ಹೊಸವರ್ಷದಲ್ಲಿ ಹೊಸ ಸ್ಟೈಲ್‌


Team Udayavani, Jan 12, 2018, 2:55 PM IST

12-44.jpg

ಹೊಸ ವರ್ಷವನ್ನು ಹಳೆ ಬಟ್ಟೆಗಳಿಂದ ಸ್ವಾಗತಿಸುವಿರೇಕೆ? ಹೊಸ ಬಟ್ಟೆ ಧರಿಸಿ, ಹೊಸ ಸ್ಟೈಲ್‌ ಮೂಲಕವೇ ಈ 2018ಕ್ಕೆ ಹೆಜ್ಜೆ ಇಡಿ. ಅಷ್ಟಕ್ಕೂ ಈ ನ್ಯೂಇಯರ್‌ ವೇಳೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಗೊತ್ತೇ?

ಹೊಸ ವರ್ಷ ಬಂದಿದೆ. ಹೊಸ ಹರುಷ ತರುತ್ತಿದೆ. ಹಾಗಿದ್ದಾಗ, ಈ ಜನ್ಮದಲ್ಲಿ ಮುಂದೆ ಎಂದೂ ಉಡಲು ಸಾಧ್ಯವಾಗದ ಹಳೇ ಫ್ಯಾಷನ್‌ನ ಉಡುಪುಗಳನ್ನು ಕಪಾಟಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಾ? ಹಳೇ ಬಟ್ಟೆಗಳನ್ನು ದಾನ ಮಾಡಿ. ಹೊಸ ಬಟ್ಟೆಗಳನ್ನು ಸ್ವಾಗತಿಸಿ. ಇಲ್ಲವೇ ಹಳೇ ಬಟ್ಟೆಯನ್ನು ಎಕ್ಸ್‌ಚೇಂಜ್‌ ಮಾಡಿ, ಹೊಸ ಬಟ್ಟೆ ಕೊಳ್ಳಿ. ಹಾಗೆಂದ ಮಾತ್ರಕ್ಕೆ ವರ್ಷ ಮುಗಿಯುವಷ್ಟರಲ್ಲಿ ದುಡ್ಡನ್ನೆಲ್ಲಾ ಬಟ್ಟೆ ಖರೀದಿಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳಿ ಎಂದಲ್ಲ! ಹೊಸವರ್ಷಕ್ಕೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ. ಹೊಸ ವರ್ಷವನ್ನು ಹೊಸ ಸ್ಟೈಲ್‌ನೊಂದಿಗೆ ಆರಂಭಿಸಿ.

ಹೊಸವರ್ಷದಲ್ಲಿ ಹೊಸಸ್ಟೈಲ್‌
ಬಿಸಿಲು, ಧೂಳು ಅಥವಾ ಚಳಿಯಿಂದ ಕಣ್ಣುಗಳನ್ನು ರಕ್ಷಿಸಲು ನಮ್ಮ ಮುಖಕ್ಕೆ ಒಪ್ಪುವ ಒಳ್ಳೆಯ ಆಕಾರ ಮತ್ತು ಗಾತ್ರದ ಕನ್ನಡಕ ಇಟ್ಟುಕೊಂಡರೆ ಉತ್ತಮ. ತಂಪು ಕನ್ನಡಕ ಕಪ್ಪು ಬಣ್ಣದ್ದೇ ಆಗಬೇಕೆಂದೇನೂ ಇಲ್ಲ. ಕಂದು, ನೀಲಿ, ಗುಲಾಬಿ, ಸ್ವರ್ಣ, ಹೀಗೆ ಬಗೆ ಬಗೆಯ ಆಯ್ಕೆಗಳಿವೆ. ಫ್ಲಿಪ್‌-ಪ್ಲಾಪ್ಸ್‌, ಸ್ಯಾಂಡಲ್ಸ್‌ , ಓಪನ್‌ ಶೂನಂಥ ಪಾದರಕ್ಷೆಗಳು ಇರಲಿ. ಇವು ಪಾಶ್ಚಾತ್ಯ ಮತ್ತು ಭಾರತೀಯ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತವೆ. ಪಾದರಕ್ಷೆಗಳು ನೋಡಲು ಮಾತ್ರವೇ ಅಂದವಿದ್ದು, ತೊಡಲು ಕಷ್ಟ ಎನಿಸಿದರೆ ಅಂಥವನ್ನು ತಿರಸ್ಕರಿಸಿ. ಏಕೆಂದರೆ, ಅಂಥ ಪಾದರಕ್ಷೆಗಳು ಪಾದಗಳಿಗೆ ಗಾಯವನ್ನು ಉಂಟುಮಾಡಬಲ್ಲವು. ಸ್ಟೈಲ್‌ ಜೊತೆ ಕಂಫ‌ರ್ಟ್‌ ಕೂಡ ಮುಖ್ಯ ಎಂಬುದು ನೆನಪಿದ್ದರೆ ಸಾಕು.

ಹೊಸ ವರ್ಷಕ್ಕೆ ಹೊಸ ಸ್ಟೈಲ್‌
ಇನ್ನು ಹೊಸ ವರ್ಷದಾರಂಭ ಪಾರ್ಟಿ, ಪಿಕ್‌ನಿಕ್‌, ಸಮಾರಂಭಗಳು, ಕ್ಯಾಶುವಲ್‌ ಔಟಿಂಗ್‌ ಎಲ್ಲವಕ್ಕೂ ಸೇರಿದಂತೆ ಒಂದು ದಿರಿಸನ್ನು ಮೀಸಲಿಡಿ. ಫ್ಲೋರಲ್‌ (ಹೂವಿನ ಮುದ್ರೆಯುಳ್ಳ) ಫ್ರಿಂಟ್‌ ಇರುವ ಅಥವಾ ಸಾಲಿಡ್‌ ಕಲರ್‌x (ಒಂದೇ ಬಣ್ಣದ) ದಿರಿಸು ಇಟ್ಟುಕೊಳ್ಳಿ. ಫ್ಲೋರಲ್‌, ಅನಿಮಲ್‌ ಪ್ರಿಂಟ್‌ ಮತ್ತು ಸಾಂಪ್ರದಾಯಿಕ ವಿನ್ಯಾಸದ, 3, 4 ಸ್ಕಾಫ್ìಗಳು ಬೋರಿಂಗ್‌ ಬಟ್ಟೆ ತೊಟ್ಟರೂ ನೀವು ಇಂಟೆರೆಸ್ಟಿಂಗ್‌ ಆಗಿ ಕಾಣುವಂತೆ ಮಾಡುತ್ತವೆ!

ಬಿಳಿ ಟಾಪ್‌ ನೀಲಿ ಪ್ಯಾಂಟ್‌
ಬಿಳಿ ಶರ್ಟ್‌ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟ್‌ ಒಳ್ಳೆ ಕಾಂಬಿನೇಷನ್‌. ಆದ್ದರಿಂದ ಉತ್ತಮ ಫಿಟ್‌ ಮತ್ತು ಕಂಫ‌ರ್ಟ್‌ ಇರುವ ಜೀನ್ಸ್‌ ಪ್ಯಾಂಟ್‌ ಕೊಳ್ಳಬಹುದು. ಖಾದಿ ಕುರ್ತಾ, ಚಳಿಗಾಲ, ಬೇಸಿಗೆ, ಎಲ್ಲದರಲ್ಲೂ ಉಪಯುಕ್ತ. ಕುರ್ತಾವನ್ನು ಡೆನಿಮ್‌, ಲೆಗ್ಗಿಂಗ್‌Y, ಪಟಿಯಾಲ ಪ್ಯಾಂಟ್‌, ಪಲಾಝೋ ಅಥವಾ ಲಂಗದ ಮೇಲೂ ಧರಿಸಬಹುದು. ತುಂಬಾ ಬಿಗಿಯಾಗಿರದ, ಸಡಿಲ ಕುರ್ತಾ ತೊಟ್ಟರೆ, ಆರಾಮದಾಯಕವಾಗಿಯೂ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್‌ ಬಹುತೇಕ ಎಲ್ಲ ಟಾಪ್‌ಗ್ಳ ಜೊತೆ ಹೊಂದುತ್ತದೆ. ಆದ್ದರಿಂದ ಕಪ್ಪು ಬಣ್ಣದ ಲೆಗ್ಗಿಂಗ್ಸ್‌, ಹಾರೆಮ್‌ ಅಥವಾ ಚೂಡಿದಾರ್‌ ಪ್ಯಾಂಟ್‌ ಇಟ್ಟುಕೊಳ್ಳಿ. ಗಡಿಬಿಡಿಯಲ್ಲಿ ಹೊರಗಡೆ ಹೋಗುವ ಸಂದರ್ಭದಲ್ಲಿ ದಿರಿಸುಗಳನ್ನು ಮಿಕ್ಸ್‌ಮ್ಯಾಚ್‌ ಮಾಡಲು ಪುರುಸೊತ್ತು ಇಲ್ಲದಿರುವಾಗ, ಕೊನೆ ಕ್ಷಣದಲ್ಲಿ ಟೈಲರ್‌ ಅಂಗಡಿ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅಂಥ ಸಮಯದಲ್ಲಿ ಇವಿಷ್ಟೂ ಉಪಯೋಗಕ್ಕೆ ಬರುತ್ತವೆ.

ಟಾಪ್ ನ್ಯೂಸ್

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.