ಪಡ್ರೆ ಕುಮಾರ ಅವರಿಗೆ ಯಕ್ಷ ಸಿಂಧೂರ ಪ್ರಶಸ್ತಿ
Team Udayavani, Jan 12, 2018, 3:51 PM IST
ಯಕ್ಷಗಾನದಲ್ಲಿ 60 ವರ್ಷ ತಿರುಗಾಟ ಮಾಡಿದ ಹಿರಿಯ ಕಲಾವಿದ,ಕಟೀಲು 3ನೇ ಮೇಳದ ವ್ಯವಸ್ಥಾಪಕ ಪಡ್ರೆ ಕುಮಾರ ಅವರಿಗೆ ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನವು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಈ ಸಾಲಿನ “ಯಕ್ಷ ಸಿಂಧೂರ’ ಪ್ರಶಸ್ತಿಯನ್ನು ಜ.14ರಂದು ಪ್ರದಾನ ಮಾಡಲಿದೆ.ವಿಟ್ಲ ಸಮೀಪದ ಕೊಡಂಗಾಯಿ ಪಡ್ರೆಯವರ ಹುಟ್ಟೂರು.
ಪ್ರಸಿದ್ಧ ಕಲಾವಿದ ಪಡ್ರೆ ಚಂದು ಮತ್ತು ಭಾಗೀರಥಿ ದಂಪತಿಯ ಪುತ್ರರಾಗಿರುವ ಪಡ್ರೆ ಕುಮಾರ ಅಪ್ಪನೊಟ್ಟಿಗೆ ಮೇಳದಲ್ಲಿ ತಿರುಗಾಟ ಆರಂಭಿಸಿದವರು. ತಂದೆಯೇ ಅವರಿಗೆ ಯಕ್ಷಗಾನ ಗುರು. ಅವರಿಂದಲೇ ಪಳಗಿದ ಕುಮಾರ ಬೇರೆ ಕ್ಷೇತ್ರದತ್ತ ಕಣ್ಣು ಹಾಯಿಸಿದ್ದಿಲ್ಲ, ಬೇರೆ ಮೇಳದತ್ತ ತಿರುಗಿದ್ದಿಲ್ಲ.
ಪೀಠಿಕೆ ವೇಷ, ದೇವೇಂದ್ರ, ದೇವಿ ಮಹಾತ್ಮೆಯ ಮಧು ಕೈಟಬ, ಇಂದ್ರಜಿತು-ಮೈರಾವಣ ಕಾಳಗದಲ್ಲಿ ಹನುಮಂತ ಇತ್ಯಾದಿ ಪಾತ್ರಗಳಲ್ಲಿ ಪ್ರಸಿದ್ಧರು. ಕಿರೀಟ ವೇಷದಲ್ಲಿ ಎತ್ತಿದ ಕೈ. ಬಣ್ಣದ ವೇಷ ಹೊರತುಪಡಿಸಿ, ಎಲ್ಲ ಪಾತ್ರಗಳಿಗೂ ಹೊಂದಿಕೆಯಾಗಬಲ್ಲ ಕಲಾವಿದ. ಪಂಚಲಿಂಗೇಶ್ವರ ರಥದ ಗದ್ದೆಯಲ್ಲಿ ಯಕ್ಷಸಿಂಧೂರ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಪಡ್ರೆ ಕುಮಾರ ಅವರಿಗೆ ತನ್ನ ಆಡುಂಬೋಲದಲ್ಲಿ ಯಕ್ಷಗಾನ ಕಿರೀಟಕ್ಕೆ ಸಲ್ಲುತ್ತಿರುವ ಮತ್ತೂಂದು ಗರಿ. ಆ ಮೂಲಕ ಯೋಗ್ಯ ಕಲಾವಿದನಿಗೆ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಯಕ್ಷ ಸಿಂಧೂರ ಪ್ರತಿಷ್ಠಾನಕ್ಕೂ ವಿಶೇಷ ಗೌರವ ಸಲ್ಲಲಿದೆ.
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.