ನೆಲದಲ್ಲಿನ ಅದರ ಉಪಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪಿಪ್ಸ್ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.