ದುಡ್ಡನ್ನು ಡಬಲ್ ಮಾಡೋ ಮ್ಯಾಜಿಕ್
Team Udayavani, Jan 11, 2018, 1:39 PM IST
ಅಪ್ಪ- ಅಮ್ಮ ಕೊಟ್ಟಿದ್ದರಲ್ಲಿ ಐದೋ-ಹತ್ತೋ ರೂಪಾಯಿ ಉಳಿಸಿ ಪಿಗ್ಗಿ ಬ್ಯಾಂಕ್‌ನಲ್ಲಿ ಕೂಡಿಡುತ್ತೀರಿ. ಅದು ತುಂಬಿದ ಮೇಲೆ ಗೊಂಬೆ, ಆಟಿಕೆ, ಚಾಕ್ಲೇಟ್ ಹೀಗೆ ಏನೇನೋ ತಗೋಬೇಕು ಅಂತ ಮನಸಲ್ಲೇ ಲೆಕ್ಕ ಹಾಕ್ತೀರಿ. ಆಗೆಲ್ಲ, ದುಡ್ಡನ್ನು ಡಬಲ್ ಮಾಡೋ ಮಂತ್ರ ಗೊತ್ತಿದ್ದರೆ ಚೆನ್ನ ಅನಿಸುತ್ತೆ ಅಲ್ವಾ? ಅಂಥದ್ದೊಂದು ಮ್ಯಾಜಿಕ್ ಇಲ್ಲಿದೆ. ಇದನ್ನು ಕಲಿತರೆ, ಒಂದು ನಾಣ್ಯದಿಂದ ಎರಡು ನಾಣ್ಯಗಳನ್ನು ಸೃಷ್ಟಿಸಿ ಗೆಳೆಯರ ಮುಂದೆ ಮಿಂಚಬಹುದು.
ಬೇಕಾಗುವ ವಸ್ತು: ಒಂದು ಸಣ್ಣ ನಾಣ್ಯ (ಹೊಸ 1. ರೂ. ನಾಣ್ಯ), 2 ದೊಡ್ಡ ನಾಣ್ಯಗಳು (ಹಳೆ 2 ರೂ. ನಾಣ್ಯ)
ಪ್ರದರ್ಶನ: ಜಾದೂಗಾರನ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯೆ ಒಂದು ನಾಣ್ಯ ಇರುತ್ತದೆ. ಆತ ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ತನ್ನ ಮಂತ್ರದಂಡವನ್ನು ನಾಣ್ಯದ ಸುತ್ತ ತಿರುಗಿಸಿ, ಇನ್ನೊಂದು ಕೈನ ಹೆಬ್ಬೆರಳನ್ನು ಹತ್ತಿರ ತೆಗೆದುಕೊಂಡು ಬಂದು, ಕೈ ಬಿಡಿಸುತ್ತಾನೆ. ಏನಾಶ್ಚರ್ಯ! ಜಾದೂಗಾರನ ಅಂಗೈಯಲ್ಲಿ ಎರಡು ನಾಣ್ಯಗಳಿವೆ.
ತಯಾರಿ: ಇದೊಂದು ಕೈ ಚಳಕ ಮತ್ತು ಕಣRಟ್ಟಿನ ಜಾದೂ. ಚೂರು ಯಾಮಾರಿದರೂ ನಿಮ್ಮ ಮ್ಯಾಜಿಕ್ ಶೋ ಫ್ಲಾಪ್ ಆಗುತ್ತೆ. ಯಾಕೆ ಗೊತ್ತಾ? ನಿಜವಾಗಿಯೂ ನಿಮ್ಮ ಕೈಯಲ್ಲಿರೋದು ಒಂದಲ್ಲ, ಮೂರು ನಾಣ್ಯಗಳು. ಒಂದು ಸಣ್ಣ ನಾಣ್ಯ, ಎರಡು ದೊಡ್ಡ ನಾಣ್ಯಗಳು.
ಮೊದಲು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯೆ ಎರಡು ದೊಡ್ಡ ನಾಣ್ಯಗಳನ್ನು ಅಡ್ಡವಾಗಿ (ಮಲಗಿಸಿ) ಹಿಡಿದುಕೊಳ್ಳಿ. ಆ ನಾಣ್ಯಗಳು ನೋಡುಗರಿಗೆ ಕಾಣಿಸದಂತೆ ಸಣ್ಣ ನಾಣ್ಯವನ್ನು ಉದ್ದಕ್ಕೆ ಹಿಡಿಯಿರಿ. ಪ್ರೇಕ್ಷಕರಿಗೆ ಸಣ್ಣ ನಾಣ್ಯ ಮಾತ್ರ ಕಾಣಿಸುತ್ತಿರುತ್ತಿದೆ. ನಂತರ ಮಂತ್ರದಂಡ ಹಿಡಿದು ಮ್ಯಾಜಿಕ್ ಮಾಡುವವರಂತೆ ನಟಿಸುತ್ತಾ, ನಿಧಾನಕ್ಕೆ ಇನ್ನೊಂದು ಕೈನ ಹೆಬ್ಬೆರಳಿನಿಂದ ಸಣ್ಣ ನಾಣ್ಯವನ್ನು ಅಂಗೈಗೆ ತಳ್ಳಿ, ಎರಡು ನಾಣ್ಯಗಳನ್ನು ಜನರಿಗೆ ಕಾಣಿಸುವಂತೆ ಮಾಡಿ. ಪ್ರಯೋಗಕ್ಕೂ ಮುನ್ನ, ಕನ್ನಡಿಯ ಮುಂದೆ ನಿಂತು ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡಿ. ಕೈ ಚಳಕದಲ್ಲಿ ಚೂರೇ ಚೂರು ಮಿಸ್ ಆದರೂ ಗುಟ್ಟು ರಟ್ಟಾಗಿ ಬಿಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.