ಕೆಐಓಸಿಎಲ್: ಕೇಂದ್ರ ಸಚಿವರಿಗೆ ಮನವಿ
Team Udayavani, Jan 13, 2018, 12:02 PM IST
ಮಹಾನಗರ: ಕೆಐಓಸಿಎಲ್ ಪ.ಜಾ./ಪ.ಪಂ. ನೌಕರರ ಕ್ಷೇಮಾಭಿವೃದ್ಧಿ ಸಂಘ ಕಾವೂರು ವತಿಯಿಂದ ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದ್ರ ಸಿಂಘ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ತಮ್ಮ ಬೇಡಿಕೆ ಈಡೇರಿಸುವ ಕುರಿತು ಸಂಘದ ಕಾರ್ಯಾಧ್ಯಕ್ಷ ಬಾಬು ಎಂ. ಭಜಂತ್ರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಸರ್ವೋಚ್ಚ ನ್ಯಾಯಲಯದ ತೀರ್ಪಿನ ಮೇರೆಗೆ 2005ರಲ್ಲಿ ಕುದುರೆಮುಖ ಕಂಪೆನಿಯು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಸಂಸ್ಥೆಯು ತನ್ನದೇ ಆದ ಸ್ವಂತ ಗಣಿಯನ್ನು ಹೊಂದಿರದ ಕಾರಣ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮಾರುಕಟ್ಟೆಯ ಏರುಪೇರಿನಿಂದಾಗಿ ಊದು ಕುಲುಮೆ ಘಟಕವೂ ಸ್ಥಗಿತಗೊಂಡು ಕಾರ್ಮಿಕರ ಬದುಕು ಅತಂತ್ರ ಸ್ಥಿತಿ ತಲುಪಿತು. ಆದರೂ ಸಹ ಪ.ಜಾ./ಪ.ಪಂ. ನೌಕರರ ಸಮರ್ಪಣ ಮನೋಭಾವದ ಅವಿರತ ಶ್ರಮದಿಂದ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ ಎಂದರು.
ಹುದ್ದೆ ಭರ್ತಿಗೊಳಿಸಿ
ಕರ್ನಾಟಕ ಸರಕಾರ ಕೆಐಓಸಿಎಲ್ ಸಂಸ್ಥೆಗಾಗಿ, ಬಳ್ಳಾರಿಯ ದೇವರಾರು ಗಣಿಯನ್ನು ಹಂಚಿಕೆ ಮಾಡಿದ್ದು, ಗಣಿಗಾರಿಕೆ ನಡೆಸಲು ಬೇಕಾಗುವಂತಹ ಆದೇಶವನ್ನು ಆದಷ್ಟು ಬೇಗ ನೀಡಲು ಕರ್ನಾಟಕ ಸರಕಾರವನ್ನು ಒತ್ತಾಯಿಸಬೇಕು. ಯಾರಾದರೂ ನೌಕರ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ, ಅನುಕಂಪದ ಆಧಾರದ ಮೇಲೆ ಅವಲಂಬಿತರಿಗೆ ನೀಡುತ್ತಿದ್ದ ಉದ್ಯೋಗವನ್ನು ತಡೆಹಿಡಿಯಲಾಗಿರುವುದನ್ನು ತೆರವುಗೊಳಿಸಿ, ಮೃತರ ಕುಟುಂಬ ನಿರಾತಂಕದಿಂದ ಬಾಳಲು ಅನುಕೂಲ ಮಾಡಿಕೊಡಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಗೊಳಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ನಿಯೋಗ ಸಲ್ಲಿಸಿತು.
ನಿಯೋಗದಲ್ಲಿ ಕೆಐಓಸಿಎಲ್ ಪ.ಜಾ./ಪ.ಪಂಗಡದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಶಾಖಾ ಅಧ್ಯಕ್ಷ ಶಂಕರಪ್ಪ, ಪದಾಧಿಕಾರಿಗಳಾದ ನಾರಾಯಣ ಸ್ವಾಮಿ, ಕೆ.ಜೆ. ಕೃಷ್ಣಪ್ಪ, ಹನುಮಂತಪ್ಪ, ನಾರಾಯಣ ಡಿ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.