ಅನಾಥವಾಗಿವೆ ಪಿರಂಗಿ ಗುಂಡುಗಳು!
Team Udayavani, Jan 9, 2018, 12:31 PM IST
ಮಾಗಡಿ: ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆಯಲ್ಲಿ ದುರಸ್ತಿ ಕಾಮಗಾರಿ ನಡೆಸುತ್ತಿದ್ದ ವೇಳೆ ಶನಿವಾರ, 35 ಪಿರಂಗಿ ಗುಂಡುಗಳು ಪತ್ತೆಯಾಗಿವೆ. ಆದರೆ, ಅಪರೂಪದ ಗುಂಡುಗಳು ಪತ್ತೆಯಾಗಿ ಮೂರು ದಿನ ಕಳೆದರೂ ಪ್ರಾಚ್ಯವಸ್ತು ಇಲಾಖೆ ಅಥವಾ ಸಂಬಂಧಿಸಿದ ಯಾವುದೇ ವಿಭಾಗದ ಅಧಿಕಾರಿಗಳು ಗುಂಡುಗಳನ್ನು ವಶಕ್ಕೆ ಪಡೆಯಲು ಬಾರದೆ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಕೆಂಪೇಗೌಡ ಹಿತರಕ್ಷಣಾ ಸಮಿತಿ ಸಂಚಾಲಕ ಎ.ಎಚ್.ಬಸವರಾಜು ಆರೋಪಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕೆಂಪೇಗೌಡ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಅಪ್ಪಾಜಿಗೌಡ ಅರೊಂದಿಗೆ ಸೋಮವಾರ ಕೋಟೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಗೋಡೆ ದುರಸ್ತಿ ಕಾಮಗಾರಿ ನಡೆಸುವಾಗ ಶನಿವಾರ ಗೋಡೆಯ ಗೂಡಿನಲ್ಲಿ ಪಿರಂಗಿಗೆ ಬಳಸುತಿದ್ದ 35 ಗುಂಡುಗಳು ಪತ್ತೆಯಾಗಿದ್ದವು. ಕೆಂಪೇಗೌಡರ ಕಾಲದ ಪಿರಂಗಿ ಗುಂಡುಗಳನ್ನು ಪ್ರಾಚ್ಯವಸ್ತು ಇಲಾಖೆ, ತಾಲೂಕು ಆಡಳಿತ ಇಲ್ಲವೇ ಪುರಸಭೆಯವರು ಸಂರಕ್ಷಣೆ ಮಾಡಬೇಕಿತ್ತು. ಆದರೆ ಇದುವರೆಗೆ ಯಾರೂ ಸಮೀಪ ಸುಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಂಪೇಗೌಡ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಅಪ್ಪಾಜಿಗೌಡ ಮಾತನಾಡಿ, ಈ ಪಿರಂಗಿ ಗುಂಡುಗಳು ಯಾವ ಅವಧಿಯಲ್ಲಿ ಬಳಕೆಯಾಗುತ್ತಿದ್ದವು ಎಂಬ ಬಗ್ಗೆ ಪ್ರಾಚ್ಯವಸ್ತು ಇಲಾಖೆ ಸಂಶೋಧನೆ ನಡೆಸಬೇಕಿದೆ. ಇಲ್ಲಿ ಕಾಮಗಾರಿ ನಡೆಸುವಾಗ ಕೆಂಪೇಗೌಡರ ಕಾಲದಲ್ಲಿ ಬಳಕೆಯಾಗುತ್ತಿದ್ದ ಶಸ್ತ್ರಗಳು, ಪಳಿಯುಳಕೆಗಳು ಕೂಡ ಸಿಗಬಹುದು. ಹಾಗೇನಾದರೂ ಅಪರೂಪದ ವಸ್ತುಗಳಿ ಸಿಕ್ಕಲ್ಲಿ ಕೆಲಸಗಾರರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.