ಭಾರತ ಮಾತ್ರವೇ ನಿಮಗೆ ಬೇಕಾದ್ದನ್ನು ನೀಡಬಲ್ಲುದು: ಮೆಹಬೂಬ ಮುಫ್ತಿ
Team Udayavani, Jan 10, 2018, 7:04 PM IST
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ರಾಜ್ಯದ ಜನತೆಗೆ ಒಂದು ಸಂದೇಶ ನೀಡಿದ್ದಾರೆ. ರಾಜ್ಯ ವಿಧಾನ ಸಭೆಯಲ್ಲಿ ಮಾತನಾಡುತ್ತಾ ಅವರು, “ಜಮ್ಮು ಕಾಶ್ಮೀರದ ಜನರಿಗೆ ಏನು ಬೇಕೋ ಅದನ್ನು ಭಾರತ ಮಾತ್ರವೇ ನೀಡಬಲ್ಲುದು; ಹೊರತು ಬೇರೆ ಯಾವ ದೇಶವೂ ಅಲ್ಲ’ ಎಂದು ಹೇಳಿದರು.
“ನಮಗೆ ಜಮ್ಮು ಕಾಶ್ಮೀರದ ಸಂವಿಧಾನದ ಮೇಲೆ, ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲವೆಂದಾದರೆ ಬೇರೆ ಯಾವುದರಲ್ಲಿ ನಂಬಿಕೆ ಇರಬಲ್ಲುದು ? ಹಾಗಿರುವಾಗ ನಮಗೆ ಸಿಗುವುದಾದರೂ ಏನು ? ನಮಗೆ ಬೇಕಾದದ್ದು ಬೇರೆ ಎಲ್ಲಿಂದ ಸಿಗಬೇಕು?’ ಎಂದು ಮೆಹಬೂಬ ಮುಫ್ತಿ ಪ್ರಶ್ನಿಸಿದರು.
ಭಾರತದಿಂದಲ್ಲದೆ ಬೇರೆ ಯಾವ ದೇಶದಿಂದಲೂ ನಮಗೆ ಬೇಕಾದದ್ದು ಸಿಗುವುದಿಲ್ಲ ಎಂಬುದನ್ನು ನಾವು ಎಂದೂ ಮರೆಯಬಾರದು ಎಂದು ಮೆಹಬೂಬ ರಾಜ್ಯದ ಜನರಿಗೆ ಹೇಳಿದರು.
ಭಾರತ ಮತ್ತು ಪಾಕಿಸ್ಥಾನದ ನಾಯಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ದ್ವೇಷವನ್ನು ತೊರೆದು ಮತ್ತೆ ಮಿತ್ರರಾಗಬೇಕು; ಸ್ಥಳೀಯ ಕಾಶ್ಮೀರಿಗಳಿಗಾಗಿ ಮತ್ತು ಗಡಿಯಲ್ಲಿನ ಜವಾನರಿಗಾಗಿ ಉಭಯ ದೇಶಗಳು ಮತ್ತೆ ಸ್ನೇಹಿತರಾಗಬೇಕು ಎಂದು ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ’ ಎಂದು ಮೆಹಬೂಬ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.