ದಲಿತ ಸಂಘಟನೆಗಳಿಂದ¨ ರಾಜೇಶ್ವರ ಗ್ರಾಮ ಬಂದ್
Team Udayavani, Jan 9, 2018, 12:15 PM IST
ಬಸವಕಲ್ಯಾಣ: ವಿಜಯಪೂರದಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಬೇಕು. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳಿಂದ ಸೋಮವಾರ ಕರೆ ನೀಲಾಗಿದ್ದ ರಾಜೇಶ್ವರ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು.
ದಲಿತ ಸಂಘರ್ಷ ಸಮಿತಿ ರಾಜೇಶ್ವರ ಗ್ರಾಮ ಶಾಖೆ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಘಟಕ, ಭೀಮನ ಹುಲಿಗಳ ಸಂಘ, ರಾಜೇಶ್ವರನ ಬೌದ್ಧ ವಿಹಾರ ಸಮಿತಿ, ದಲಿತ ನೌಕರರ ಸಂಘದ ಆಶ್ರಯದಲ್ಲಿ ಕರೆ ನೀಡಿದ್ದ ಬಂದ್‌ಗೆ ಓಗೊಟ್ಟು ಗ್ರಾಮದಲ್ಲಿ ಬಹುತೇಕ ಅಂಗಡಿ-ಮುಗ್ಗಟ್ಟುಗಳು ಸಂಜೆ ವರೆಗೆ ಬಂದ್ ಆಗಿದ್ದವು. ಬಂದ್ ನಿಮಿತ್ತ ಗ್ರಾಮದ ಭೀಮನಗರ ಓಣಿಯಿಂದ ಪ್ರಮುಖ ರಸ್ತೆಗಳ ಮೂಲಕ ಬಸ್ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ ಅಶೋಕ ಕುಲ್ಕರ್ಣಿ ಅವರಿಗೆ ಸಲ್ಲಿಸಲಾಯಿತು.
ರಾಜೇಶ್ವರನ ಬೌದ್ಧ ವಿಹಾರ ಸಮಿತಿ ಅಧ್ಯಕ್ಷ ಧೂಳಪ್ಪ ಪೋಸ್ತಾರ ಹಾಗೂ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಅಂಕುಶ ಗೋಖಲೆ ಅವರು, ದಲಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಸಚಿವ ಕುಮಾರ ಹೆಗಡೆ ಅವರಿಂದಾದ ಸಂವಿಧಾನದ ಅವಹೇಳನ ಖಂಡಿಸಿದರು.
ಎಸ್‌ಸಿ-ಎಟಿ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಮುಖಂಡರಾದ ದಯಾನಂದ ಕಟ್ಟಿಮನಿ, ಪರಮೇಶ್ವರ ಬುಡಕೆ, ಅಶೋಕ ಅಂತಪ್ಪನಳ್ಳಿ, ಧನರಾಜ ರಂಜೇರಿ, ಗ್ರಾಪಂ ಮಾಜಿ ಅಧ್ಯಕ್ಷ ವಿಕ್ರಮ ಪೊಸ್ತಾರ, ಎಂ.ಡಿ, ಹನೀಪ್ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಾಲೆ, ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಅಧ್ಯಕ್ಷ ನಾಗಣ್ಣಾ ಘಾಂಗ್ರೆ, ಭೀಮನ ಹುಲಿಗಳ ಸಂಘದ ಅಧ್ಯಕ್ಷ ಸಂತೋಷ ಮುಲಗೆ, ತಾಪಂ ಸದಸ್ಯೆ ಜ್ಯೋತಿ ಸುಭಾಷ, ಗ್ರಾಪಂ ಉಪಾಧ್ಯಕ್ಷ ದೀಪಕ ಪೋಸ್ತಾರ, ಮುಖಂಡರಾದ ಸಂಗ್ರಾಮ ಮೂಲಗೆ, ಸುಭಾಷ ಅಂತಪನಳ್ಳಿ, ವಿಕ್ರಮ ಪೋಸ್ತಾರ, ಮಾಣಿಕ ಘಾಂಗ್ರೆ, ವೀರಣ್ಣ ಮೂಲಗೆ, ಅಯುಬಖಾನ, ಅಜೀಮೋದ್ದಿನ್ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.