ದೇವರಿಗೆ ಮುತ್ತು ಕೊಟ್ಟರೆ ಮನಸ್ಸು ಹಗುರ


Team Udayavani, Jan 10, 2018, 4:48 PM IST

10-46.jpg

(ಪ್ರತಿ ಹೆಣ್ಣೂ ಅಂತರಂಗದಲ್ಲಿ ವಿಶ್ವಸುಂದರಿ! ಆ ಸೌಂದರ್ಯವನ್ನು ಪ್ರತಿಬಿಂಬಿಸುವ ಕನ್ನಡಿ ಎಲ್ಲೋ ಗೋಡೆಗೆ ನೇತುಹಾಕಿರುವುದಿಲ್ಲ. ಅದು ನಮ್ಮೊಳಗೆ ಇದೆ. ಅಂತರಂಗದ ಆ ಕನ್ನಡಿಯನ್ನು ಕಂಡುಕೊಳ್ಳುವ ಕಲೆಯೇ ಬದುಕು. ಅದೇ ಹೆಣ್ಣಿನ ಅಧ್ಯಾತ್ಮ. ಆ ಖುಷಿ, ಈ ಯಶಸ್ಸು- ಇವೆರಡನ್ನೂ ಹಳಿಮಾಡಿಕೊಂಡು ಸಾಗುವ ಗುಟ್ಟುಗಳು ಈ ಹೊಸ ಅಂಕಣದಲ್ಲಿ ಪ್ರತಿವಾರ ತೆರೆದುಕೊಳ್ಳಲ್ಲಿ)

ದೇವರು! ಹಾಗಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಭಯವೊಂದು ಹಾದು ಹೋಗುತ್ತದೆ. ಮೊದಲಿನಿಂದಲೂ ನಮಗೆ ಕಲಿಸಿದ್ದು ಹಾಗೆ. ದೇವರೆಂದರೆ ಭಯಪಡಬೇಕು ಎಂದು. ಆದರೆ, ದೇವರ ವಿಚಾರದಲ್ಲಿ ನಾನು ಉಳಿದವರಿಗಿಂತ ಸ್ವಲ್ಪ$ಭಿನ್ನವಾಗಿ ಯೋಚನೆ ಮಾಡುತ್ತೇನೆ. ನನಗೆ ದೇವರೆಂದರೆ ಭಯವಿಲ್ಲ. ನಾನು ದೇವರನ್ನು ತುಂಬಾ ಪ್ರೀತಿಸುತ್ತೇನೆ! 

ನಾವು ದಿನನಿತ್ಯ ಒಂದಿಲ್ಲೊಂದು ಬೇಡಿಕೆಯನ್ನು ಪ್ರಾರ್ಥನೆಯ ಮೂಲಕ ದೇವರ ಮುಂದಿಡುತ್ತೇವೆ. ಉತ್ತಮ ಆರೋಗ್ಯಕ್ಕಾಗಿಯೋ, ತುಂಬಾ ಹಣಕ್ಕಾಗಿಯೋ, ನಿಜವಾದ ಪ್ರೀತಿ ಸಿಗಲಿ ಎಂಬುದೋ, ಇನ್ನು ಕೆಲವೊಮ್ಮೆ ಪರೀಕ್ಷೆಯಲ್ಲಿ ಜಾಸ್ತಿ ಅಂಕಕ್ಕಾಗಿಯೂ ದೇವರನ್ನು ಪ್ರಾರ್ಥಿಸುತ್ತೇವೆ. ನೆಚ್ಚಿನ ಉಡುಪನ್ನು ಧರಿಸಲು ಆಗದೇ ಇದ್ದಾಗ “ನನ್ನನ್ನು ಒಂದಿಂಚು ಸಣ್ಣಗೆ ಮಾಡಪ್ಪಾ…’ ಎಂದು ನಾನು ದೇವರನ್ನು ಬೇಡಿಕೊಂಡಿದ್ದೂ ಇದೆ. 

ದೇವರನ್ನು ಪ್ರಾರ್ಥಿಸುವುದಕ್ಕೂ ಅನೇಕ ರೀತಿ- ನೀತಿಗಳಿವೆ. ಗಂಭೀರವಾದ ಪ್ರಾರ್ಥನೆ, ಒಮ್ಮೆ ಮಾಡುವ ಪ್ರಾರ್ಥನೆ, ನಾನು ನಿನ್ನನ್ನು ಪರೀಕ್ಷಿಸುತ್ತೇನೆ ಎಂಬ ಪ್ರಾರ್ಥನೆ, ಬಾಲಿಶ ಪ್ರಾರ್ಥನೆ  - ಹೀಗೆ ಮುಗಿಯದ ಪಟ್ಟಿಗಳೇ ಇವೆ. ಧಾರ್ಮಿಕ ಸ್ಥಳಗಳಲ್ಲಿ ಮಂಡಿಯೂರಿ ಪ್ರಾರ್ಥಿಸುವ ಜನರು, ದೇವರನ್ನು ಹೂವು ಮತ್ತು ಆಭರಣಗಳಿಂದ ಸಿಂಗರಿಸುವುದು, ಮೇಜು ಅಥವಾ ಹಾಸಿಗೆ ಮೇಲೆ ಕುಳಿತು ಪ್ರಾರ್ಥಿಸುವುದು- ಹೀಗೆ ಯಾವುದರಲ್ಲಿ ಧನಾತ್ಮಕ ಫ‌ಲಿತಾಂಶವನ್ನು ಬೇಗನೆ ನೀವು ನೋಡುತ್ತಿರಾ..?

ನನ್ನ ಬದುಕಿನ ರಹಸ್ಯವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಗೆ ಗೊತ್ತಾ? ದೇವರು ನನ್ನ ಪ್ರತಿಯೊಂದು ಪ್ರಾರ್ಥನೆಗೂ ಉತ್ತರಿಸಿದ್ದಾನೆ! ಯಾವಾಗ ಪ್ರಾರ್ಥನೆ ಮಾಡಲು ಮನಸ್ಸಾಗುತ್ತೋ, ಆಗ ಪ್ರಾರ್ಥಿಸಲು ಕೂರುತ್ತೇನೆ. ಇದಕ್ಕೆ ಯಾವುದೇ ಸ್ಥಳ, ಸಮಯವನ್ನು ನಾನು ನೋಡುವುದಿಲ್ಲ. ಈಗ ದೇವರನ್ನು ಪ್ರಾರ್ಥಿಸಬೇಕು ಎಂದು ಮನಸ್ಸಾದ ತಕ್ಷಣ ಪ್ರಾರ್ಥಿಸುತ್ತೇನೆ ಅಷ್ಟೇ. ಇದಕ್ಕಾಗಿ ನಾನು ಯಾವುದೇ ನಿಯಮವನ್ನಾಗಲಿ, ಪುಸ್ತಕವನ್ನಾಗಲಿ ಅನುಸರಿಸುತ್ತಿಲ್ಲ.

ಪ್ರಾರ್ಥನೆ ಮಾಡಲು ಒಂದು ನಿಯಮವಿದೆ, ಆ ನಿಯಮ ಪಾಲಿಸದಿದ್ದರೆ, ನಮಗೆ ದೇವರು ಶಿಕ್ಷೆ ಕೊಡುತ್ತಾನೆ ಎಂಬುದನ್ನೆಲ್ಲಾ ನಾನು ನಂಬುವುದಿಲ್ಲ. ನನಗೆ ದೇವರೆಂದರೆ ಭಯವಿಲ್ಲ, ನಾನು ದೇವರನ್ನು ಪ್ರೀತಿಸುತ್ತೇನೆ ಅಷ್ಟೇ. ಇನ್ನು ನಾನು ಬೆಳಗ್ಗಿನ ತಿಂಡಿ ತಿನ್ನುವಾಗ ದೇವರಿಗೆ ಹೇಳುತ್ತೇನೆ: “ಕಾರ್ನ್ಫ್ಲೇಕ್ಸ್‌ಗೆ ತಣ್ಣಗಿನ ಹಾಲು ಹಾಕಿಕೊಂಡು ತಿನ್ನು, ಇದರ ರುಚಿ ತುಂಬಾ ಅದ್ಭುತವಾಗಿದೆ’ ಎಂದು. ಕೆಲಸಕ್ಕೆ ಹೋಗುವಾಗ ದೇವರಿಗೊಂದು ಮುತ್ತುಕೊಟ್ಟು ಹೋಗುತ್ತೇನೆ. ದೇವರನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುತ್ತೇನೆ. ನಾನು ಹೇಳುವ ಸಣ್ಣ ವಿಷಯವನ್ನು ಅವನು ಅಷ್ಟೇ ಮುತುವರ್ಜಿಯಿಂದ ಕೇಳುತ್ತಾನೆ, ನಾನು ಅತ್ತಾಗ ಅವನೂ ಅಳುತ್ತಾನೆ, ನಾನು ತುಂಬಾ ಖುಷಿಯಾದಾಗ ಅವನೂ ಖುಷಿಯಾಗುತ್ತಾನೆ, ನಾನು ಅವನನ್ನು ಗಾಢವಾಗಿ ಪ್ರೀತಿಸುತ್ತೇನೆ, ನನ್ನೆಲ್ಲ ಪ್ರಶ್ನೆಗಳಿಗೆ ಅವನು ನೀಡುವ ಉತ್ತರಗಳನ್ನು ಯಾವುದೇ ಸಂದೇಹವಿಲ್ಲದೇ, ಒಪ್ಪಿಕೊಳ್ಳುತ್ತೇನೆ. ನಾನು ಯಾವುದೇ ಬೇಸರದಲ್ಲಿದ್ದರೂ ಅವನು ಯಾವತ್ತೂ ನನ್ನನ್ನು ಅಲಕ್ಷಿಸುವುದಿಲ್ಲ… ಹೀಗೆ ದೇವರು ಮತ್ತು ಅವನ ಜತೆಗಿನ ನನ್ನ ಪ್ರೀತಿಯ ನಂಟು ಸಾಗುತ್ತಲೇ ಇರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಪ್ರಾರ್ಥನೆ ಮಾಡುವಾಗ ಯಾವುದೇ ಅಜೆಂಡಾವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ದೇವರನ್ನು ಪ್ರೀತಿಸಿ, ದೇವರೆಂದರೆ ಭಯಪಡಬೇಡಿ. ದೇವರು ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ. 

ಪಟ್‌ಪಟಾಕಿ ಶ್ರುತಿ, ಆರ್‌.ಜೆ.

ಟಾಪ್ ನ್ಯೂಸ್

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

75752

Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್‌ʼ ರಿಲೀಸ್‌ ಡೇಟ್..‌ ಫ್ಯಾನ್ಸ್‌ ಖುಷ್

Revanna

Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

1-reeeeeeeeee

CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

Kollywood:‌ ಲೇಡಿ ಸೂಪರ್‌ ಸ್ಟಾರ್‌ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್‌ ದಾಖಲು

12-sagara

Sagara: ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.