ಪ್ರಮಾಣ ಪತ್ರ ಇನ್ನು ಶೀಘ್ರ ಲಭ್ಯ
Team Udayavani, Jan 13, 2018, 12:35 PM IST
ಹಮನಾಬಾದ: ವಿವಿಧ ಉದ್ದೇಶಗಳಿಗಾಗಿ ಬೇಕಾಗುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಇನ್ನುಮುಂದೇ ಒಂದೇ ದಿನದಲ್ಲಿ ದೊರೆಯಲಿವೆ. ಕಂದಾಯ ಇಲಾಖೆಯನ್ನು ಆನ್ ಲೈನ್ ವ್ಯವಸ್ಥೆಗೆ ಒಳಪಡಿಸಿದ್ದು, ಹೈದ್ರಾಬಾದ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಬೀದರ ಜಿಲ್ಲೆಯಿಂದಲೆ ಮೊದಲು ಕಾರ್ಯ ಆರಂಭಗೊಳಿಸಲಾಗಿದೆ.
ಶಿಕ್ಷಣ, ಉದ್ಯೋಗ ಸರಕಾರಿ ಸೌಲಭ್ಯ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬೇಕಾಗುವ ಜಾತಿ-ಆದಾಯ ಪ್ರಮಾಣ ಪತ್ರ ಪಡೆಯಲು ಈ ಹಿಂದೇ ಸಾರ್ವಜನಿಕರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದರು. ಶೈಕ್ಷಣಿಕ ವರ್ಷದ ಆರಂಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಹೆಚ್ಚು ಅರ್ಜಿಗಳು ಬರುತ್ತಿದ್ದವು. ಈ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು ನಾಡ ಕಚೇರಿ, ಕಂದಾಯ ನೀರಿಕ್ಷಕರ ಕಚೇರಿ, ತಹಸೀಲ್ದಾರ ಕಚೇರಿಗೆ ಅಲೆಯಬೇಕಾಗಿತ್ತು. ಅಲ್ಲದೇ ಜಾತಿ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಭ್ರಷ್ಟಾಚಾರದ ಅನೇಕ ಆರೋಪಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಗದ ರಹಿತವಾಗಿ ಪ್ರಮಾಣ ಪ್ರತ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ.
ಆನ್‌ಲೈನ್ ಮೂಲಕ ಪ್ರಮಾಣ ಪತ್ರ ವಿತರಿಸುವುದ ರಿಂದ ಅರ್ಜಿದಾರರ ಸಮಯ ಉಳಿತಾಯವಾಗುವುದರ ಜತೆಗೆ
ವ್ಯವಸ್ಥೆಯೂ ಪಾರದರ್ಶಕವಾಗಲಿದೆ. ಮೂರು ವರ್ಷಗಳಿಂದ ಕಂದಾಯ ಇಲಾಖೆ ಆನ್‌ಲೈನ್ ವ್ಯವಸ್ಥೆಗೆ ಹೊಂದಿಕೊಂಡಿದ್ದು, ಎಲ್ಲಾ ತರಹದ ಪ್ರಮಾಣ ಪತ್ರಗಳು ಆನ್‌ಲೈನ್ ಮೂಲಕವೇ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಪ್ರಮಾಣ ಪತ್ರಗಳಿಗೆ ಆಧಾರ್ ಸಂಖ್ಯೆ ಜೋಡಿಸಿಕೊಂಡಿರುವುದು, ಇಲಾಖೆಗೆ ಸಹಾಯವಾಗಿದೆ. ಕಾರಣ ಕ್ಷಣದಲ್ಲಿಯೇ ಪ್ರಮಾಣಪತ್ರ ಸಿಗುವಂತಾಗುತ್ತಿದೆ.
ಹೇಗೆ ಪಡೆಯುವುದು?: ಯಾರಿಗೆ ಜಾತಿ-ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೊ ಅವರು ಸಮೀಪದ ಅಟಲ್‌ಜೀ
ಜನಸ್ನೇಹಿ ಕೇಂದ್ರಕ್ಕೆ ತೆರಳಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ (ಯಾವುದಾದರೊಂದು
ದಾಖಲೆ) ಅಥವಾ ನೋಂದಾಯಿಸಿದ ಮೂಬೈಲ್ ಸಂಖ್ಯೆ ತಿಳಿಸಿ ದೃಢೀಕರಿಸಬೇಕು. ನಿಗದಿತ ಶುಲ್ಕ ಪಾವತಿಸಿದರೆ ಆಯ್ತು, ನಿಮ್ಮ ಪ್ರಮಾಣಪತ್ರ ಮುದ್ರಣಗೊಳ್ಳುತ್ತದೆ.
ಬದಲಾವಣೆ: ಯಾವುದೇ ಸಂದರ್ಭದಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಬದಲಾವಣೆ ಬಯಸಿದಲ್ಲಿ
ಬದಲಾವಣೆಗೆ ಅವಕಾಶ ನೀಡಲಾಗಿದೆ. ಆದಾಯ ಹೆಚ್ಚಾದಲ್ಲಿ ಅಥವಾ ಕಡಿಮೆಯಾದಲ್ಲಿ, ವಿಳಾಸ ಬದಲಾವಣೆ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಅದೇ ಕೇಂದ್ರಕ್ಕೆ ತೆರಳಿ ಮೂಲ ದಾಖಲೆಗಳ ಜೊತೆ ನಿಗದಿತ ಅರ್ಜಿ ನಮೂನೆ ಸಲ್ಲಿಸಿದರೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಆನ್‌ಲೈನ್ ಪಹಣಿ: ಪಹಣಿ ಪತ್ರಿಕೆಯನ್ನು ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ. ಆದರೆ ಆನ್‌ಲೈನ್ ಮೂಲಕ ಪಡೆದ ಪಹಣಿಯನ್ನು ವಿವಿಧ ಸೌಲಭ್ಯಗಳಿಗೆ ಬಳಸಲು ಸಾಧ್ಯವಾಗುತ್ತಿರಲ್ಲಿಲ್ಲ. ಕಾರಣ ಕಂದಾಯ ಇಲಾಖೆ ಅಥವಾ ಗ್ರಾಮ ಪಂಚಾಯತ ಮೂಲಕ ನೀಡುವ ಪಹಣಿಗಾಗಿ ಜನರು ಪರದಾಡುವ ಸ್ಥಿತಿ ಇತ್ತು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಆನ್‌ಲೈನ್ ಮೂಲಕ ಪಹಣಿ ಪತ್ರ ಪಡೆಯಲು ಸರ್ಕಾರ ವ್ಯವಸ್ಥೆ ರೂಪಿಸಿದ್ದು, 2018ರಿಂದ ಹೊಸ ಪಹಣಿಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ
ತಾಲೂಕಿನ ಗ್ರಾಮೀಣ ಭಾಗದ 38 ಸಾವಿರ ಅರ್ಜಿಗಳನ್ನು ಈಗಾಗಲೇ ಆನ್ ಲೈನ್ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ. ಹುಮನಾಬಾದ ಪಟ್ಟಣ, ಚಿಟಗುಪ್ಪ ಪಟ್ಟಣ ಹೊರತುಪಡಿಸಿ ಎಲ್ಲಾ ಗ್ರಾಮೀಣ ಭಾಗದ ಜನರ ಅರ್ಜಿಗಳು ಆನ್‌ಲೈನ್‌ಗೆ ಸೇರ್ಪಡೆಗೊಂಡಿವೆ. ಈ ಮೂಲಕ ಜಾತಿ-ಆದಾಯ ಹಾಗೂ ಪಹಣಿ ಪತ್ರಿಕೆಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಎರಡು ಪಟ್ಟಣಗಳ ಅರ್ಜಿಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಕೆಲ ದಿನಗಳಲ್ಲೀ ಅವುಗಳು ಕೂಡ ಆನ್‌ಲೈನ್‌ಗೆ ಸೇರಲಿವೆ.
ದೇವೆಂದ್ರಪ್ಪ ಪಾಣಿ, ತಹಶೀಲ್ದಾರ್ ಹುಮನಾಬಾದ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.