ಕ್ಯಾಬ್‌ಗೆ ಸರ್ಕಾರಿ ದರ


Team Udayavani, Jan 11, 2018, 10:54 AM IST

blore-1.jpg

ಬೆಂಗಳೂರು: ಆ್ಯಪ್‌ ಆಧಾರಿತ ಕ್ಯಾಬ್‌ಗಳೂ ಸೇರಿ ನಗರದಲ್ಲಿ ಸಂಚರಿಸುವ ವಿವಿಧ ಮಾದರಿಯ ಟ್ಯಾಕ್ಸಿ, ಕ್ಯಾಬ್‌ಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿ ಬುಧವಾರ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗರಿಷ್ಠ ದರವನ್ನು ಹೆಚ್ಚಳ ಮಾಡಿದೆ.

ಕಾರುಗಳ ಮಾರಾಟ ಬೆಲೆಗಳನ್ನು ಆಧರಿಸಿ ಟ್ಯಾಕ್ಸಿ ಸೇವೆಗಳ ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿ.ಮೀ.ದರವನ್ನು ಸೂಚಿಸಿರುವ ಸರ್ಕಾರ, ಅಧಿಕ ಬೆಲೆಯ ವಾಹನಗಳನ್ನು “ಎ’ ವರ್ಗಕ್ಕೆ ಹಾಗೂ ಕಡಿಮೆ ಬೆಲೆ ವಾಹನಗಳನ್ನು “ಡಿ’ ವರ್ಗಕ್ಕೆ ಸೇರಿಸಿ ಒಟ್ಟು, ನಾಲ್ಕು ವರ್ಗಗಳಲ್ಲಿ (ಎ, ಬಿ, ಸಿ, ಡಿ) ವರ್ಗೀಕರಿಸಿ ದರ ನಿಗದಿಪಡಿಸಿದೆ. ಈ ಪೈಕಿ “ಡಿ’ ವರ್ಗದಲ್ಲಿ ಬರುವ ಟಾಟಾ ಇಂಡಿಕಾ, ಮಾರುತಿ ಅಲ್ಟೊ ಮಾದರಿಯ ಕಾರುಗಳಿಗೆ 4 ಕಿ.ಮೀ.ಗೆ ಕನಿಷ್ಠ 44 ರೂ. ನಿಗದಿಪಡಿಸಲಾಗಿದೆ. ಅಂದರೆ, ಟ್ಯಾಕ್ಸಿಯನ್ನು ಹತ್ತಿ ಇಳಿದರೆ ಪ್ರಯಾಣಿಕರು 44 ರೂ. ತೆರಲೇಬೇಕು. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.

4 ಕಿ.ಮೀ. ನಂತರ ಹೇಗೆ?: ಕನಿಷ್ಠ ದೂರ ಕ್ರಮಿಸಿದ ನಂತರ, ಆಯಾ ವಾಹನದ ವರ್ಗವನ್ನು ಆಧರಿಸಿ ಕನಿಷ್ಠ ಹಗೂ ಗರಿಷ್ಠ ದರ ನಿಗದಿ ಮಾಡಲಾಗಿದೆ. “ಡಿ’ ವರ್ಗದ (5 ಲಕ್ಷ ರೂ. ವರೆಗಿನ) ವಾಹನಗಳಿಗೆ ಪ್ರತಿ ಕಿ.ಮೀ.ಗೆ ಕನಿಷ್ಠ 11 ರೂ. ಹಾಗೂ ಗರಿಷ್ಠ 22 ರೂ. ನಿಗದಿಪಡಿಸಲಾಗಿದೆ. “ಸಿ’ ವರ್ಗದ (5ರಿಂದ 10 ಲಕ್ಷ ರೂ. ಒಳಗಿನ) ವಾಹನಗಳಿಗೆ ಕನಿಷ್ಠ 12 ಮತ್ತು ಗರಿಷ್ಠ 24 ರೂ., “ಬಿ’ ವರ್ಗದ (10ರಿಂದ 16 ಲಕ್ಷ ರೂ.) ವಾಹನಗಳಿಗೆ ಕನಿಷ್ಠ 16 ಹಾಗೂ ಗರಿಷ್ಠ 34 ರೂ. ಮತ್ತು “ಎ’ ವರ್ಗದ (16 ಲಕ್ಷ ಮೇಲ್ಪಟ್ಟ) ವಾಹನಗಳಿಗೆ ಕನಿಷ್ಠ 20 ರೂ. ಹಾಗೂ ಗರಿಷ್ಠ 45 ರೂ. ನಿಗದಿಪಡಿಸಲಾಗಿದೆ. “ಕರ್ನಾಟಕ ಆನ್‌ ಡಿಮ್ಯಾಂಡ್‌ ಟ್ರಾನ್ಸ್‌ಪೊರ್ಟೆಷನ್‌ ಟೆಕ್ನಾಲಜಿ ಅಗ್ರಿಗೇಟರ್‌ ರೂಲ್ಸ್‌-2016′ ಅಡಿ ನಗರದ 25 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಸಿಟಿ ಟ್ಯಾಕ್ಸಿಗಳಿಗೆ ಈ ದರ ಅನ್ವಯ ಆಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ದರ ಪಾಲನೆಗೆ ಇಲಾಖೆ ಬಳಿಯಿಲ್ಲ ವ್ಯವಸ್ಥೆ: ಆದರೆ, ನಿಗದಿಪಡಿಸಿದ ಈ ದರಗಳ ಪಾಲನೆಗೆ ಸಂಬಂಧಿಸಿದಂತೆ ನಿಗಾ ವಹಿಸಲು ಸಾರಿಗೆ ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ. ಕೇವಲ ಪ್ರಯಾಣಿಕರ ದೂರು ಆಧರಿಸಿ ಅಥವಾ
ಮ್ಯಾನ್ಯುವಲ್‌ ಆಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ನಗರದಲ್ಲಿ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲಿಕ್ಕೂ ಸಾರಿಗೆ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕೇಂದ್ರದ ನೀತಿ ಆಯೋಗ ಕೂಡ ಈ ದರ ನಿಗದಿ ಪಾಲನೆ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

ಸಾಮಾನ್ಯವಾಗಿ ಬಿಎಂಟಿಸಿ ಬಸ್‌ನಲ್ಲಿ 4 ಕಿ.ಮೀ.ಗೆ ಒಬ್ಬ ಪ್ರಯಾಣಿಕರಿಗೆ 10 ರೂ. ಆಗುತ್ತದೆ. ನಾಲ್ಕು ಜನರಿಗೆ ಇದನ್ನು ಲೆಕ್ಕಹಾಕಿದರೆ, 40 ರೂ. ಆಗುತ್ತದೆ. ಇಷ್ಟೇ ದೂರವನ್ನು ಮೆಟ್ರೋದಲ್ಲಿ ಕ್ರಮಿಸಿದರೆ ಕೇವಲ 8 ರೂ. ಆಗಲಿದ್ದು, ನಾಲ್ವರಿಗೆ 32 ರೂ. ತಗಲುತ್ತದೆ. ಆದರೆ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ 44 ರೂ. ಜತೆಗೆ ಕಾಯುವಿಕೆ ದರವೂ ಸೇರ್ಪಡೆ ಆಗುತ್ತದೆ. ಈ ಟ್ಯಾಕ್ಸಿಗಳ ದರ ಏರಿಕೆ ಹಿಂದಿನ ಉದ್ದೇಶ ಸಾರ್ವಜನಿಕ ಸಾರಿಗೆಯನ್ನ ಪ್ರೋತ್ಸಾಹಿಸುವುದಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಹಿಂದೆ ಪ್ರತಿ ಕಿ.ಮೀ.ಗೆ 5 ಇತ್ತು!: ಈ ಹಿಂದೆ ಪ್ರತಿ ಕಿ.ಮೀ.ಗೆ ಎಸಿ ವ್ಯವಸ್ಥೆ ಇಲ್ಲದ ಕ್ಯಾಬ್‌ನಲ್ಲಿ ಒಂದು ಕಿ.ಮೀ.ಗೆ ಗರಿಷ್ಠ 14.5 ರೂ. ಹಾಗೂ ಎಸಿ ಕ್ಯಾಬ್‌ ಗಳಲ್ಲಿ ಒಂದು ಕಿ.ಮೀಗೆ ಗರಿಷ್ಠ 19.5 ರೂ. ದರವಿತ್ತು. ಕೆಲವೊಮ್ಮೆ ಗ್ರಾಹಕರು ಕಿ.ಮೀ. ಒಂದಕ್ಕೆ ಕೇವಲ 5 ರೂ. ನೀಡಿ ಪ್ರಯಾಣಿಸುತ್ತಿದ್ದರು.

ಅಂದರೆ, ಈಗ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಕ್ಯಾಬ್‌, ಟ್ಯಾಕ್ಸಿ ಸೇವೆ ಲಭ್ಯವಾಗುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಲಾಭವಾದರೂ ಓಲಾ ಮತ್ತು ಉಬರ್‌ ರೀತಿಯ ಅಗ್ರಿಗೇಟರ್‌ಗಳೊಂದಿಗೆ ವಹನ ಜೋಡಣೆ ಮಾಡಿಕೊಂಡ ಚಾಲಕರಿಗೆ ನಷ್ಟವಾಗುತ್ತಿತ್ತು. ಪ್ರಸ್ತುತ ಸರ್ಕಾರದ ಈ ನಿರ್ಧಾರವನ್ನು ಅಗ್ರಿಗೇಟರ್‌ಗಳು ಕೂಡ ಸ್ವಾಗತಿಸಿವೆ. “ಇದೊಂದು ಸ್ವಾಗತಾರ್ಹ ನಿರ್ಧಾರ.

ಇದರಿಂದ ಸಾವಿರಾರು ಚಾಲಕರ ಆದಾಯ ಹೆಚ್ಚಳವಾಗಲಿದೆ. ಆ ಮೂಲಕ ಅವರ ಜೀವನಮಟ್ಟ ಕೂಡ ಸುಧಾರಿಸಲಿದೆ. ಜತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ. ಸರ್ಕಾರ ನಿಗದಿಪಡಿಸಿದ ಹೊಸ ದರವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ,’ ಎಂದು ಉಬರ್‌ ಇಂಡಿಯಾ (ದಕ್ಷಿಣ) ಪ್ರಧಾನ ವ್ಯವಸ್ಥಾಪಕ ಕ್ರಿಸ್ಟಿಯನ್‌ ಪ್ರೀಸ್‌ ತಿಳಿಸಿದ್ದಾರೆ. 

ಕ್ಯಾಬ್‌ ಕಂಪನಿಗಳಿಗಿರುವ ಅವಕಾಶ-ನಿರ್ಬಂಧಗಳು „ ಅಗ್ರಿಗೇಟರ್ ಪ್ರವೇಶ ಶುಲ್ಕ ಅಥವಾ ಟೋಲ್‌ ಶುಲ್ಕವನ್ನು
ಪ್ರಯಾಣಿಕರಿಂದ ಪಡೆಯಲು ಅವಕಾಶ ಇರಲಿದೆ „ ಸಮಯದ ಆಧಾರದಲ್ಲಿ (ಪೀಕ್‌ ಹವರ್‌) ದರಗಳನ್ನು ವಿಧಿಸುವಂತಿಲ್ಲ „ ಮೊದಲ 20 ನಿಮಿಷ ಕಾಯುವಿಕೆ ಶುಲ್ಕ (ವೇಯಿರಿಂಗ್‌ ಚಾರ್ಜ್‌) ಇರುವುದಿಲ್ಲ „ ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ವೇಯಿರಿಂಗ್‌ ಚಾರ್ಜ್‌ ಪಡೆಯಬಹುದು ನಿಗದಿತ ದರದ ಹೊರತು ಅನಧಿಕೃತವಾಗಿ ಯಾವುದೇ ದರ, ಶುಲ್ಕ ಪಡೆಯುವಂತಿಲ್ಲ.

ಟಾಪ್ ನ್ಯೂಸ್

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.