ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸರ್ವ ಸಿದ್ಧತೆ

Team Udayavani, Jan 9, 2018, 1:00 PM IST

m5-kadgichu.jpg

ಹುಣಸೂರು: ಬೇಸಿಗೆ ಸಂದರ್ಭದಲ್ಲಿ ಬೆಂಕಿ ಅವಘಡಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಫೈರ್‌ಲೈನ್‌(ಬೆಂಕಿರೇಖೆ) ನಿರ್ಮಿಸುವುದರೊಂದಿಗೆ ಸಾಕಷ್ಟು ಮುಂಜಾಗೃತ ಕ್ರಮ ವಹಿಸಿದ್ದು, ಈ ಬಾರಿ ಸೇನೆಯ ಸಹಾಯ ಕೋರಿ ಸ‌ರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ ಬಾರಿ ನವೆಂಬರ್‌ನಲ್ಲೇ ಬಿರುಬೇಸಿಗೆ ಕಾಣಿಸಿಕೊಂಡು ಉದ್ಯಾನದೊಳಗಿನ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ, ಗಿಡ-ಮರಗಳು ಒಣಗಿ ಆತಂಕ ಹುಟ್ಟಿಸಿದ್ದ ನಾಗರಹೊಳೆ ಉದ್ಯಾನದಲ್ಲಿ ಉತ್ತಮ ಮಳೆಯೊಂದಿಗೆ ಈ ಬಾರಿ ನವೆಂಬರ್‌ನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಮಳೆ ನೀರು, 14ಕ್ಕೂ ಹೆಚ್ಚು ಸೋಲಾರ್‌ ಪಂಪ್‌ಸೆಟ್‌ಗಳಿಂದ ನಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿರುವುದರಿಂದ ಹಸಿರು ಉಳಿದುಕೊಂಡಿರುವುದರಿಂದ ಅರಣ್ಯಕ್ಕೆ ವರದಾನವಾಗಿದ್ದರೂ ಬೇಸಿಗೆಯಲ್ಲಿ ಬೆಂಕಿ ಅವಘಡ ತಡೆಯಲು ಸಿದ್ಧವಾಗಿದೆ.

1813 ಕಿ.ಮೀ. ಫೆರ್‌ಲೆನ್‌: 643 ಚ.ಕಿ.ಮೀ.ವ್ಯಾಪ್ತಿಯ ವೀರನಹೊಸಹಳ್ಳಿ, ಮತ್ತಿಗೋಡು, ಕಲ್ಲಹಳ್ಳ, ಹುಣಸೂರು, ಅಂತರಸಂತೆ, ಡಿ.ಬಿ.ಕುಪ್ಪೆ ವಲಯ ಸೇರಿದಂತೆ ಉದ್ಯಾನದ 8 ವಲಯಗಳಲ್ಲಿನ 1813 ಕಿ.ಮೀ ಫೈರ್‌ಲೈನ್‌ (ಬೆಂಕಿರೇಖೆ) ನಿರ್ಮಿಸುವ ಕಾಮಗಾರಿಯನ್ನು 300 ಸಿಬ್ಬಂದಿಗಳು ಕೈಗೊಂಡಿದ್ದಾರೆ.

ಇನ್ನು ಅಲ್ಲಲ್ಲಿ ಸ್ವಲ್ಪ ಭಾಗ ಉಳಿದಿದ್ದು, ವಾರದೊಳಗೆ ಮುಗಿಯಲಿದೆ. ಉದ್ಯಾನದ ಸುರಕ್ಷತೆಯ ದೃಷ್ಠಿಯಿಂದ ಫೈರ್‌ಲೈನ್‌ ಸೇರಿದಂತೆ ಕಾಡಂಚಿನೆಲ್ಲೆಡೆ ನಿರ್ಮಿಸಿರುವ ವೀಕ್ಷಣಾ ಗೋಪುರ, ಅಟ್ಟಣೆಮೇಲೆ ತಾತ್ಕಾಲಿಕ ಕಣ್ಗಾವಲು ಹಾಗೂ ಅರಣ್ಯದಂಚಿನಲ್ಲಿ ಕ್ಯಾಮರಾ ಅಳವಡಿಸುವ ಸಿದ್ಧತೆಗಳನ್ನು ಕೆಗೊಂಡಿದ್ದಾರೆ.

300 ಮಂದಿ ಬೆಂಕಿತಡೆ ಸಿಬ್ಬಂದಿ: ಪ್ರತಿವಲಯದಲ್ಲೂ ಇಲಾಖೆಯ ಸಿಬ್ಬಂದಿಗಳೊಂದಿಗೆ ಅಗತ್ಯಕ್ಕೆ ತಕ್ಕಂತೆ ಬೆಂಕಿ ನಂದಿಸುವ ಕಾರ್ಯದಲ್ಲಿ ನುರಿತ ಸುಮಾರು 300 ಮಂದಿ ಕಾಡಂಚಿನ ಆದಿವಾಸಿಗಳನ್ನು ಜನವರಿ ಒಂದರಿಂದಲೇ ಮಾರ್ಚ್‌ ಅಂತ್ಯದವರೆಗೆ ನೇಮಿಸಿಕೊಳ್ಳಲಾಗಿದ್ದು, ಇವರಿಗೆ ನಿತ್ಯ ಮಧ್ಯಾಹ್ನ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಪರಿಕರಗಳನ್ನು ವಿತರಿಸಲಾಗಿದೆ.

ವಾಚ್‌ ಟವರ್‌- ಕ್ಯಾಮರಾ ಕಣ್ಗಾವಲು: ಉದ್ಯಾನದ ಹಲವೆಡೆ ಇರುವ ದೊಡ್ಡದಾದ 15 ವಾಚ್‌ ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದ್ದು, ಸಿಬ್ಬಂದಿಗಳು ದಿನವಿಡಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳನುಸುಳುವವರ ಪತ್ತೆಗಾಗಿ ಅಲ್ಲಲ್ಲಿ ಕ್ಯಾಮರಾ ಅಳವಡಿಸಲಾಗಿದೆ.

ವಲಯಕ್ಕೊಂದು ಕ್ವಿಕ್‌ ಆ್ಯಕ್ಷನ್‌ ಫೋರ್: ಪ್ರತಿ ವಲಯಕ್ಕೆ ಒಂದರಂತೆ ಕ್ವಿಕ್‌ ಆ್ಯಕ್ಷನ್‌ ಫೋರ್ ನಿಯೋಜಿಸಿದ್ದು, ಇದರಲ್ಲಿ ಸಣ್ಣ ನೀರಿನ ಟ್ಯಾಂಕ್‌, ನೀರು ಸ್ಪ್ರೆ ಯಂತ್ರದೊಂದಿಗೆ ಬೆಂಕಿ ಬಿದ್ದವೇಳೆ ತಕ್ಷಣವೇ ಆರಿಸಲು ನೆರವಾಗಲು ವಾಹನಗಳಲ್ಲಿ ಟ್ಯಾಂಕ್‌ ಮೂಲಕ ನೀರು ಕೊಂಡೊಯ್ಯುವ ವಾಹನಗಳಲ್ಲಿ ಸಣ್ಣ ಸಬ್‌ ಮರ್ಸಿಬಲ್‌ ಪಂಪ್‌ ಅಳವಡಿಸಲಾಗಿದೆ. ಪ್ರತಿವಲಯಕ್ಕೆ ಒಂದು ಹೆಚ್ಚುವರಿ ಬಾಡಿಗೆ ವಾಹನ ನಿಯೋಜಿಸಲಾಗಿದ್ದು, ಸಿಬ್ಬಂದಿಗಳು ನಿರಂತರವಾಗಿ ರೌಂಡ್ಸ್‌ ಮಾಡುವ ಮೂಲಕ ಕಣ್ಗಾವಲು ಇಟ್ಟಿದ್ದಾರೆ.

ಬೀದಿ ನಾಟಕ: ನಾಗರಹೊಳೆ ಉದ್ಯಾದಂಚಿನ ಗ್ರಾಮಗಳಲ್ಲಿ ನುರಿತ ಕಲಾತಂಡಗಳಿಂದ ಅರಣ್ಯದ ಮಹತ್ವ, ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ನಮ್ಮದೆನ್ನುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕದ ಮೂಲಕ, ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗಿದೆ. 

ಕಾಪ್ಟರ್‌ಗೆ ಬೇಡಿಕೆ: ನಾಗರಹೊಳೆ ಉದ್ಯಾನದೊಳಗೆ ಬೆಂಕಿ ಅವಘಡ ಸಂಭವಿಸಿದಲ್ಲಿ ತಕ್ಷಣಕ್ಕೆ ಕ್ರಮವಹಿಸಲು ಹುಣಸೂರು, ಎಚ್‌.ಡಿ.ಕೋಟೆ ಹಾಗೂ ವಿರಾಜಪೇಟೆ ವಿಭಾಗದಲ್ಲಿ ತಾತ್ಕಾಲಿಕವಾಗಿ ಮೂರು ಅಗ್ನಿಶಾಮಕ ಸಿಬ್ಬಂದಿಗಳನ್ನು ನಿಯೋಜಿಸಲು ಇಲಾಖೆಗೆ ಪತ್ರಬರೆಯಲಾಗಿದ್ದರೆ, ಅಗತ್ಯ ಬಿದ್ದಲ್ಲಿ ಬೆಂಕಿ ನಂದಿಸಲು ವಾಯು ಸೇನೆಯಿಂದ ಹೆಲಿಕಾಪ್ಟರ್‌ ಒದಗಿಸುವಂತೆ ಸ‌ರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆಧುನಿಕ ಉಪಕರಣ ಸಂಗ್ರಹ: ಇತ್ತೀಚೆಗೆ ಅಗ್ನಿಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಆಧುನಿಕ ಬೆಂಕಿ ನಿರೋಧಕ ಪರಿಕರಗಳನ್ನು ಖರೀದಿಸಲಾಗಿದೆ. ಈ ಬಾರಿ ಸೊಪ್ಪಿನಿಂದ ಬೆಂಕಿ ನಂದಿಸುವ ಬದಲು ಬೆಂಕಿ ಹೊತ್ತುಕೊಳ್ಳದ ಕ್ಯಾನ್‌ವಾಸ್‌ನ ಬಡಿಗೆ ಬಳಕೆ ಮಾಡಲಾಗುತ್ತಿದೆ.  ಫೈರ್‌ ಪ್ರೂಫ್ ಗಂ ಬೂಟ್‌, ಮಾಸ್ಕ್ ಹೆಲ್ಮೆಟ್‌, ಬೆಂಕಿ ನಿರೋಧಕ ಬಟ್ಟೆ, ಫೈರ್‌ಹುಕ್‌, ಬೀಟರ್‌, ಕಟ್ಟರ್‌ ಸೇರಿದಂತೆ ಅಗತ್ಯ ಪರಿಕರಗಳನ್ನು ಸಂಗ್ರಹಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕುಮಾರ್‌ “ಉದಯವಾಣಿಗೆ’ ಮಾಹಿತಿ ನೀಡಿದರು.

ಕಾಡಂಚಿನ ಜನರು ಸಹಕಾರ ನೀಡಿ,ಸಿ.ಎಫ್: ತಾನಾಗಿಯೇ ಕಾಡಿಗೆ ಬೆಂಕಿ ಬೀಳುವುದಿಲ್ಲ, ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುವ ಕಿಡಿಗೇಡಿಗಳ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಕಾಡಂಚಿನ ಗ್ರಾಮಸ್ಥರು ಮಾಹಿತಿ ನೀಡಿ, ಕಾಡಿಗೆ  ಬೆಂಕಿ ಬೀಳುವುದನ್ನು ತಡೆಯುವುದರಲ್ಲಿ ಸಾರ್ವಜನಿಕರ ಜವಾಬ್ದಾರಿಯು ಇದೆ. ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿದೆ. ಆದರೂ ಅರಣ್ಯದಂಚಿನ ಗ್ರಾಮಸ್ಥರ ಸಹಕಾರ ಅತ್ಯಗತ್ಯ.
-ಮಣಿಕಂಠನ್‌, ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ. ನಾಗರಹೊಳೆ

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.