ನಾಟೆಕಲ್‌: ಪಾನಮತ್ತರಿಂದ ಮಸೀದಿ, ಅಂಗಡಿಗೆ ಹಾನಿ: ಇಬ್ಬರ ಬಂಧನ


Team Udayavani, Jan 9, 2018, 11:41 AM IST

09-25.jpg

ಉಳ್ಳಾಲ: ಮಸೀದಿ ಹಾಗೂ ಅಂಗಡಿಗಳಿಗೆ ಹಾನಿಗೈದು ಗಲಭೆಗೆ ಸಂಚು ರೂಪಿಸಿದ ಇಬ್ಬರನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಕುಮ್ಮಕ್ಕು ನೀಡಿದವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ನಾಟೆಕಲ್‌ ವ್ಯಾಪ್ತಿಯ ವರ್ತಕರ ಸಂಘ ಅಂಗಡಿ ಮುಂಗಟ್ಟುಗಳನ್ನು  ಮುಚ್ಚಿ ಸೋಮವಾರ ಕೆಲಹೊತ್ತು ಪ್ರತಿಭಟನೆ ನಡೆಸಿತು.

ಸುಳ್ಯದ ಏನೆಕಲ್‌ನ ಯತಿರಾಜ್‌ (23) ಮತ್ತು ಬೀದಿಗುಡ್ಡೆಯ ನಿತಿನ್‌(25) ದಾಂಧಲೆ ನಡೆಸಿ ಪೊಲೀಸರ ವಶದಲ್ಲಿರುವವರು. ಬೈಕ್‌ನಲ್ಲಿ ಆಗಮಿ ಸಿದ್ದ ಇವರು ಎರಡು ಬೇಕರಿ, ಒಂದು ಮಟನ್‌ ಸ್ಟಾಲ್‌, ಸೆಲೂನ್‌ ಮತ್ತು ಮಸೀದಿಗೆ ಹಾನಿ ಮಾಡಿದ್ದರು. ಮಂಜನಾಡಿ ಉರುಮನೆಯ ಕುಡಿಯುವ ನೀರಿನ ಸರಬರಾಜಿನ ಟ್ಯಾಂಕರ್‌ನಲ್ಲಿ ಕೆಲಸ ಮಾಡುವ  ಇವರು ತಮ್ಮ ಮಾಲಕರ ಬೈಕ್‌ನಲ್ಲಿ ಕೊಣಾಜೆ  ಸಮೀಪದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದರು.   ಕಂಠಪೂರ್ತಿ ಕುಡಿದು ಉರುಮನೆಯಲ್ಲಿರುವ ತಮ್ಮ ಬಾಡಿಗೆ ರೂಮಿಗೆ ವಾಪಸಾಗುತ್ತಿದ್ದಾಗ  ನಾಟೆಕಲ್‌ ಜಂಕ್ಷನ್‌ನಲ್ಲಿರುವ  ಅಬ್ದುಲ್‌ ರಝಾಕ್‌ ಅವರ ಬೇಕರಿಯ 2 ಫ್ರಿಡ್ಜ್ಗಳ ಗಾಜು ಒಡೆ ದರು. ಹಂಝ ನೌಷಾದ್‌ನ ಬೀಫ್‌ ಸ್ಟಾಲ್‌ನ ಕಲ್ಲುಗಳನ್ನು ಧ್ವಂಸಗೊಳಿಸಿ,  ಇಬ್ರಾಹಿಂಗೆ ಸೇರಿದ ನಾಟೆಕಲ್‌ ಬೇಕರಿ ಅಂಗಡಿಯ  ಸಿಸಿಕೆಮರಾವನ್ನು ಕಿತ್ತುಹಾಕಿ, ಬಳಿಕ ಸೆಲೂನ್‌   ಮತ್ತು ಪಕ್ಕದ  ರಕ್ಷೀದಿ ಮಸೀದಿಯ ಎರಡು ಟ್ಯೂಬ್‌ ಲೈಟ್‌ ಮತ್ತು ಸಿಎಫ್‌ಎಲ್‌  ಬಲ್ಬ್ಗಳನ್ನು ಪುಡಿಗೈದಿದ್ದರು.

ಸಿಸಿಟಿವಿಯಲ್ಲಿ ಸೆರೆಯಾದರು
ಬೇಕರಿಯಲ್ಲಿ ಸಿಸಿಟಿವಿಯನ್ನು  ಗಮನಿಸಿದ ಆರೋಪಿಗಳು ತಮ್ಮ ಕೃತ್ಯ ಅದರಲ್ಲಿ ಸೆರೆಯಾಗಬಾರದೆಂದು  ಸಿಸಿಟಿವಿಯನ್ನು ಕಿತ್ತು ಕೊಂಡೊಯ್ದಿ ದ್ದರು. ಆದರೆ ಅದಕ್ಕಿಂತ ಮೊದಲೇ ಇವರ ಕೃತ್ಯ ಸರ್ವರ್‌ನಲ್ಲಿ ದಾಖಲಾ ಗಿದ್ದು,  ಬೈಕ್‌ ಆಧಾರದಲ್ಲಿ ಅವರನ್ನು ಬಂಧಿಸಲಾಯಿತು.

ಪ್ರತಿಭಟನೆ : ಆರೋಪಿಗಳ ಜತೆಯಲ್ಲಿ ಅವರು ಕೆಲಸ ಮಾಡುವ ಸಂಸ್ಥೆಯ ಮಾಲಕರನ್ನು  ಕೂಡ ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮಾಲಕ  ಮಂಜುನಾಥ್‌ ಅವರನ್ನು ಕೂಡ  ವಶಕ್ಕೆ ತೆಗೆದುಕೊಂಡರು.   ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾದರ್‌ ಭೇಟಿ: ಸೋಮವಾರ ರಾತ್ರಿ ಸಚಿವ ಖಾದರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಟಾಪ್ ನ್ಯೂಸ್

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.