ಅನ್ನಭಾಗ್ಯ- ಬಿಜೆಪಿಯಿಂದ ಅಪಪ್ರಚಾರ: ಖಾದರ್‌


Team Udayavani, Jan 10, 2018, 11:08 AM IST

10-20.jpg

ಮಂಗಳೂರು: ಸಿದ್ದ ರಾಮಯ್ಯ ಸರಕಾರದ ಜನಪ್ರಿಯ ಯೋಜನೆಯಾದ ಅನ್ನಭಾಗ್ಯ ಯೋಜನೆ ಯನ್ನು ಕನ್ನಭಾಗ್ಯ ಎಂದು ಲೇವಡಿ ಮಾಡಿದ್ದ ಬಿಜೆಪಿಯವರು ಇಂದು ಅನ್ನಭಾಗ್ಯ-ನಮ್ಮ ಭಾಗ್ಯ ಎಂದು ಹೇಳುತ್ತ ಜನರ ದಿಕ್ಕು ತಪ್ಪಿ ಸುವ ಕೆಲಸ ಮಾಡು ತ್ತಿದ್ದಾರೆ. ಜನರಿಗೆ ಉಪ ಯೋಗ ವಾಗುವ ಯಾವು ದಾದರೂ ಕೆಲಸವನ್ನು ಬಿಜೆಪಿಯವರು ಮಾಡಲಿ, ಅದು ಬಿಟ್ಟು ಕಾಂಗ್ರೆಸ್‌ ಮಾಡಿ ದ್ದನ್ನು ನಾವು ಮಾಡಿದ್ದು ಎಂದು ಸುಳ್ಳು ಹೇಳುತ್ತ¤ ತಿರುಗಾಡಬೇಡಿ ಎಂದು ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭ ದಲ್ಲಿ ಬಿಜೆಪಿಯವರು ಕನ್ನ ಭಾಗ್ಯ ಎಂದು ಲೇವಡಿ ಮಾಡಿದ್ದರು. ಆದರೆ ಈ ಯೋಜನೆಯ ಕೆಲವು ಲೋಪ ದೋಷಗಳನ್ನು ನಾವು ಸರಿ ಪಡಿಸಿದ ಬಳಿಕ ಈಗ ಎಲ್ಲೆಡೆ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇದಕ್ಕೆ ಅಕ್ಕಿಯನ್ನು ಕೇಂದ್ರ ಸರಕಾರ ನೀಡುತ್ತಿದೆ ಎಂದು ಇದೀಗ ಬಿಜೆಪಿಯವರು ಹೇಳಿ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮನಮೋಹನ್‌ ಸಿಂಗ್‌ ಪ್ರಧಾನಿ ಯಾಗಿದ್ದ ವೇಳೆ ಯುಪಿಎ ಸರಕಾರ ಆಹಾರದ ಹಕ್ಕು ಕಾಯಿದೆಯನ್ನು ಜಾರಿ ಮಾಡಿತ್ತು. ಇದರಂತೆ ಭಾರತದ ನಾಗರಿಕರಿಗೆ 5 ಕೆ.ಜಿ. ಅಕ್ಕಿಯನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಕಾಯಿದೆ ಸೂಚಿಸಿತ್ತು. ಆದರೆ, ಈ ಕಾಯಿದೆ ಜಾರಿಗೆ ಬರುವ ಮೊದಲೇ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅನ್ನಭಾಗ್ಯ ಯೋಜನೆಯನ್ನು ಆರಂಭಿ ಸಿತ್ತು. 5 ಕೆ.ಜಿ. ಅಕ್ಕಿ ಒಬ್ಬ ವ್ಯಕ್ತಿಗೆ ಸಾಕಾಗುವುದಿಲ್ಲ ಎಂದು ಅರಿತ ರಾಜ್ಯ ಸರಕಾರ 7 ಕೆ.ಜಿ. ಅಕ್ಕಿ ವಿತರಿಸುತ್ತಿದೆ. ಕೇಂದ್ರದ ನೆರವು ಕೇವಲ 5 ಕೆ.ಜಿ.ಗೆ ಮಾತ್ರ ದೊರೆಯುತ್ತದೆ. ಉಳಿದ 2 ಕೆ.ಜಿ.ಯನ್ನು ರಾಜ್ಯ ಸರಕಾರವೇ ಭರಿಸುತ್ತಿದೆ. ಕೇಂದ್ರ ಸರಕಾರವೇ ನೀಡುವುದಾರೆ, ಬಿಜೆಪಿ ಆಡಳಿತ ವಿರುವ ಗುಜರಾತ್‌ ಸೇರಿದಂತೆ ಬಹು ತೇಕ ರಾಜ್ಯಗಳಲ್ಲಿ ಅನ್ನಭಾಗ್ಯ ಯೋಜನೆ ಯಾಕೆ ಜಾರಿಯಾಗಲಿಲ್ಲ ಎಂದವರು ಪ್ರಶ್ನಿಸಿದರು.

ಪಡಿತರ ಅಂಗಡಿಗಳಿಗೆ ಪೋಸ್‌ ಮಷಿನ್‌ ಅಳವಡಿಕೆ ಕಾರ್ಯ ರಾಜ್ಯ ದಲ್ಲಿ ಶೇ. 80ರಷ್ಟು ಪೂರ್ಣಗೊಂಡಿದೆ. ಇದು ಪ್ರತಿಶತವಾದರೆ ನ್ಯಾಯಬೆಲೆ ಅಂಗಡಿಗಳ ಕಮಿಷನ್‌ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ವಲಸೆ ಕಾರ್ಮಿಕರಿಗೆ ಅನ್ನ ನೀಡಲಿ
ಯಾವುದೇ ಜಿಲ್ಲೆಯ ಕಾರ್ಮಿಕರು ರಾಜ್ಯದೊಳಗೆ ಎಲ್ಲಿ ಬೇಕಾದರೂ ಪಡಿತರ ಪಡೆಯುವುದಕ್ಕೆ ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ. ಇದೇ ರೀತಿ ಸಾಧ್ಯವಿದ್ದರೆ ಕೇಂದ್ರ ಸರ ಕಾರ ದವರು ಹೊರ ರಾಜ್ಯದ ಕಾರ್ಮಿಕರು ಬೇರೆ ಯಾವುದೇ ರಾಜ್ಯಕ್ಕೆ ಹೋದಾಗ ಅಲ್ಲಿ ಆಹಾರ ಪಡಿ ತರ ಪಡೆ ಯುವು ದಕ್ಕೆ ಸೌಲಭ್ಯ ಕಲ್ಪಿಸಿ ಕೊಡಲಿ ಎಂದು ಖಾದರ್‌ ಆಗ್ರಹಿಸಿ ದರು. ಈ ಬಗ್ಗೆ ಆಹಾರ ಇಲಾಖೆ ವತಿಯಿಂದ ಕೇಂದ್ರ ಸರ ಕಾರಕ್ಕೂ ಪತ್ರ ಬರೆಯಲಿದ್ದೇನೆ ಎಂದರು.

ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮಿಶನ್‌ನಂತಹ ಹಲವು ಕಾರ್ಯಕ್ರಮಗಳಲ್ಲಿ ಕೇಂದ್ರ ಸರಕಾರ ತನ್ನ ಪಾಲನ್ನು ಕಡಿತ ಗೊಳಿಸಿದೆ. ಇದರಿಂದಾಗಿಯೇ ಯಾವುದೇ ಶಾಲೆಯಲ್ಲಿ ಕಳೆದ ನಾಲ್ಕು ವರ್ಷ ದಿಂದ ಹೊಸ ಕೊಠಡಿ ನಿರ್ಮಾಣ ಗೊಳ್ಳುತ್ತಿಲ್ಲ. ಡೀಸೆಲ್‌, ಪೆಟ್ರೋಲ್‌ ಬೆಲೆ ಕಡಿತ ಗೊಂಡರೂ ಕೇಂದ್ರ ಸರಕಾರ ಅದರ ಪ್ರಯೋ ಜನ ವನ್ನು ಜನರಿಗೆ ವರ್ಗಾಯಿಸುತ್ತಿಲ್ಲ ಎಂದವರು ಆರೋಪಿಸಿದರು.

ಹೊಟೇಲ್‌ ಕಿರಿಕಿರಿ
ಬೆಂಗಳೂರು ಮಾದರಿಯಲ್ಲಿ ದ.ಕ.ದಲ್ಲೂ ಇಂದಿರಾ ಕ್ಯಾಂಟೀನ್‌ ಅನುಷ್ಠಾನವಾಗಲಿದೆ. ಕೆಲವೆಡೆ ಖಾಸಗಿ ಹೊಟೇಲ್‌ನವರಿಂದ ಇದಕ್ಕೆ ವಿರೋಧವೂ ಎದುರಾಗುತ್ತಿದೆ. ಬೆಂಗಳೂರಿನಲ್ಲೂ ಹೀಗೆಯೇ ಆಗಿತ್ತು. ತೊಕ್ಕೊಟ್ಟಿನಲ್ಲಿ ಒಂದೆರಡು ಹೊಟೇಲ್‌ಗಳು ತಮಗೆ ಕ್ಯಾಂಟೀನ್‌ನಿಂದ ನಷ್ಟವಾಗಬಹುದು ಎಂಬ ಹೆದರಿಕೆ ಯಿಂದಲೋ ಏನೋ ಧಾರ್ಮಿಕ ವಿಚಾರವನ್ನು ಕ್ಯಾಂಟೀನ್‌ ವಿಚಾರದಲ್ಲಿ ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಧಾರ್ಮಿಕತೆಗೆ ತೊಂದರೆ ಆಗದಂತೆ ಸರಕಾರಿ ಜಾಗದಲ್ಲೇ ಕ್ಯಾಂಟೀನ್‌ ನಿರ್ಮಾಣಗೊಳ್ಳಲಿದೆ ಎಂದರು. 

ಪೊಲೀಸರಿಗೆ ಮಾಹಿತಿ ನೀಡಿ: ಎಚ್‌ಡಿಕೆಗೆ ಖಾದರ್‌
ದೀಪಕ್‌ ಹತ್ಯೆ ಕುರಿತಂತೆ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್‌ ಅವರು, ಒಂದು ಕೊಲೆಯಲ್ಲಿ ರಾಜಕೀಯ ವಿಚಾರಕ್ಕಿಂತ ನೈಜತೆ ಮುಖ್ಯವಾಗುತ್ತದೆ. ಕೊಲೆಯಲ್ಲಿ  ಯಾರೂ ಕೂಡ ರಾಜಕೀಯ ಮಾಡುವುದು ಬೇಡ. ಕುಮಾರಸ್ವಾಮಿ ಅವರಲ್ಲಿ ಈ ಬಗ್ಗೆ ಮಾಹಿತಿ ಇದ್ದರೆ ಅವರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ತನಿಖೆಗೆ ಸಹಕರಿಸಬೇಕು. ಹತ್ಯೆಯ ಹಿಂದೆ ಯಾರಿದ್ದಾರೆ? ಯಾಕಾಗಿ ಕೊಲೆ ಮಾಡಲಾಗಿದೆ? ಎಂಬುದು ತನಿಖೆಯಿಂದಷ್ಟೇ ತಿಳಿದು ಬರಲಿದೆ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ವಿನಾಕಾರಣ ಆತಂಕ ಸೃಷ್ಟಿಸುವುದು ಸರಿಯಲ್ಲ  ಎಂದವರು ಹೇಳಿದರು.

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.