803 ಜನರ ಸಂಕಲ್ಪ , 290 ಯುವಕರು ವರದಕ್ಷಿಣೆ ನಕಾರ
Team Udayavani, Jan 12, 2018, 7:45 AM IST
ಉಡುಪಿ: ಪೇಜಾವರ ಶ್ರೀಗಳ ಪರ್ಯಾಯ ಅವಧಿಯಲ್ಲಿ ಒಟ್ಟು 803 ಜನರು ದುಶ್ಚಟ ಮುಕ್ತರಾಗುವ ಸಂಕಲ್ಪ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಿ ಅದರಲ್ಲಿ ವಿವಿಧ ದುಶ್ಚಟಗಳಿಂದ ಮುಕ್ತರಾಗಲು ಸಂಕಲ್ಪ ಪತ್ರವನ್ನು ಹಾಕಲು ತಿಳಿಸಿದ್ದರು. ಸಂಕಲ್ಪ ಪತ್ರವನ್ನು ಮಠದಿಂದ ಪಡೆದು ಅದರಲ್ಲಿ ತಮಗಿರುವ ದುಶ್ಚಟಗಳನ್ನು ಗುರುತು ಮಾಡಿ ಕೊನೆಯಲ್ಲಿ ಸಹಿ ಮಾಡಬೇಕು. ತಮ್ಮ ಹೆಸರು, ವಿಳಾಸ (ಇಚ್ಛೆಯಿದ್ದಲ್ಲಿ ಮಾತ್ರ)ಬರೆಯಬೇಕೆಂದಿತ್ತು.
ಎರಡು ವರ್ಷಗಳಲ್ಲಿ ಹುಂಡಿಗೆ 803 ಮಂದಿ ತಾವು ದುಶ್ಚಟ ಮುಕ್ತರಾಗುವ ಸಂಕಲ್ಪ$ಮಾಡಿ ಪ್ರತಿಜ್ಞೆ ಮಾಡಿದ್ದಾರೆ. ಅದರ ಹೊರತಾಗಿ ತಮಿಳುನಾಡಿನ ಕಾಲೇಜೊಂದರ 140 ಮಂದಿ ವಿದ್ಯಾರ್ಥಿಗಳೂ ಸೇರಿದಂತೆ 290 ತರುಣರು ತಾವು ವರದಕ್ಷಿಣೆ ಸ್ವೀಕರಿ ಸುವುದಿಲ್ಲ ಎಂದು ಸಂಕಲ್ಪಿಸಿದ್ದಾರೆ. ಇನ್ನು ಕೆಲವು (30ಕ್ಕೂ ಅಧಿಕ) ಪುಟಾಣಿ ಮಕ್ಕಳು ತಮ್ಮ ಹೆತ್ತವರಿಂದ ಈ ಹುಂಡಿಯ ಬಗ್ಗೆ ಮಾಹಿತಿ ಪಡೆದು ಸಂಕಲ್ಪಿಸಿದ್ದಾರೆ. ತಮಗೆ ಹೋಮ್ ವರ್ಕ್ ಮಾಡಲು ಉದಾಸೀನ, ವಿಪರೀತ ಟಿವಿ ನೋಡುವ, ಬೆಳಗ್ಗೆ ತಡವಾಗಿ ಏಳುವ, ಅಪ್ಪಅಮ್ಮನಿಗೆ ಬೈಯುವ, ಪಿಝಾ ತಿನ್ನುವ ಮೊದಲಾದ ಹವ್ಯಾಸಗಳನ್ನು ಹೊಂದಿರುವುದಾಗಿಯೂ ಅವುಗಳಿಂದ ಹೊರ ಬರುವ ಸಂಕಲ್ಪ ಮಾಡಿರುವುದಾಗಿಯೂ ಈ ಮಕ್ಕಳು ಬರೆದುಕೊಂಡಿದ್ದಾರೆ.
ಇನ್ನೂ ತಮಾಷೆಯೆಂದರೆ, ಅನೇಕ ಮಂದಿ ತಮ್ಮ ಯಜಮಾನ ರಿಗೆ ಅಥವಾ ತಮ್ಮ ಮನೆಯಲ್ಲಿ ಕೆಲವರು ದುಶ್ಚಟಗಳನ್ನು ಹೊಂದಿರುವು ದಾಗಿಯೂ ಅದನ್ನು ಬಿಡಲು ತಾವು ಸಂಕಲ್ಪಿಸುವುದಾಗಿಯೂ ಅರಿಕೆ ಮಾಡಿಕೊಂಡಿದ್ದಾರೆ. ಹುಂಡಿಯಲ್ಲಿ ಕನ್ನಡ, ತಮಿಳು, ಇಂಗ್ಲಿಷ್, ತೆಲುಗು, ಮಲಯಾಳ ಮೊದಲಾದ ಭಾಷೆ ಗಳಲ್ಲಿಯೂ ಬರೆದಿದ್ದಾರೆ. ಅಂದರೆ ಹೊರರಾಜ್ಯದ ಮಂದಿಯೂ ದುಶ್ಚಟಗಳಿಂದ ಮುಕ್ತ ರಾಗುವ ಸಂಕಲ್ಪ ಮಾಡಿರುವುದು ತಿಳಿದು ಬರುತ್ತದೆ. ದೇವಸ್ಥಾನಗಳು, ಮಠ ಮಂದಿರಗಳಲ್ಲಿ ಇಂಥ ಪ್ರಯತ್ನ ಮಾಡಿದರೆ ಇನ್ನಷ್ಟು ಯಶಸ್ಸು ಸಿಗಬಹುದು ಎಂಬುದು ಸ್ವಾಮೀಜಿ ಆಶಯವಾಗಿದೆ. ಶ್ರೀಗಳ ಹಿಂದಿನ ಪರ್ಯಾಯದಲ್ಲೂ ಇಂಥ ಪ್ರಯತ್ನ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.