‘ಭಾರತೀಯ ಜೀವನ ಮೌಲ್ಯಗಳು’ ಉಪನ್ಯಾಸ ಮಾಲಿಕೆ
Team Udayavani, Jan 12, 2018, 2:31 PM IST
ದರ್ಬೆ: ಪಂಚೇಂದ್ರಿಯಗಳು ಮನಸ್ಸಿನ ಹತೋಟಿಯನ್ನು ಕಳೆದು ಕೊಂಡಾಗ ಪ್ರಪಂಚದಲ್ಲಿರುವ ಭೌತಿಕ ಸುಖಗಳೆಡೆಗೆ ಆಕರ್ಷಿತವಾಗುವುದು ಸರ್ವೇ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಬುದ್ಧಿಯ ಮೂಲಕ ಮನಸ್ಸನ್ನು ಹತೋಟಿಗೆ ತರಲು ಪ್ರಯತ್ನಿಸಬೇಕು ಎಂದು ಬ್ರಹ್ಮಶ್ರೀ ಮಿತ್ತೂರು ಶ್ರೀನಿವಾಸ ಭಟ್ಟ ಹೇಳಿದರು.
ಅವರು ಸಂತ ಫಿಲೋಮಿನಾ ಕಾಲೇಜಿನ ವಜ್ರಮಹೋತ್ಸವ ಮತ್ತು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇದರ ರಜತೋತ್ಸವದ ಅಂಗವಾಗಿ ಪ್ರಾಚೀನ ಭಾರತೀಯ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದೃಷ್ಟಿಯಿಂದ ಆಯೋಜಿಸಲಾದ ಭಾರತೀಯ ಜೀವನ ಮೌಲ್ಯಗಳ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರತಿಭೆ, ಏಕಾಗ್ರತೆ ಅಗತ್ಯ
ಪ್ರಾಚೀನ ಕಾಲದಲ್ಲಿ ಋಷಿಗಳು ತಮ್ಮ ಅತ್ಯದ್ಭುತ ಶ್ರವಣ ಸಾಮರ್ಥ್ಯದಿಂದ ಅಧ್ಯಯನವನ್ನು ಮಾಡುತ್ತಿದ್ದರು. ಇಂದಿನ
ಬದಲಾದ ಕಾಲಘಟ್ಟದಲ್ಲಿ ಪುಸ್ತಕಗಳ ಮೂಲಕ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ. ಅಧ್ಯಯನಕ್ಕೆ ಪ್ರತಿಭೆ ಮತ್ತು ಏಕಾಗ್ರತೆ ಅಗತ್ಯವಾಗಿ ಬೇಕಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಬುದ್ಧಿ ಶಕ್ತಿ ಮತ್ತು ಗ್ರಹಣ ಶಕ್ತಿ ಹೆಚ್ಚಿರುವುದರಿಂದ, ಈ ಸಮಯವು ಅಧ್ಯಯನಕ್ಕೆ ಅತ್ಯಂತ ಸೂಕ್ತವಾದುದು. ಇತರ ಸಮಯದಲ್ಲಿ ಮನಸ್ಸು ವಿಚಲಿತವಾಗಿರುತ್ತದೆ. ಜೀವನದಲ್ಲಿ ಹಿರಿಯರಿಗೆ ಗೌರವವನ್ನು ಕೊಡುವ ಸತ್ ಸಂಪ್ರದಾಯಗಳನ್ನು ಅಳವಡಿಸಿಕೊಂಡಾಗ, ಹಿರಿಯರಲ್ಲಿರುವ ವಿದ್ಯೆಯು ಪ್ರವಾಹದ ರೂಪದಲ್ಲಿ ಹರಿದು ಬರುತ್ತದೆ ಎಂದು ಹೇಳಿದರು.
ಪ್ರಸ್ತಾವನೆಕಾರರಾಗಿ ಭಾಗವಹಿಸಿದ್ದ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬೈಪದವು ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ವೈದಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ಜನರಿಗೆ ತಿಳಿಸುವುದು ಅನಿವಾರ್ಯವಾಗಿದೆ. ಸಂಪ್ರತಿಷ್ಠಾನವು ಪುರಾಣ, ಉಪಪುರಾಣಗಳ ಕುರಿತು ಕರ್ನಾಟಕ, ಕೇರಳ, ತಮಿಳುನಾಡು ಮುಂತಾದೆಡೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇದೀಗ ತನ್ನ ರಜತೋತ್ಸವದ ಸರಣಿ ಮಾಲಿಕೆಯಲ್ಲಿ ಸಂಸ್ಕೃತ ಭಾಷೆಗೆ ಪ್ರೋತ್ಸಾಹ, ಯಕ್ಷಗಾನ -ತಾಳಮದ್ದಳೆಗಳ ಪ್ರದರ್ಶನ, ಅಶಕ್ತರಿಗೆ ಸಹಾಯ, ವೈದ್ಯಕೀಯ ಶಿಬಿರಗಳ ಸಂಯೋಜನೆ ಮೊದಲಾದ ಸಮಾಜಮುಬ್ರಾಹ್ಮೀಖಿ ಕಾರ್ಯಕ್ರಮಗಳನ್ನು ವಿವಿಧೆಡೆಗಳಲ್ಲಿ ಹಮ್ಮಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ತಿರುಮಲೇಶ್ವರ ಭಟ್ಟ ಅವರು ವಿದ್ಯಾರ್ಥಿಗಳಿಗೆ ಭಾರತೀಯ ಜೀವನ ಮೌಲ್ಯಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಸಂಪ್ರತಿಷ್ಠಾನದ ಕೃಷ್ಣಮೂರ್ತಿ ವಿ.ಎಸ್., ಮಿತ್ತೂರು ತಿರುಮಲೇಶ್ವರ ಭಟ್ಟ, ಬಿ. ಎಲ್. ಪಂಪ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ವಿಜಯಕುಮಾರ ಮೊಳೆಯಾರ ಸ್ವಾಗತಿಸಿ, ದಿಲೀಪ್ ಡೆಲ್ಮಂಡ್ ಡಿ’ಸೋಜಾ ವಂದಿಸಿದರು. ಶ್ರೀಹಸ್ತಾ ಜಿ.ಎಂ. ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.