ಗಣತಿ ನಡೆಸಿದ ಗೌರವ ಶಿಕ್ಷಕರಿಗೆ ಸಂಭಾವನೆ ಇನ್ನೂ ಬಂದಿಲ್ಲ !
Team Udayavani, Jan 13, 2018, 6:20 AM IST
ಬೆಳ್ಮಣ್: 2015ರ ಏಪ್ರಿಲ್-ಮೇನಲ್ಲಿ ಸರಕಾರದ ಒತ್ತಾಯ ಮೇರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಏನೋ ನಡೆಯಿತು. ಆದರೆ ಇದರಲ್ಲಿ ಹೆಚ್ಚುವರಿ ಸಹಾಯಕರಾಗಿ ಕಾರ್ಯನಿರ್ವಹಿಸಿದ ಗೌರವ ಶಿಕ್ಷಕಿಯರಿಗೆ ಸಂಭಾವನೆಯೇ ಬಂದಿಲ್ಲ! ಗಣತಿ ನಡೆದು ಎರಡೂ ವರೆ ವರ್ಷವಾದರೂ ಕಾರ್ಕಳ ತಾಲೂಕಿನ 18 ಮಂದಿಗೆ ನಯಾಪೈಸೆ ಸಂಭಾವನೆ ನೀಡಿಲ್ಲ. ಇದು ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಪತ್ರಕರ್ತ ಶಿಕ್ಷಕನ ಮನವಿ
ಸಂಭಾವನೆಗೆ ಇಲಾಖೆಗಳಿಗೆ ಪತ್ರ, ಮನವಿ ಇತ್ಯಾದಿ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ 2016ರ ಡಿ.31ರಂದು ಸಮಾಜ ಕಲ್ಯಾಣ ಸಚಿವ ಸಚಿವ ಎಚ್. ಆಂಜನೇಯ ಅವರಿಗೆ ಉಡುಪಿಯಲ್ಲಿ ಮನವಿ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿ, ಸಂಬಂಧಿಸಿದ ಕಚೇರಿ ಮುಖ್ಯಸ್ಥರ ಫೋನ್ ನಂಬರ್ ನೀಡಿದ್ದರು. ಆದರೂ ಈ ಬಗ್ಗೆ ಕೇಳಿದಾಗೆಲ್ಲ ಜಾರಿಕೊಳ್ಳುವ ಉತ್ತರಗಳೇ ಬರುತ್ತಿವೆ.
ಪಾವತಿಸಬೇಕಾದ್ದು ಎಷ್ಟು?
18 ಗಣತಿಗಾರರಿಗೆ ಪಾವತಿಯಾಗಬೇಕಾದ್ದರಲ್ಲಿ ಲಕ್ಷಗಟ್ಟಲೆ ಮೊತ್ತವೇನೂ ಇಲ್ಲ. ತಲಾ 5500 ರೂ.ಗಳತೆ 99 ಸಾವಿರ ರೂ. ಮಾತ್ರ. ಲಕ್ಷ , ಕೋಟಿ ಲೆಕ್ಕದಲ್ಲೇ ಮಾತನಾಡುವ ಸರಕಾರ, ಈ ಮೊತ್ತವನ್ನೂ ನೀಡಲು ತಿಣುಕಾಡುತ್ತಿದೆ.
ವರ್ಷ ಕಳೆದರೂ ಬಾರದ ಸಂಭಾವನೆ
ಕಾರ್ಕಳ ತಹಶೀಲ್ದಾರ್ ಆದೇಶ (ನಂ.ಸಿಎನ್‌ಎಸ್‌ಸಿಆರ್ 01/2014-15, ದಿನಾಂಕ 10-04-2015)ರ ಪ್ರಕಾರ ಗಣತಿ ಕಾರ್ಯಕ್ಕೆ ಮೀಸಲು ಸಿಬಂದಿಯಾಗಿ ಆಯಾ ಪ್ರದೇಶದ ಶಾಲೆಗಳ ಗೌರವ ಶಿಕ್ಷಕಿಯರನ್ನು ನೇಮಕ ಮಾಡಲಾಗಿತ್ತು. ತರಬೇತಿ ವೇಳೆ ತಹಶೀಲ್ದಾರ್ ಮತ್ತು ನೋಡಲ್ ಅಧಿಕಾರಿಗಳು ಸಾಮಾನ್ಯ ಗಣತಿದಾರರಿಗೆ ನೀಡುವಷ್ಟೇ ಗೌರವ ಸಂಭಾವನೆ ನೀಡುವುದಾಗಿ ಹೇಳಿದ್ದರು. ಇತರ ಎಲ್ಲರಿಗೂ ಒಂದೆರಡು ತಿಂಗಳಲ್ಲಿ ಗೌರವಧನ ಹಾಗೂ ಹೆಚ್ಚುವರಿ ರಜೆ ಸೌಲಭ್ಯವನ್ನು ಇಲಾಖೆ ನೀಡಿತ್ತು. ಆದರೆ ಅವರೊಂದಿಗೇ ಕೆಲಸ ಮಾಡಿದ 18 ಶಿಕ್ಷಕಿಯರಿಗೆ ವರ್ಷ ಕಳೆದರೂ ಸಂಭಾವನೆ ನೀಡಲಾಗಿಲ್ಲ.
ಕನಸಿನ ಮಾತು!
ಗಣತಿ ಮಾಡಿದ ಗೌರವ ಶಿಕ್ಷಕಿಯರಿಗೆ ಗೌರವ ಧನ ಲಭಿಸುವ ಲಕ್ಷಣ ಕ್ಷೀಣವಾಗಿದೆ. ಜನಪ್ರತಿನಿಧಿಗಳೂ ಚುನಾವಣೆ ಕಸರತ್ತಿನಲ್ಲೇ ಈಗ ಬ್ಯುಸಿಯಾಗುತ್ತಿರುವುದರಿಂದ ಅವರಿಂದ ನ್ಯಾಯಸಿಗುವುದು ಕನಸಿನ ಮಾತಾಗಿದೆ.
– ಪುಂಡಲೀಕ ಮರಾಠೆ,
ನಿವೃತ್ತ ಶಿಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Brahmavar: ಲಾಕ್‌ಅಪ್ ಡೆತ್; ಕೇರಳ ಸಿಎಂಗೆ ದೂರು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ
Bengaluru: ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ
Udupi: ಬಾಂಗ್ಲಾದಲ್ಲಿ ಇಸ್ಕಾನ್ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.