ದಂಡುಪಾಳ್ಯ ಭಾಗ-4 ಬರುತ್ತಾ?
Team Udayavani, Jan 13, 2018, 11:52 AM IST
ಶ್ರೀನಿವಾಸ್‌ರಾಜು ನಿರ್ದೇಶನದಲ್ಲಿ “ದಂಡುಪಾಳ್ಯ’ ಬಂತು. ಅದು ಸಿಕ್ಕಾಪಟ್ಟೆ ಸದ್ದು ಮಾಡು¤. ಆ ಬಳಿಕ “ಭಾಗ-2′ ಬಂತು. ಅದೂ ಸುದ್ದಿಯಾಯ್ತು. ಈಗ ‘ಭಾಗ-3′ ಬರೋಕೆ ರೆಡಿಯಾಗಿದೆ. ಅದಾದ ಮೇಲೂ “ಭಾಗ-4′ ಬರುತ್ತಾ? ಈಗ ಇದೇ ವಿಷಯ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ತೆರೆಗೆ ಬರಲು “ಭಾಗ 3’ ರೆಡಿಯಾಗಿದ್ದು, ಇಷ್ಟರಲ್ಲೇ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ.
ಹೊಸ ಸುದ್ದಿ ಅಂದರೆ, “ಭಾಗ 4′ ಚಿತ್ರ ಕೂಡ ಬರಲಿದೆ ಎಂಬ ಸುದ್ದಿ ಜೋರಾಗಿದೆ. ಈಗಾಗಲೇ ಆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ ಎನ್ನಲಾಗಿದೆ. ಬಿಡುಗಡೆಯಾಗಿರುವ ಚಿತ್ರಗಳಿಗೆ ಶ್ರೀನಿವಾಸ್‌ರಾಜು ನಿರ್ದೇಶನ ಮಾಡಿದ್ದರು. ಬಿಡುಗಡೆಗೆ ರೆಡಿಯಾಗಿರುವ “ಭಾಗ-3′ ಚಿತ್ರಕ್ಕೂ ಅವರದೇ ನಿರ್ದೇಶನವಿದೆ. ಆದರೆ, ಸೆಟ್ಟೇರಲಿದೆ ಎಂದು ಹೇಳಲಾಗುತ್ತಿರುವ “ಭಾಗ-4′ ಚಿತ್ರಕ್ಕೆ ನಿರ್ದೇಶಕರು ಯಾರಾಗುತ್ತಾರೆ ಎಂಬುದು ಪ್ರಶ್ನೆ.
ಒಂದಂತೂ ಹೌದು, “ದಂಡುಪಾಳ್ಯ’ ಮೂರನೇ ಭಾಗದಲ್ಲಿ ಬರುತ್ತಿದೆ. “ಭಾಗ 4′ ರ ಬಗ್ಗೆ ಆ ನಿರ್ದೇಶಕರು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಚಿತ್ರಕ್ಕೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ. ಅದೇನೆ ಇದ್ದರೂ, ಚಿತ್ರ ಸೆಟ್ಟೇರಿದ ಬಳಿಕವಷ್ಟೇ ಎಲ್ಲಾ ಅಂತೆಕಂತೆಗಳಿಗೆ ತೆರೆಬೀಳಲಿದೆ. ಅಂದಹಾಗೆ, “ಭಾಗ 4′ ರಲ್ಲಿ ಬೇರೆ ಯಾವ್ಯಾವ ನಟ,ನಟಿಯರು ಬದಲಾಗುತ್ತಾರೆ, ಸೇರಿಕೊಳ್ಳುತ್ತಾರೆ ಎಂಬುದಕ್ಕೂ ಸದ್ಯಕ್ಕೆ ಉತ್ತರವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.