ಕೆಎಸ್‌ಆರ್‌ಟಿಸಿ ಬಸ್‌ ಆ್ಯಂಬುಲೆನ್ಸ್‌!


Team Udayavani, Jan 13, 2018, 11:51 AM IST

ksrtc-bus.jpg

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಗುಜರಿ ಬಸ್‌ಗಳು ಮುಂದಿನ ದಿನಗಳಲ್ಲಿ ಆಂಬ್ಯುಲನ್ಸ್‌ಗಳಾಗಿ ರಸ್ತೆಗಿಳಿಯಲಿವೆ! ನಿಗದಿತ ದೂರ ಕ್ರಮಿಸಿದ, ಆದರೆ ಈಗಲೂ ಚಾಲ್ತಿಯಲ್ಲಿರುವ (ರನ್ನರ್‌ ಸ್ಕ್ರಾಪ್‌) ಸಾಕಷ್ಟು ಬಸ್‌ಗಳು ಕೆಎಸ್‌ಆರ್‌ಟಿಸಿ ಬಳಿ ಇವೆ.

ಇವುಗಳನ್ನು “ಬಸ್‌ ಆ್ಯಂಬುಲನ್ಸ್‌’ಗಳಾಗಿ ಪರಿವರ್ತಿಸಲು ಸಾಧ್ಯವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಪಘಾತಕ್ಕೀಡಾದ ಗಾಯಾಳುವಿಗೆ “ಗೋಲ್ಡನ್‌ ಅವರ್‌’ನಲ್ಲಿ ಚಿಕಿತ್ಸೆ ನೀಡುವ ಆ್ಯಂಬ್ಯುಲನ್ಸ್‌ ರೂಪದಲ್ಲಿ ಸೇವೆ ಒದಗಿಸಲು ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.

ಬಸ್‌ಗಳಲ್ಲಿ ಸುಸ್ಥಿತಿಯಲ್ಲಿಲ್ಲದ ಮತ್ತು ನಿಗದಿತ ಕಿ.ಮೀ. (9 ಲಕ್ಷ ಕಿ.ಮೀ) ಕ್ರಮಿಸಿ ಚಾಲ್ತಿಯಲ್ಲಿರುವ ಗುಜರಿ ಬಸ್‌ಗಳು ಎಂದು ಎರಡು ಪ್ರಕಾರಗಳಿವೆ. ಈ ಪೈಕಿ ಸುಸ್ಥಿಯಲ್ಲಿಲ್ಲದ ಬಸ್‌ಗಳಲ್ಲಿರುವ ಬಿಡಿ ಭಾಗಗಳನ್ನು ತೆಗೆದುಕೊಳ್ಳಲಾಗುತ್ತದೆ. ಇವು ಸಂಪೂರ್ಣ ನಿಷ್ಪ್ರಯೋಜಕ ಆಗುತ್ತವೆ.

9 ಲಕ್ಷ ಕಿ.ಮೀ ಓಡಿರುವ ಬಸ್‌ಗಳು ಇನ್ನೂ ನಾಲ್ಕೈದು ಲಕ್ಷ ಕಿ.ಮೀ ಓಡುವ ಸಾಮರ್ಥ್ಯ ಹೊಂದಿರುತ್ತವೆ. ಅಂತಹ ನಾಲ್ಕು ಬಸ್‌ಗಳನ್ನು ಪರಿವರ್ತನೆ ಮಾಡಿ, ನಗರದಲ್ಲಿ ಬಸ್‌ ಆ್ಯಂಬುಲೆನ್ಸ್‌ ಪರಿಚಯಿಸಲು ಮುಂದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತನೆ ಇದೆ; ಎಂಡಿ ಸ್ಪಷ್ಟನೆ: ನಿಗದಿತ ಕಿ.ಮೀ ಕ್ರಮಿಸಿ ಚಾಲ್ತಿಯಲ್ಲಿರುವ ಬಸ್‌ಗಳನ್ನು ಮಾರಾಟ ಮಾಡಿದರೆ, ಕೆಎಸ್‌ಆರ್‌ಟಿಸಿಗೆ ಹೆಚ್ಚೆಂದರೆ ಮೂರು ಲಕ್ಷ ರೂ. ಸಿಗುತ್ತದೆ. ಪ್ರಸ್ತುತ ಈ ಮಾದರಿಯ ಬಸ್‌ಗಳನ್ನು ಶಾಲೆಗಳಿಗೆ ನೀಡಲಾಗುತ್ತಿದೆ.

ಆದರೆ, ಇದೇ ಬಸ್‌ಗಳನ್ನು ಆ್ಯಂಬುಲನ್ಸ್‌ಗಳನ್ನಾಗಿ ಪರಿವರ್ತಿಸಲು ಕೆಎಸ್‌ಆರ್‌ಟಿಸಿಯಲ್ಲಿರುವ “ರನ್ನರ್‌ ಸ್ಕ್ರಾéಪ್‌’ ಬಸ್‌ಗಳನ್ನು ಬಳಸಿಕೊಳ್ಳಲು ಚಿಂತನೆ ನಡೆದಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ “ಉದಯವಾಣಿ’ಗೆ ತಿಳಿಸಿದ್ದಾರೆ. 

ರನ್ನರ್‌ ಸ್ಕ್ರಾಪ್‌ ಬಸ್ಸೇ ಯಾಕೆ?: ಸಾಮಾನ್ಯವಾಗಿ ಒಂದು ಬಸ್‌ನ ಬೆಲೆ 22ರಿಂದ 23 ಲಕ್ಷ ರೂ. ಆಗುತ್ತದೆ. ಈ ಬಸ್‌ಗಳು ವರ್ಷಕ್ಕೆ ಒಂದು ಲಕ್ಷ ಕಿ.ಮೀ. ಕ್ರಮಿಸುತ್ತವೆ. ಇಂತಹ ಬಸ್‌ಗಳನ್ನು ಜಿಲ್ಲೆಗೊಂದು ನೀಡುವುದಾದರೆ, ಸಾಕಷ್ಟು ನಷ್ಟವಾಗುತ್ತದೆ.

ಅಷ್ಟಕ್ಕೂ ಆ್ಯಂಬುಲನ್ಸ್‌ಗಳು ಲಕ್ಷ ಕಿ.ಮೀ.ಗಟ್ಟಲೆ ಸಂಚರಿಸುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ನಿಗದಿತ ರನ್ನರ್‌ ಸ್ಕ್ರಾಪ್‌ ಬಸ್‌ಗಳನ್ನು ಬಳಸುವ ಆಲೋಚನೆ ಮಾಡಲಾಗಿದೆ. “ಗೋಲ್ಡನ್‌ ಅವರ್‌’ ಟ್ರಸ್ಟ್‌ ನಗರದಲ್ಲೇ ನಾಲ್ಕು ಬಸ್‌ಗಳಿಗೆ ಬೇಡಿಕೆ ಇಟ್ಟಿದೆ ಎಂದೂ ಅವರು ಹೇಳಿದರು. 

ಬಸ್‌ಗಳನ್ನು ಆ್ಯಂಬುಲನ್ಸ್‌ಗಳನ್ನಾಗಿ ಮಾರ್ಪಡಿಸಲು ಅವಕಾಶ ಇದೆ. ಈ ಮಾರ್ಪಾಡಿಗೆ ಸುಮಾರು 3ರಿಂದ 4 ಲಕ್ಷ ರೂ. ಖರ್ಚಾಗಬಹುದು. ಆದರೆ, ಹವಾನಿಯಂತ್ರಿತ ಸೇವೆ ಕಲ್ಪಿಸುವುದು ಕಷ್ಟಸಾಧ್ಯ. ಹೀಗೆ ಬಸ್‌ ಆ್ಯಂಬುಲನ್ಸ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಒಮ್ಮೆಲೆ 20 ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗಳಿಗೆ ಸಾಗಿಸಬಹುದು.

ಎಂಟು ಹಾಸಿಗೆಗಳ ವ್ಯವಸ್ಥೆ ಇದರಲ್ಲಿರುತ್ತದೆ. ಆದರೆ, ಸ್ಟೇಜ್‌ ಕ್ಯಾರೇಜ್‌ ಪರವಾನಗಿ ಇರುವ ಈ ಬಸ್‌ಗಳನ್ನು ಹೀಗೆ ಪರಿವರ್ತನೆ ಮಾಡಿ, ಆಂಬ್ಯುಲನ್ಸ್‌ ರೂಪದಲ್ಲಿ ಬಳಸಲು ಸಾರಿಗೆ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. 

16 ಜಿಲ್ಲೆಗಳು ಸೇರಿ ವಿವಿಧೆಡೆ ಸೇವೆ: ಕೆಎಸ್‌ಆರ್‌ಟಿಸಿ ವ್ಯಾಪ್ತಿಯ 16 ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್‌ ಆ್ಯಂಬುಲೆನ್ಸ್ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು. ಶಾಂತಿನಗರದ ಕೆಎಸ್‌ಆರ್‌ಟಿಸಿ ನಾಲ್ಕನೇ ಘಟಕದಲ್ಲಿ ಶುಕ್ರವಾರ ನೂತನ ಆ್ಯಂಬುಲನ್ಸ್ಗೆ ಚಾಲನೆ ನೀಡಿ ಮಾತನಾಡಿದ ಅವರು,

ಒಂದು ಬಸ್‌ ಆ್ಯಂಬುಲನ್ಸ್ ನಿರ್ವಹಣೆ ಸಂಬಂಧ ಗೋಲ್ಡನ್‌ ಅವರ್‌ ಟ್ರಸ್ಟ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಒಡಂಬಡಿಕೆಯ ಮುಂದುವರಿದ ಭಾಗವಾಗಿ ಇನ್ನಷ್ಟು ಈ ಮಾದರಿಯ ಆ್ಯಂಬುಲನ್ಸ್ಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು. 

ಇದೇ ಸಂದರ್ಭದಲ್ಲಿ 5ರಿಂದ 7 ವರ್ಷಗಳು ಅಪಘಾತರಹಿತ ಬಸ್‌ ಚಾಲನೆ ಮಾಡಿದ 86 ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. 2013-16ನೇ ಸಾಲಿನ ಪುರಸ್ಕೃತರು ಇವರಾಗಿದ್ದಾರೆ. ಗಂಡಭೇರುಂಡ ಚಿಹ್ನೆಯುಳ್ಳ 32 ಗ್ರಾಂ ಬೆಳ್ಳಿ ಪದಕ, 2 ಸಾವಿರ ನಗದು, 50 ರೂ. ಮಾಸಿಕ ಪ್ರೋತ್ಸಾಹಧನ ಇದು ಒಳಗೊಂಡಿದೆ. 

ಸಾವಿನ ಪ್ರಕರಣಗಳಿಗೆ ಕಡಿವಾಣ: ಗೋಲ್ಡನ್‌ ಅವರ್‌ ಟ್ರಸ್ಟ್‌ ಸಹಯೋಗದಲ್ಲಿ ನೂತನ ಬಸ್‌ ಆ್ಯಂಬುಲನ್ಸ್‌ ನಿರ್ವಹಣೆಗೆ ಸಂಬಂಧಿಸಿದಂತೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು. ಇದರಲ್ಲಿ ಗೋಲ್ಡನ್‌ ಅವರ್‌ ಕಿಟ್‌, ವ್ಹೀಲ್‌ ಚೇರ್‌, ಕೈಕಾಲುಗಳು ಸಿಲುಕಿಕೊಂಡರೆ ಕಬ್ಬಿಣದ ವಸ್ತು ಕತ್ತರಿಸಿ ಸಹಾಯ ಮಾಡಲು ಕಟ್ಟರ್‌, ಕೃತಕ ಆಮ್ಲಜನಕ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳು, ನುರಿತ ಶುಶ್ರೂಷಕಿಯರನ್ನು ಕಲ್ಪಿಸಲಾಗಿದೆ.

ಅಷ್ಟೇ ಅಲ್ಲ, ಆನ್‌ಲೈನ್‌ ಮೂಲಕ ಸಲಹೆಗಳನ್ನು ಪಡೆದು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದರಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್‌ಗಳಿಗೂ ಗೋಲ್ಡನ್‌ ಅವರ್‌ ಕಿಟ್‌ ಅಳವಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಜತೆಗೆ 40 ಜನ ಸಿಬ್ಬಂದಿಗೆ ಗೋಲ್ಡನ್‌ ಅವರ್‌ ಟ್ರಸ್ಟ್‌ನಿಂದ ಪ್ರಥಮ ಚಿಕಿತ್ಸೆ ತರಬೇತಿ ನೀಡಲಾಗಿದೆ. ಹಂತ-ಹಂತವಾಗಿ ಚಾಲಕ-ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ, ಆಡಳಿತ ಸಿಬ್ಬಂದಿಗೂ ಈ ತರಬೇತಿ ನೀಡಲಾಗುವುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.