ಕೊಡಲಿ ಮಾಫಿಯಾದಿಂದ ಮರ ಉಳಿಸಿ
Team Udayavani, Jan 12, 2018, 11:41 AM IST
ಮಹದೇವಪುರ: ಕೆಲ ತಿಂಗಳ ಹಿಂದೆ ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ಜಾಹಿರಾತು ಫಲಕಗಳಿಗೆ ಅಡ್ಡಲಾಗಿವೆ ಎಂಬ ಕಾರಣಕ್ಕೆ ಜಾಹಿರಾತು ಮಾಫಿಯಾದವರು ಕಡಿದಿದ್ದ ಮರಗಳು ಮತ್ತೂಮ್ಮೆ ಚಿಗುರಿದ್ದು, ಈಬಾರಿಯಾದರೂ ಅವುಗಳನ್ನು ಉಳಿಸುವಂತೆ ಪರಿಸರ ಪ್ರೇಮಿಗಳು ಪಾಲಿಕೆಗೆ ಆಗ್ರಹಿಸಿದ್ದಾರೆ.
ಔಟರ್ ರಿಂಗ್ ರಸ್ತೆಯ ಮಾರತ್‌ಹಳ್ಳಿ ರಸ್ತೆ ವಿಭಜಕದಲ್ಲಿ ಬೆಳೆಸಲಾಗಿದ್ದ ಮರಗಳು ಜಾಹಿರಾತು ಫಲಕಗಳಿಗೆ ಅಡ್ಡಲಾಗಿವೆ ಎಂದು, ಎರಡು ತಿಂಗಳ ಹಿಂದೆ ಜಾಹಿರಾತು ಮಾಫಿಯಾದವರು ರಾತ್ರೋರಾತ್ರಿ 30 ಮರಗಳನ್ನು ಕತ್ತರಿಸಿ ಹಾಕಿದ್ದರು.
ಇದನ್ನು ತೀವ್ರವಾಗಿ ಖಂಡಿಸಿದ್ದ ಪರಿಸರ ಪ್ರೇಮಿಗಳು, ಮರಗಳನ್ನು ಅಪ್ಪಿಕೊಂಡು ಪ್ರತಿಭಟಿಸಿದ್ದರು. ವೃಕ್ಷ ಪ್ರೇಮಿ ವಿಜಯ್ ನಿಶಾಂತ್, ಸತತ ಎರಡು ತಿಂಗಳ ಕಾಲ ಮರಗಳಿಗೆ ಔಷಧೋಪಚಾರ ಮಾಡಿದ್ದರಿಂದ ಬಹುತೇಕ ಮರಗಳು ಮತ್ತೆ ಚಿಗುರೊಡೆದಿವೆ.
ಸೊಂಪಾಗಿ ಬೆಳೆದು ನಿಂತಿರುವ ಮರಗಳನ್ನು, ಮರಗಳ ಕೊಂಬೆಗಳನ್ನು ಕಡಿಯುವ, ಬೇರುಗಳಿಗೆ ವಿಷ, ಆ್ಯಸಿಡ್ ಹಾಕುವ ದುಷ್ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ಇದುವರೆಗೂ ಯಾವುದೇ ಶಿಕ್ಷೆಯಾಗಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕೂಡಲೆ ಜಾಗೃತರಾಗಿ ಕ್ರಮಕ್ಕೆ ಮುಂದಾಗಬೇಕು ಎಂದು ಪರಿಸರ ಮಂಜುನಾಥ್ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.