ಇನ್ ಬಾಕ್ಸಲ್ಲಿ ಬಾಂಬ್ ಇದೆ!
Team Udayavani, Jan 10, 2018, 2:19 PM IST
“ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎನ್ನುವ ಗಾದೆ ಹಳೆಯದಾಯ್ತು. ಮನುಷ್ಯರ ನಡುವೆ ನೇರಾನೇರ ಮಾತುಕತೆಯೇ ಕಡಿಮೆಯಾಗಿರುವ ಈ ಕಾಲಕ್ಕೆ ಅದೇ ಗಾದೆಯನ್ನು “ಮೆಸೇಜು ಕಳಿಸಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು’ ಎಂದು ಬದಲಾಯಿಸಿಕೊಳ್ಳಬಹುದು. ಒಂದು ರೀತಿಯಲ್ಲಿ ನೋಡಿದರೆ ಮಾತೇ ಒಳ್ಳೆಯದಿತ್ತು ಅನ್ನಿಸುತ್ತೆ. ಏಕೆಂದರೆ ಹೇಳಬೇಕಾದ್ದನ್ನು ನೇರವಾಗಿ ಹೇಳಿ ಬಿಡುತ್ತಿದ್ದೆವು. ಆದರೆ, ಮೆಸೇಜ್‌ನಲ್ಲಿ ಒಂದು ಪದ, ಒಂದು ಸ್ಟೈಲಿ, ಕ್ಯಾಪಿಟಲ್ ಅಕ್ಷರ… ಹೀಗೆ ಸ್ಕ್ರೀನ್ ಮೇಲಿನ ಪ್ರತಿ ಚುಕ್ಕಿಯೂ ಒಂದೊಂದು ಅರ್ಥವನ್ನು ಕೊಡುತ್ತೆ. ಹೀಗಾಗಿ ಮೆಸೇಜು ಕಳಿಸುವವನ ಉದ್ದೇಶ ಅದನ್ನು ಸ್ವೀಕರಿಸಿದವರನ್ನು ಇಡಿಯಾಗಿ ತಲುಪದೇ ಹೋಗುವ ಸಾಧ್ಯತೆ ತುಂಬಾ ಹೆಚ್ಚು. ಅದರಲ್ಲೂ ಹುಡುಗ- ಹುಡುಗಿ, ಪುರುಷ- ಮಹಿಳೆಯ ನಡುವೆ ಹರಿದಾಡುವ ಸಂದೇಶಗಳು ಈ ಅಪಾಯಕ್ಕೆ ತುತ್ತಾಗುವುದೇ ಹೆಚ್ಚು…
ಮೆಸೇಂಜರ್‌ನಲ್ಲಿ, ವಾಟ್ಸಾಪ್‌ನಲ್ಲಿ ದಿನಕ್ಕೆ ನೂರಾರು ಮೆಸೇಜ್‌ಗಳು ಬಂದು ಕೂರುತ್ತವೆ. ಅದರಲ್ಲೂ ಹುಡುಗಿಯರ ಇನ್‌ಬಾಕ್ಸ್‌ಗೆà ಹೆಚ್ಚು ಮೆಸೇಜುಗಳು ಬರುವುದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಪರಿಚಿತರಿಂದ ಬರುವ ಹಾಯ್, ಹೆಲೋಗಳಿಂದಲೇ ಶುರುವಾಗುವ ಸಂವಹನ ಅದೆಷ್ಟು ವೇಗವನ್ನು ಪಡೆದುಕೊಳ್ಳುತ್ತದೆ ಅನ್ನೋದೇ ಆಶ್ಚರ್ಯ. ಕೆಲವೇ ದಿನಗಳಲ್ಲಿ ಶುರುವಾದ ಚಾಟಿಂಗ್, ಮೀಟಿಂಗ್ ಹಂತವನ್ನು ತಲುಪಿಬಿಡುತ್ತೆ. ಆಚೆ ಕಡೆಯ ವ್ಯಕ್ತಿ ಆಪ್ತರಾಗುತ್ತಿದ್ದಂತೆಯೇ ಚಾಟಿಂಗ್ ತನ್ನ ಇನ್ನೊಂದು ಮುಖವನ್ನು ತೋರಿಸಲಾರಂಭಿಸುತ್ತೆ. ಇಷ್ಟು ದಿನ ಸುಖ ದುಃಖ ಹಂಚಿಕೊಳ್ಳೋದು, ಬರೀ ನಗು, ಜೋಕುಗಳಲ್ಲೇ ಖುಷಿಯಿಂದ ತೇಲಾಡುತ್ತಿದ್ದವರ ನಡುವೆ ಮನಸ್ತಾಪಗಳು ಬರುತ್ತೆ. ಕಿರಿಕಿರಿಯಾಗುತ್ತೆ. ಯಾವುದೋ ಕಾರಣಕ್ಕೆ ನೀವು ದುಃಖೀಸಲು ಪ್ರಾರಂಭಿಸುತ್ತೀರಿ. ಇದು ಅಪರಿಚಿತರೊಂದಿಗೇ ಆಗಬೇಕೆಂದಿಲ್ಲ. ಎಷ್ಟೋ ಸಲ ಪರಿಚಿತರೊಂದಿಗೆ ಮಾಡುವ ಚಾಟ್‌ಗಳು ಕೂಡ ಎಡವಟ್ಟುಗಳನ್ನು ಮಾಡುತ್ತವೆ. ಹೀಗಾಗಿ, ಯಾವ ಹೊತ್ತಿನಲ್ಲಿ, ಯಾರಿಗೆ, ಯಾವ ರೀತಿ ಟೆಕ್ಸ್ಟ್ ಮಾಡಬೇಕು ಎನ್ನುವುದೆಲ್ಲವೂ ಮುಖ್ಯವಾಗುತ್ತೆ. ಅದಕ್ಕೆ “ಅವನ’ ಜೊತೆ ಟೆಕ್ಸ್ಟ್ ಮಾಡುವ ಮುನ್ನ ನೀವು ಈ ಪ್ರಶ್ನೆಗಳಿಗೆ ಉತ್ತರ ಅರಿತುಕೊಳ್ಳಿ.
1. ನಾನೇಕೆ ಟೆಕ್ಸ್ಟ್ ಮಾಡಬೇಕು?
ಬಹುತೇಕರು ಈ ಪ್ರಶ್ನೆ ಕೇಳಿಕೊಳ್ಳುವುದೇ ಇಲ್ಲ. ಯಾರ ಮೆಸೇಜಿಗೇ ಆದರೂ ಪ್ರತ್ಯುತ್ತರ ಕೊಡುವುದಕ್ಕೆ ಏನಾದರೂ ಒಂದು ಕಾರಣವಿರುತ್ತೆ. ಅದು ಸಕಾರಣವೇ ಎಂದು ಒಮ್ಮೆ ಯೋಚಿಸಿ. ಬರೀ ಟೈಮ್‌ಪಾಸ್‌ಗೆà ಆದರೂ ವ್ಯಕ್ತಿಯ ಇತ್ಯೋಪರಿಯನ್ನು ಕಂಡುಕೊಳ್ಳಿರಿ. ನಿಜ ಜೀವನದಲ್ಲಿ ನೀವು ದಾರಿಯಲ್ಲಿ ಎದುರಾಗುವ ಯಾವುದೇ ಪುರುಷರೊಂದಿಗೆ ವಿನಾಕಾರಣ, ಮಾತನಾಡುವ ಧೈರ್ಯ ತೋರುವಿರಾ? ಇಲ್ಲವಲ್ಲ. ಅದೇ ಮನಃಸ್ಥಿತಿಯನ್ನು ಚಾಟಿಂಗ್‌ನಲ್ಲೂ ತೋರಬೇಕು. ಕಣ್ಣೆದುರಿಗೆ ಇಲ್ಲವೆಂದ ಮಾತ್ರಕ್ಕೆ ಚಾಟಿಂಗ್ ಅನ್ನು ಹಗುರಾಗಿ ತೆಗೆದುಕೊಳ್ಳಬಾರದು.
2. ಡಿಸ್ಟರ್º ಆಗಿದೀರಾ?
ಅಪ್ಪ ಬೈದ್ರು, ಅಮ್ಮ ಏನೋ ಅಂದ್ರು, ಗಂಡ ಹಾಗಂದ… ಹೀಗೆ ಯಾವ ಯಾವುದೋ ಕಾರಣಕ್ಕೆ ಮನಸ್ಸು ಕದಡುತ್ತದೆ. ಇಂಥ ಸಮಯದಲ್ಲಿ ಚಾಟ್ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಈ ಸಮಯದಲ್ಲಿ ಪುರುಷ ಚಾಟ್‌ಗಳು ಮನಸ್ಸಿಗೆ ಹಿತವೆನಿಸುವವು. ಅವರ ಸಾಂಗತ್ಯ ಬೇಕು ಎನ್ನಿಸುವುದು. ಇದು ಮನುಷ್ಯ ಸಹಜ ವರ್ತನೆ. ಈ ಮನಃಸ್ಥಿತಿ ತಾತ್ಕಾಲಿಕ. ಆದರೆ, ಆ ಸಮಯದಲ್ಲಿ ಮನಸ್ಸು ಅದನ್ನು ಒಪ್ಪಲು ಸಿದ್ಧವಿರುವುದಿಲ್ಲ. ಹೆಗಲು ತುಂಬಾ ಮಧುರವಾಗಿ ತೋರುವುದು. ಮನಸ್ಸು ದುರ್ಬಲವಾಗಿದ್ದಾಗ ಅದೇ ಸಮಯಕ್ಕೆ ಒಬ್ಬ ಆತ್ಮೀಯವಾಗಿಯೇ ಟೆಕ್ಸ್ಟ್ ಮಾಡುತ್ತಾನೆ. ಆಗ ನೀವು ಮಾಡುವ ರಿಪ್ಲೆ ನಿಮ್ಮ ನಿಯಂತ್ರದಲ್ಲಿರುವುದಿಲ್ಲ. ಆದ್ದರಿಂದ ಆ ಸಮಯದಲ್ಲಿ ಟೆಕ್ಸ್ಟ್ ಮಾಡದಿರುವುದು ಒಳ್ಳೆಯದು. ಮನಸ್ಸು ಆಗ ದುರ್ಬಲವಾಗಿ ಏನನ್ನು ನೋಡದೇ ಅವಲಂಬಿಸಿಬಿಡುತ್ತದೆ.
3. ಮದ್ಯ ಸೇವಿಸಿದ್ದಾನಾ?
ಮದ್ಯ ಸೇವಿಸಿದಾಗ ವಾಹನ ಚಾಲನೆ ಮಾಡಬಾರದು ಎಂಬ ಸಂಚಾರಿ ನಿಯಮವನ್ನು ಎಲ್ಲರೂ ಕೇಳಿಯೇ ಇರುತ್ತಾರೆ. ಆ ಸಮಯದಲ್ಲಿ ಮನಸ್ಸು ಹಿಡಿತ ತಪ್ಪುವ ಸಾಧ್ಯತೆಯಿರುವುದರಿಂದಲೇ ಆ ನಿಮಯ ಮಾಡಿರುವುದು. ಅದೇ ನಿಯಮ ಚಾಟಿಂಗ್ ಮಾಡುವಾಗಲೂ ಅನ್ವಯಿಸುತ್ತೆ. ಅತ್ತ ಕಡೆಯಿರುವ ವ್ಯಕ್ತಿ ಮದ್ಯ ಸೇವಿಸಿದ್ದರೆ ಅವರು ಎಂದಿನಂತಿರುವುದಿಲ್ಲ. ಈ ಸಮಯದಲ್ಲಿ ಆ ವ್ಯಕ್ತಿಯ ಹದ ಮೀರಿದ ಮಾತುಗಳು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. ಹೀಗಾಗಿ ಮದ್ಯ ಸೇವಿಸಿರುವುದು ತಿಳಿದಾಗ ಬಹಳ ಬೇಗ ಆವತ್ತಿನ ಸಂವಹನಕ್ಕೆ ಗುಡ್‌ಬೈ ಹೇಳುವುದು ಒಳಿತು.
4. ಪದೇ ಪದೇ ಟೆಕ್ಸ್ಟ್ ಬೇಕಾ?
ಆ ವ್ಯಕ್ತಿ ಸೆಲೆಬ್ರಿಟಿಯೇ ಆಗಿದ್ದರೂ ಹೆಚ್ಚಿನ ಉತ್ಸಾಹದಿಂದ ಮೇಲಿಂದ ಮೇಲೆ ಚಾಟ್ ಮಾಡುವುದು ಅನರ್ಥಗಳಿಗೆ ಈಡು ಮಾಡುತ್ತೆ. ಆತ ಆತ್ಮೀಯ ಎಂಬ ಕಾರಣಕ್ಕೆ ಬಿಡುವಿನ ವೇಳೆಯಲ್ಲಿ ಎಣೆಯಲ್ಲಿದ ಹರಟೆಗೆ ಇಳಿಯುವುದು ತರವಲ್ಲ. ಅದು ನಿಮ್ಮಿಬ್ಬರ ನಡುವಿನ ಕಾವನ್ನು, ಆತ್ಮೀಯತೆಯನ್ನು, ಒಂದು ಕುತೂಹಲವನ್ನು, ಬೆರಗನ್ನು ತಿಂದು ಹಾಕಬಹುದು. ಅಯ್ಯೋ ಅವಾ°? ಅಯ್ಯೋ ಅವಾÛ? ಅನ್ನುವವರಿಗೂ ಹೋಗಬಾರದು ಅಲ್ಲವೇ?
5. ನಿರ್ಲಕ್ಷಕ್ಕೆ ಒಳಗಾಗದಿರಿ
ಬಹುತೇಕರ ಚಾಟ್ ಹಿಸ್ಟರಿಯನ್ನು ನೋಡಿದರೆ ಅದರಲ್ಲಿ “ಮತ್ತೆ?’, “ದೆನ್?’, “ವಾಟ್ಸ್ ಅಪ್?’ ನಂಥ ಸಂಭಾಷಣೆಗಳು ಕಾಣಿಸುತ್ತವೆ. ಈ ಪದಗಳು ನಿಮ್ಮಿಂದಲೇ ಬಂದಿದ್ದರೆ ಆತ್ತ ಕಡೆಯ ವ್ಯಕ್ತಿ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ. ಏಕೆಂದರೆ ಇದರಿಂದ ನೀವು ಆ ವ್ಯಕ್ತಿಯ ಕುರಿತು ತೀವ್ರ ಕುತೂಹಲಿಗಳಾಗಿದ್ದೀರಿ ಎಂಬ ಅಭಿಪ್ರಾಯ ಬರುತ್ತದೆ. ಹೀಗಾಗಿ ಆ ಹಂತಕ್ಕೇ ಹೋಗದಿರಿ. ದೆನ್? ಮತ್ತೆ? ಎಂದು ಕೇಳಬೇಕೆನ್ನಿಸಿದಾಗ ಸಂವಹನವನ್ನು ನಿಲ್ಲಿಸಿಬಿಡಿ. ಇಲ್ಲದಿದ್ದರೆ ನೀವೇ ನಿರ್ಲಕ್ಷಕ್ಕೆ ಒಳಗಾಗುವ ಸಾಧ್ಯತೆಯಿದೆ.
6. ತುಂಬಾ ಫಾರ್ವರ್ಡ್ ಬೇಡ
ನೀವು ಕಳುಹಿಸುವ ಫಾರ್ವರ್ಡ್ ಚಿತ್ರಗಳು, ಫಾರ್ವರ್ಡ್ ಮಸೇಜ್‌ಗಳಲ್ಲಿ ನಿಮ್ಮ ವ್ಯಕ್ತಿತ್ವವಿರಲಿ. ಯಾರೋ ಕಳುಹಿಸಿದ್ದನ್ನು ಓದದೇ ಕಣ್ಮುಚ್ಚಿ ಫಾರ್ವರ್ಡ್ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಅವುಗಳಿಂದ ಬೇರೆಯವರಲ್ಲಿ ನಿಮ್ಮ ಮೇಲಿರುವ ಅಭಿಪ್ರಾಯ ಬದಲಾಗಬಹುದು. ಇಷ್ಟಕ್ಕೂ ಫಾರ್ವರ್ಡ್ ಮೆಸೇಜುಗಳನ್ನು ಅನವಶ್ಯಕವಾಗಿ ಕಳಿಸುವ ಪರಿಪಾಠ ಬೆಳೆಯುತ್ತಿರುವುದರಿಂದ ಆತ್ಮೀಯರಿಗೆ ಮಾತ್ರ ಫಾರ್ವರ್ಡ್ ಕಳಿಸುವ ಪರಿಪಾಠ ಬೆಳೆಸಿಕೊಳ್ಳಿ.
ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.