ಮಠತ್ತಾರಿಗೆ ನೀರು ಕೊಟ್ಟ ಕಿಂಡಿ ಅಣೆಕಟ್ಟು
Team Udayavani, Jan 10, 2018, 2:24 PM IST
ಕಾಣಿಯೂರು: ಹೊಳೆ – ನದಿಗಳಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಒಡ್ಡುಗಳನ್ನು ಕಟ್ಟಿ, ಅದಕ್ಕೆ ಫೈಬರ್ ಅಥವಾ ಮರದ ಹಲಗೆಗಳನ್ನು ಅಳವಡಿಸಿ, ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ತಪ್ಪಿಸುವ ಪ್ರಯತ್ನ ಈಗ ಎಲ್ಲೆಡೆ ನಡೆಯುತ್ತಿದೆ. ಕಾಣಿಯೂರು ಮಠದ ಸಮೀಪವಿರುವ ಮಠತ್ತಾರು ಎಂಬಲ್ಲಿ ನಾಲ್ಕು ವರ್ಷಗಳ ಹಿಂದಿನಿಂದಲೇ ಇಂಥ ಪ್ರಯೋಗ ಯಶಸ್ವಿಯಾಗಿದೆ.
ಮಳೆ ಪ್ರಮಾಣ ಕಡಿಮೆಯಾಗಿ, ಅಂತರ್ಜಲವೂ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ
ಕಾಡುತ್ತಿದೆ. ಕೃಷಿಗೆ, ನಿತ್ಯ ಬಳಕೆಗೆ ಬೇಕಾದ ಜೀವಜಲಕ್ಕಾಗಿ ಪರದಾಟ ತಪ್ಪಿಸಲು ಸರಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೂಲಕ ಕೊಳವೆ ಬಾವಿಗಳಿಗೆ ನೀರಿಂಗಿಸುವಿಕೆ, ಇಂಗು ಗುಂಡಿಗಳ ನಿರ್ಮಾಣ, ಕಿಂಡಿ ಅಣೆಕಟ್ಟು, ಡ್ಯಾಮ್ಗಳ ನಿರ್ಮಾಣ ಮಾಡುತ್ತಿದೆ.
50-60 ಮನೆಗಳಿಗೆ ನೀರು
ಶ್ರೀ ಕಾಣಿಯೂರು ಮಠ ಸಮೀಪವಿರುವ ಮಠತ್ತಾರು ಎಂಬಲ್ಲಿ ಹರಿಯುವ ಹೊಳೆಗೆ ನಾಲ್ಕು ವರ್ಷಗಳ ಹಿಂದೆಯೇ ದೊಡ್ಡ ಗಾತ್ರದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ.
ಸುಳ್ಯ ಶಾಸಕ ಎಸ್. ಅಂಗಾರ ಅವರು ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಒದಗಿಸಿ, ಈ
ಭಾಗದ ಸುಮಾರು 50-60 ಮನೆಗಳ ಕೃಷಿ ಚಟುವಟಿಕೆಗೆ ಹಾಗೂ ಮನೆ ಬಳಕೆಗೆ ನೀರು ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ ಪರೋಕ್ಷವಾಗಿ ಇಲ್ಲಿನ ಒಂದೆರಡು ಕಿ.ಮೀ. ವ್ಯಾಪ್ತಿಯ ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಠತ್ತಾರು, ಗುಂಡಿಗದ್ದೆ, ಮುಗರಂಜ, ಅನಿಲ, ಕಟ್ಟತ್ತಾರು, ಬಂಡಾಜೆ, ಕಲ್ಪಡ, ಪೆರ್ಲೋಡಿ ಭಾಗದಲ್ಲಿ ಅಂತರ್ಜಲ ಗಣನೀಯವಾಗಿ ಹೆಚ್ಚಳವಾಗಿರುವುದು ಕಂಡುಬರುತ್ತಿದೆ .
ಸ್ಥಳೀಯರಿಂದಲೇ ನಿರ್ವಹಣೆ
ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಡ್ಯಾಮ್ಗೆ ಫೈಬರ್ ಹಲಗೆಗಳನ್ನು ಅಳವಡಿಸಲಾಗುತ್ತಿದ್ದು, ಮಳೆಗಾಲ ಆರಂಭವಾದೊಡನೆ ಹಲಗೆ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ. ಸ್ಥಳೀಯರೇ
ಸೇರಿ ಹಲಗೆ ತೆಗೆಯುವ ಹಾಗೂ ಜೋಡಿಸುವ ಕೆಲಸ ಮಾಡುತ್ತಾರೆ. ಈ ಕಿಂಡಿ ಅಣೆಕಟ್ಟಿನಿಂದ 1 ಕಿ.ಮೀ. ದೂರದ ಬೈಲಡ್ಯೆ ಎಂಬಲ್ಲಿ ಇದೇ ರೀತಿಯ ಮತ್ತೂಂದು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ಎರಡೂ ಡ್ಯಾಮ್ ಗಳು ಭರ್ತಿಯಾಗಿ, ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಹೊಳೆಗೆ ಈ ರೀತಿಯ ಕಿಂಡಿ ಅಣೆಕಟ್ಟನ್ನು ಅಲ್ಲಲ್ಲಿ ನಿರ್ಮಾಣ ಮಾಡಿದರೆ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗಿ, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
ರೈತರಿಗೆ ಅನುಕೂಲ
ಮಠತ್ತಾರು ಕಿಂಡಿ ಅಣೆಕಟ್ಟಿನಿಂದಾಗಿ ಕಾಣಿಯೂರು ಆಸುಪಾಸಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಈ ಡ್ಯಾಮ್ನ ಕೆಳಗೆ ಕಾಣಿಯೂರು ಗ್ರಾಮದ ಪೆರ್ಲೋಡಿ ಎಂಬಲ್ಲಿ ಮತ್ತೂಂದು ಡ್ಯಾಮ್ನ ಆವಶ್ಯಕತೆ ಇದೆ. ಈ ಹೊಳೆಗೆ ಇನ್ನೂ ಅಲ್ಲಲ್ಲಿ ಡ್ಯಾಮ್ ಕಟ್ಟಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಈ ಬಗ್ಗೆ ಶಾಸಕ ಎಸ್. ಅಂಗಾರ ಅವರಿಗೆ ಮನವಿ ಸಲ್ಲಿಸಲು ಇಲ್ಲಿನ ನಾಗರಿಕರು ನಿರ್ಧರಿಸಿದ್ದಾರೆ.
– ಸುರೇಶ್ ಓಡಬಾಯಿ,
ಕಾಣಿಯೂರು ಗ್ರಾ.ಪಂ. ಸದಸ್ಯರು
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.