ಗಾನ-ವ್ಯಾಖ್ಯಾನಕ್ಕೆ ಶತಕದ ಸಂಭ್ರಮ


Team Udayavani, Jan 12, 2018, 3:27 PM IST

12-49.jpg

ಯಕ್ಷಗಾನ ಹಿಂದೂಸ್ಥಾನಿ ಸಂಗೀತದ ಸಮನ್ವಯ ಭಾಗವತ ವಿದ್ವಾನ್‌ ಗಣಪತಿ ಭಟ್‌ ಇವರು ವಿದ್ವಾನ್‌ ಕುಂಭಾಶಿ ಶ್ರೀಪತಿ ಉಪಾಧ್ಯಾಯರ ನಿರ್ದೇಶನದಲ್ಲಿ, ಗಣಪತಿ ಭಟ್‌ ಇವರು ಭಾಗವತರಾಗಿಯೂ,ಶ್ರೀಪತಿ ಉಪಾಧ್ಯಾಯರು ಪ್ರವಚನಕಾರರಾಗಿಯೂ ಭಾಗವಹಿಸುವ ಗಾನ-ವ್ಯಾಖ್ಯಾನ 99 ಪ್ರಯೋಗ ಕಂಡು ಜ.16ರಂದು ಕುಂಭಾಶಿಯ ಹರಿಹರ ಕ್ಷೇತ್ರದಲ್ಲಿ ಶತಕದ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ. ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಈ ಸಂದರ್ಭದಲ್ಲಿ ಗಣಪತಿ ಭಟ್ಟರಿಗೆ “ಯಕ್ಷ ಗಂಧರ್ವ ಕಲಾಸಿರಿ’ ಬಿರುದು ನೀಡಿ ಹರಸಲಿದ್ದಾರೆ.

 ಬಡಗುತಿಟ್ಟಿನ ಅಗ್ರಶ್ರೇಣಿಯ ಭಾಗವತರಲ್ಲಿ ಒಬ್ಬರಾಗಿರುವ ಗಣಪತಿ ಭಟ್ಟರು ಶಾಸ್ತ್ರೀಯ ಸಂಗೀತವನ್ನು ಯಕ್ಷಗಾನದ ಪದ್ಯಗಳಿಗೆ ಅಳವಡಿಸಿ ಹೊಸ ಆವಿಷ್ಕಾರ ಮಾಡಿ ಯಕ್ಷಗಾನದ ಆಳ ವಿಸ್ತಾರವನ್ನು ಹೆಚ್ಚಿಸಿದವರು. ಯಲ್ಲಾಪುರದ ಮಾಗೋಡಿನಲ್ಲಿ ವೆಂಕಟರಮಣ ಭಟ್ಟ ಮತ್ತು ಸರಸ್ವತಿ ಅಮ್ಮನವರ ಪುತ್ರನಾಗಿ ಜನಿಸಿದ ಭಟ್ಟರು ಉಮ್ಮಚ್ಚಿಗೆ ಸಂಸ್ಕೃತ ಶಾಲೆಯಲ್ಲಿ ಯಜುರ್ವೇದದ ಕಾಲೋಚಿತ ಪ್ರಯೋಗ ಮತ್ತು ಪ್ರಾಥಮಿಕ ಸಂಸ್ಕೃತವನ್ನು ಅಧ್ಯಯನ ಮಾಡಿ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಅಲಂಕಾರ ಶಾಸ್ತ್ರದಲ್ಲಿ ಪದವಿ ಪಡೆದರು.ಯಾವುದೇ ಪೂರ್ವಸಿದ್ಧತೆ ಇಲ್ಲದೆ ಗದಾಯುದ್ಧ ಪ್ರಸಂಗದಲ್ಲಿ ಸಂಸ್ಕೃತದಲ್ಲಿ ಹಾಡಿದ ಇವರ ಪ್ರತಿಭೆಯನ್ನು ನೋಡಿದ ಬನ್ನಂಜೆ ಸಂಜೀವ ಸುವರ್ಣರು ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಸೇರಿಸಿದರು.ಅಲ್ಲಿ ಗುರು ನೀಲಾವರ ರಾಮಕೃಷ್ಣಯ್ಯ ಮತ್ತು ಮಹಾಬಲ ಕಾರಂತರಿಂದ ಶಾಸ್ತ್ರೀಯ ಯಕ್ಷಗಾನ ಶಿಕ್ಷಣ ಪಡೆದು ಬಳಿಕ 3 ವರ್ಷ ಅಲ್ಲಿಯೇ ಅಧ್ಯಾಪಕರಾಗಿ ಮತ್ತು ಕಾರಂತರ ಯಕ್ಷರಂಗದಲ್ಲಿ 4 ವರ್ಷ ಭಾಗವತರಾಗಿ ದುಡಿದು ರಷ್ಯಾ, ಅಮೆರಿಕ, ಜಪಾನ್‌,ಜರ್ಮನಿ ಮುಂತಾದ ಕಡೆ ಭಾಗವತಿಕೆಯ ಕಂಪನ್ನು ಹರಡಿಸಿದರು.ಭಾವಕ್ಕೆ ಸರಿಯಾಗಿ ಹಾಡುವ ಇವರ ಪ್ರತಿಭೆಯನ್ನು ನೋಡಿ ಕಾರಂತರೇ ಬೆರಗುಗೊಂಡಿದ್ದರು.ಜತೆಗೆ ಸಂಗೀತ ವಿದ್ವಾಂಸ ಪ್ರೊ|ರಾಜ ಗೋಪಾಲಾಚಾರ್ಯರಲ್ಲಿ ಸಂಗೀತ ಅಭ್ಯಾಸ ಮಾಡಿದರು.ದೈವದತ್ತವಾದ ಸ್ವರಕ್ಕೆ ಸಂಗೀತ ಮತ್ತು ಸಂಸ್ಕೃತದ ಸಂಸ್ಕಾರವೂ ದೊರೆಯಿತು. 

ಕಾಳಿಂಗ ನಾವಡರು ನಿಧನರಾದ ಅನಂತರ ಸಾಲಿಗ್ರಾಮ ಮೇಳದಲ್ಲಿ 5 ವರ್ಷ ಭಾಗವತರಾಗಿ ದುಡಿದರು.ಕವಿ ಮುದ್ದಣ್ಣನ ರತ್ನಾವತಿ ಕಲ್ಯಾಣದಲ್ಲಿ ಕೊಂಡದಕುಳಿಯವರ ಭದ್ರಸೇನ ಮತ್ತು ಯಾಜಿಯವರ ವತ್ಸಾಖ್ಯನಿಗೆ ಇವರ ಭಾಗವತಿಕೆ ಪ್ರೇಕ್ಷಕರನ್ನು ಹುರಿದೆಬ್ಬಿಸುತ್ತಿತ್ತು.ಕೊಂಡದಕುಳಿ ರಾಮಚಂದ್ರ ಹೆಗ್ಡೆಯವರ ಪೂರ್ಣಚಂದ್ರ ಮೇಳದಲ್ಲೂ ಕೆಲಕಾಲ ಇವರ ಸ್ವರ ಮೊಳಗಿತ್ತು.ಶತಾವದಾನಿ ಡಾ|ಗಣೇಶ ನಿರ್ದೇಶನದ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಪ್ರಯೋಗ 1000 ಪ್ರಯೋಗ ಕಾಣುವಲ್ಲಿ , ಅಲ್ಲದೆ ಸ್ತ್ರೀ ಪ್ರಧಾನ ಪಾತ್ರಗಳ ಪ್ರದರ್ಶನದ ಯಶಸ್ಸಿಗೆ ಇವರ ಕೊಡುಗೆ ಇದೆ. 

 ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲಾ ಮಟ್ಟುಗಳನ್ನು ಚೆನ್ನಾಗಿ ಬಲ್ಲ ಭಾಗವತರಲ್ಲಿ ಬಡಗುತಿಟ್ಟಿನಲ್ಲಿ ಗಣಪತಿ ಭಟ್ಟರು ಅಗ್ರಗಣ್ಯರೆಂದರೆ ತಪ್ಪಾಗದು. ಸುಮಾರು 95-100 ರಾಗಗಳಲ್ಲಿ ಹಾಡಬಲ್ಲ ಪಾಂಡಿತ್ಯ ಹೊಂದಿದ್ದರು. ಸತಿ ಸಾವಿತ್ರಿ,ಸುಧನ್ವ ಕಾಳಗ,ಗದಾಯುದ್ಧ, ರತ್ನಾವತಿ ಕಲ್ಯಾಣ,ಹರಿಶ್ಚಂದ್ರ ಮೊದಲಾದ ಹಳೆಯ ಪ್ರಸಂಗವಿರಲಿ ಇತ್ತೀಚಿನ ಕಾಲ್ಪನಿಕ ಪ್ರಸಂಗವೇ ಇರಲಿ ಯಾವುದೇ ಗಿಮಿಕ್ಸ್‌ ಇಲ್ಲದೆ ತನ್ನದೇ œ ಶಾಸ್ತ್ರೀಯ ಶೈಲಿಯಲ್ಲಿ ಹಾಡುವ ಇವರ ಪರಿಶ್ರಮ ಶ್ಲಾಘನೀಯವಾದದ್ದು.ಬಡಗು ಮತ್ತು ತೆಂಕುತಿಟ್ಟಿನ ಮೇರು ಕಲಾವಿದರಿಗೆ ಆದರಣೀಯರಾದ ಇವರ ಸುಮಾರು 50ಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳು ಪ್ರಸಿದ್ಧಿ ಪಡೆದಿವೆ.ಕಾಳಿಂಗ ನಾವಡ ಮತ್ತು ಸುಬ್ರಹ್ಮಣ್ಯ ಧಾರೇಶ್ವರರು ಬೇಹಾಗ್‌ ಬಹುದಾರಿ,ಚಾಂದ್‌ ಹಂಸಾನಂದಿ ಮುಂತಾದ ಅನೇಕ ಹೊಸ ರಾಗಗಳನ್ನು ಪರಿಚಯಿಸಿದರೂ ಸಿಂಧು ಬೈರವಿ,ಶುದ್ದ ಸಾರಂಗ,ಸಾರಂಗ ಕರ್ನಾಟಕಿ ಕೇದಾರ,ಸಾಮ,ಕಲ್ಯಾಣ ವಸಂತಿ,ರಾಗಶ್ರೀ,ಅಮೃತ ವರ್ಷಿಣಿ,ಮಲಯ ಮಾರುತ,ಜೋಗ್‌,ಯಮುನ್‌,ನವ ಭೈರವಿ,ಕೀರವಾಣಿ,ಕುರುಂಜಿ,ಶ್ರೀ ರಾಗ,ರೀತಿಗೌಳ, ಅಭೋಗಿ,ದರ್ಮವತಿ,ಮಾಯಾ ಮಾಳವ ಗೌಳ,ಕರ್ನಾಟಕ ಹಿಂದೋಳ ನೀಲಾಂಬರಿ,ನಳಿನ ಕಾಂತಿ,ಪರಾಳಿ ಮುಂತಾದ ನೂರಕ್ಕೂ ಹೆಚ್ಚಿನ ರಾಗಗಳನ್ನು ಯಕ್ಷಗಾನಕ್ಕೆ ಹೊಂದಿಸಿ ಹೊಸ ವಿದ್ವಾನ್‌ ಶೈಲಿಯನ್ನು ರೂಪಿಸಿದ ಕೀರ್ತಿ ಇವರಿಗಿದೆ.ತೆಂಕುತಿಟ್ಟಿನಲ್ಲಿ ದಾಮೋದರ ಮಂಡೆಚ್ಚರು,ಪದ್ಯಾಣರು,ಅಮ್ಮಣ್ಣಾಯರು, ಕುಬಣೂರು ಶ್ರೀಧರ ರಾಯರು ಈ ಸಾಹಸ ಮಾಡಿದವರಲ್ಲಿ ಪ್ರಮುಖರು.

 ಗಣಪತಿ ಭಟ್ಟರ ಪದ್ಯಗಳು ಏರು ಶ್ರುತಿಗೆ ಮತ್ತು ವೀರ ರಸದ ಪದ್ಯಗಳಿಗೆ ಹೊಂದಿಕೆಯಾಗದು ಎನ್ನುವ ಅಭಿಪ್ರಾಯಗಳು ಕೇಳಿಬಂದರೂ ಸಂಗೀತ ಉಪಕರಣಗಳಲ್ಲೇ ಅತ್ಯಂತ ಮಧುರ ಸ್ವರವನ್ನು ನೀಡುವ ಬಡಗುತಿಟ್ಟಿನ ಏರು ಮದ್ದಳೆ ವಾದನದಲ್ಲಿ ಇವರ ಸ್ವರ ಕರ್ಣಾನಂದವನ್ನು ನೀಡುತ್ತದೆ.ಭೈರವಿ ಅಷ್ಟತಾಳದ ಪದ್ಯವನ್ನು ಛಂದಸ್ಸು ಬದಲಿಸಿ ತ್ರಿವುಡೆ ಏಕ-ಕೋರೆತಾಳದಲ್ಲಿ ನಿಧಾನದಲ್ಲಿ ಇವರು ಹಾಡುವ ಕ್ರಮ ಹಿಮ್ಮೇಳ ಪ್ರಿಯರನ್ನುರಂಜಿಸಿವೆ.ರುಕಾ¾ಂಗದ ಚರಿತ್ರೆಯ “ವರಮನೋಹರ ಲಾಲಿಸು…ಸುಂದರಕಾಯ’ ಮತ್ತು ಸುಭದ್ರ ಕಲ್ಯಾಣದ “ಯಾತಕೇ ಮರುಳಾದಿರಿ ಅಣ್ಣಯ್ಯ’ ಇವೆರಡೇ ಪದ್ಯ ಸಾಕು ಅವರ ಆಳ ವಿಸ್ತೀರ್ಣ ಅರಿಯಲು.ಅನೇಕ ಭಾಗವತರನ್ನು ರೂಪಿಸಿದ ಇವರ ಶಿಷ್ಯರಲ್ಲಿ ಕೆರೆಮನೆ ಮೇಳದ ಅನಂತ ಹೆಗಡೆ,ಗೋಳಿಗರಡಿ ಮೇಳದ ಗೋಡೆ ಪ್ರಸಾದ ಹೆಗಡೆ ಮತ್ತು ಪೆರ್ಡೂರು ಮೇಳದ ಭಾಗವತ ಬ್ರಹೂರು ಶಂಕರ ಭಟ್ಟರು ಪ್ರಮುಖರು.

ಗಾನ-ಆಖ್ಯಾನ: ಇತ್ತೀಚಿನ ದಿನಗಳಲ್ಲಿ ಕುಂಭಾಶಿಯ ವಿದ್ವಾನ್‌ ಶ್ರೀಪತಿ ಉಪಾಧ್ಯಾಯರೊಂದಿಗೆ ಗಾನ-ವ್ಯಾಖ್ಯಾನವೆಂಬ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಇವರು ಅದರಲ್ಲಿ ಗಾಯಕರಾಗಿ ಕಾಣಿಸಿಕೊಳ್ಳುತಿದ್ದಾರೆ.ರಾಷ್ಟ್ರಮಟ್ಟದಲ್ಲಿ ಜೋತಿಷ್ಯ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ,ಜೋತಿಷ್ಯದಲ್ಲಿ ವಿದ್ವಾನ್‌ ಪದವಿ, ದ್ವೆ„ತ ವೇದಾಂತದಲ್ಲಿ ವಿದ್ವತ್‌ ವಾಸ್ತುಕಲ್ಪ ,ಸರ್ವಕಲ್ಪ ಮುಂತಾದ ಕೃತಿ ರಚಿಸಿದ ಉಡುಪಿ ಸಂಸ್ಕೃತ ಕಾಲೇಜಿನ ನಿವ್ರತ್ತ ಪ್ರಾಧ್ಯಾಪಕರಾದ ಕುಂಭಾಶಿ ಶ್ರೀಪತಿ ಉಪಾಧ್ಯಾಯರು ಪ್ರವಚನಕಾರರಾಗಿ ಇವರಿಗೆ ಸಾಥಿ ನೀಡುತಿದ್ದಾರೆ.ಸೀತಾ ಕಲ್ಯಾಣ,ಸುಂದರ ಕಾಂಡ,ವಾಮನ ಚರಿತ್ರೆ, ಗಿರಿಜಾ ಕಲ್ಯಾಣ,ಶನೀಶ್ವರ ಮಹಾತ್ಮೆ, ನರಸಿಂಹಾವತಾರ, ದ್ರೌಪದಿ ಸ್ವಯಂವರ ಮುಂತಾದ ಪ್ರಸಂಗಗಳಿಗೆ ಪ್ರವಚನ ನೀಡಿದ್ದಾರೆ.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.