ಅರ್ಜಿ ವಿಚಾರಣೆ ಮುಂದಕ್ಕೆ
Team Udayavani, Jan 13, 2018, 9:16 AM IST
ಹೊಸದಿಲ್ಲಿ: ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಶುಕ್ರವಾರದ ವಿಚಾರಣೆ ವೇಳೆ, ಮನವಿ ಸಲ್ಲಿಸಿದ್ದ ಪಂಕಜ್ ಫಡ್ನಿಸ್ ಅವರಿಗೆ ಸೂಚನೆ ನೀಡಿದ ನ್ಯಾಯಮೂರ್ತಿ ಎಸ್. ಎ. ಬೋರ್ಡೆ, ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಅಮಿಕಸ್ ಕ್ಯೂರಿ ಕೈಗೊಂಡಿರುವ ನಿರ್ಧಾರಕ್ಕೆ ಸ್ಪಂದಿಸುವಂತೆ ಸಲಹೆ ನೀಡಿದ್ದಾರೆ. ನ್ಯಾಯಾಲಯ ಅರ್ಜಿದಾರರಿಗೆ ಉತ್ತರಿಸಲು 1 ತಿಂಗಳ ಕಾಲಾವಕಾಶ ನೀಡಿದೆ.
ಈ ಹಿಂದೆಯೇ ಪಂಕಜ್ ಫಡ್ನಿಸ್ ಸಲ್ಲಿಸಿದ್ದ ಮೇಲ್ಮನವಿಯನ್ವಯ ಅಮಿಕಸ್ ಕ್ಯೂರಿಯಾಗಿ ನೇಮಕವಾಗಿದ್ದ ಹಿರಿಯ ವಕೀಲ ಅಮರೇಂದ್ರ ಶರಣ್ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ಅಗತ್ಯವಿಲ್ಲ ಎಂದು.9ರಂದು ವರದಿ ಸಲ್ಲಿಸಿದ್ದರು.
ಇನ್ನು° ಶುಕ್ರವಾರದ ವಿಚಾರಣೆ ವೇಳೆ ಪ್ರಕರಣದಲ್ಲಿ ಇಲ್ಲಸಲ್ಲದ ವಿಚಾರಗಳು ತೂರಿಕೊಳ್ಳುತ್ತಿವೆ ಎಂದು ನ್ಯಾ| ಬೋರ್ಡೆ ಬೇಸರಿಸಿದರು. “ಗಾಂಧೀಜಿಯವರು ಮಹಾನ್ ವ್ಯಕ್ತಿ ಎಂಬ ಕಾರಣಕ್ಕಾಗಿಯೇ ಈ ಪ್ರಕರಣದಲ್ಲಿ ಇಲ್ಲಸಲ್ಲದ ವಿಚಾರಗಳು ಬೆರೆತು ಹೋಗಿ ಪ್ರಕರಣವನ್ನು ಗೊಂದಲಮಯವನ್ನಾಗಿಸಲಾಗಿದೆ. ಆದರೆ, ನ್ಯಾಯಾಲಯವು ಹತ್ಯೆಯಾದ ವ್ಯಕ್ತಿಯ ವ್ಯಕ್ತಿತ್ವ, ಪ್ರಭಾವಕ್ಕೆ ಒಳಗಾಗದೇ ಕಾನೂನಿನ ಚೌಕಟ್ಟಿನಲ್ಲಿ ವಿಚಾರಣೆ ನಡೆಸಲಿದೆ” ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.