ಎಂಡೋಪಟ್ಟಿಯಲ್ಲಿರುವ ಎಲ್ಲರಿಗೂ ನಷ್ಟ ಪರಿಹಾರ  ಅಸಾಧ್ಯ


Team Udayavani, Jan 13, 2018, 3:19 PM IST

13-31.jpg

ಕಾಸರಗೋಡು: 2010-11ನೇ ಆರ್ಥಿಕ ವರ್ಷದಲ್ಲಿ  ಸಿದ್ಧಪಡಿಸಲಾದ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್‌ ಸಂತ್ರಸ್ತರ ಪಟ್ಟಿಯಲ್ಲಿ  ಹೆಸರು ಒಳಗೊಂಡಿರುವ ಎಲ್ಲರಿಗೂ ನಷ್ಟ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇರಳ ಸರಕಾರವು ಸುಪ್ರಿಂಕೋರ್ಟ್‌ನಲ್ಲಿ  ಸಲ್ಲಿಸಿದ ಅಫಿದಾವಿತ್‌ನಲ್ಲಿ  ತಿಳಿಸಿದೆ.

ನಷ್ಟಪರಿಹಾರ ಲಭಿಸಿಲ್ಲವೆಂದು ಹೇಳಿ ಎಂಡೋಸಲ್ಫಾನ್‌ ಸಂತ್ರಸ್ತರ ಯಾದಿಯಲ್ಲಿ  ಹೆಸರು ಸೇರಿರುವವರ ನಾಲ್ವರು ತಾಯಂದಿರಾದ ಪಿ. ರಮ್ಯಾ, ಜಮೀಲಾ, ಸಿಸಿಲಿ, ಮಾಧವಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪೋಲ್‌ ಆ್ಯಂಟನಿ ಅವರು ಸರಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ  ಈ ನಿಲುವು ವ್ಯಕ್ತಪಡಿಸಲಾಗಿದೆ.

ಎಂಡೋಸಲ್ಫಾನ್‌ ಬಾಧಿತರಿಗೆ ನಷ್ಟ ಪರಿಹಾರವಾಗಿ ಕೇರಳ ಸರಕಾರವು 350 ಕೋಟಿ ರೂಪಾಯಿಗಳನ್ನು  ಈಗಾಗಲೇ ವಿನಿಯೋಗಿಸಿದೆ. 2010ರಲ್ಲಿ  ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಾಡಿದ ಶಿಫಾರಸಿನಂತೆ ಎಂಡೋಸಲ್ಫಾನ್‌ ಮಾರಕ ಕೀಟನಾಶಕವು ಸೃಷ್ಟಿಸಿದ ದುರಂತದಲ್ಲಿ  ಸಾವನ್ನಪ್ಪಿದ ವ್ಯಕ್ತಿಗಳ ಆಶ್ರಿತರಿಗೆ ತಲಾ 5 ಲಕ್ಷ  ರೂ. ನೀಡುವಂತೆಯೂ, ಸಂತ್ರಸ್ತರಿಗೆ ತಲಾ 3 ಲಕ್ಷ  ರೂ. ಗಳಂತೆ ನಷ್ಟ ಪರಿಹಾರ ವಿತರಿಸುವಂತೆ ತಿಳಿಸಲಾಗಿತ್ತು. ಅದನ್ನು  2012ರಲ್ಲಿ  ಕೇರಳ ಸರಕಾರವು ಅಂಗೀಕರಿಸಿದೆ.

ಈ ಪಟ್ಟಿಯು 2010 ಮತ್ತು  2011ರ ಆರೋಗ್ಯ ಪುನರ್ವಸತಿ ಪಟ್ಟಿಗಿಂತ ಮೊದಲು ತಯಾರಿಸಿದ ಪಟ್ಟಿಗಳಾಗಿವೆ. 
2010 ಮತ್ತು  2012ರಲ್ಲಿ  ಸಿದ್ಧಪಡಿಸ ಲಾದ ಆ ಯಾದಿಗಳಲ್ಲಿ  ಹಲವು ಮಂದಿ ಅನರ್ಹರು ಒಳಗೊಂಡಿದ್ದಾರೆಂದು ವಿಜಿ ಲೆನ್ಸ್‌  ವಿಭಾಗವು ಪತ್ತೆಹಚ್ಚಿತ್ತು. ಮಾನವ ಹಕ್ಕು ಆಯೋಗದ  ಆದೇಶದ  ಪ್ರಕಾರ 2013ರ ದಾಖಲೆಗಳ ಆಧಾರದಲ್ಲಿ  ವೈದ್ಯರುಗಳು    ತಯಾರಿಸಿದ ಯಾದಿಯಂತೆ  ಅದರಲ್ಲಿ   ಒಳಗೊಂಡಿರುವ ಹೆಚ್ಚು  ಕಡಿಮೆ ಎಲ್ಲ ಸಂತ್ರಸ್ತರಿಗೂ ತಲಾ ಮೂರು ಲಕ್ಷ  ರೂ. ಗಳಂತೆ ನಷ್ಟಪರಿಹಾರ ನೀಡಲಾಗಿದೆ.

ವಾರೀಸುದಾರರಿಲ್ಲದಿದ್ದಲ್ಲಿ ಪರಿಹಾರವಿಲ್ಲವಂತೆ!
ಆದರೆ ಈ ಯಾದಿಯಲ್ಲಿ  ಹೆಸರು ಸೇರಿರುವ ಮೃತ ವ್ಯಕ್ತಿಗಳ ಪೈಕಿ ಹಲವರಿಗೆ ಅವರ ಕಾನೂನುಪರ ವಾರೀಸುದಾರರು ಇಲ್ಲದ ಕಾರಣ ಆ ಹಣ ವಿತರಿಸಲಾಗಿಲ್ಲ. ಕಾನೂನು ಪರವಾಗಿ ವಾರೀಸುದಾರರು ಬಂದಲ್ಲಿ  ಅವರಿಗೆ ನಷ್ಟಪರಿಹಾರ ಮೊತ್ತ  ನೀಡಲಾಗುವುದು ಎಂದು ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದವಿತ್‌ನಲ್ಲಿ  ಸ್ಪಷ್ಟಪಡಿಸಿದೆ.

ನಷ್ಟಪರಿಹಾರ ದೊರಕಿಲ್ಲವೆಂದು ದೂರಿ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದ ಅರ್ಜಿದಾರರು 2010 ಮತ್ತು  2011ರ ಎಂಡೋ ಬಾಧಿತ ಯಾದಿಯಲ್ಲಿ  ಸೇರಿದವರಾಗಿದ್ದಾರೆ. ಇವರ ಮಕ್ಕಳಿಗೆ ಆರ್ಥಿಕ ಸಹಾಯ ಲಭಿಸುತ್ತಿಲ್ಲವೆಂದು ತೋರಿಸಿ ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಲಿಲ್ಲ. ಆದರೂ ನಾಲ್ವರು ಸಂತ್ರಸ್ತರಿಗೆ ಚಿಕಿತ್ಸೆ  ಇತ್ಯಾದಿಗಳಿಗೆ ಕೇರಳ ಸರಕಾರವು ಹಣ ವಿನಿಯೋಗಿಸಿದೆ. ಆದ್ದರಿಂದ ಈ ವಿಷಯದಲ್ಲಿ  ನ್ಯಾಯಾ ಲಯದ ಕ್ರಮವನ್ನು  ಹೊರತು ಪಡಿಸ ಬೇಕೆಂದು ಮುಖ್ಯ ಕಾರ್ಯ ದರ್ಶಿ ಅಫಿದವಿತ್‌ನಲ್ಲಿ  ವಿನಂತಿಸಿಕೊಂಡಿದ್ದಾರೆ.

ಕಾನೂನು ಹೋರಾಟ ಮುಂದುವರಿಕೆ 
ಕಾಸರಗೋಡು ಜಿಲ್ಲೆಯ ಅರ್ಹ ಎಲ್ಲ ಎಂಡೋಸಲ್ಫಾನ್‌ ಬಾಧಿತರಿಗೂ ಸೂಕ್ತ  ನಷ್ಟಪರಿಹಾರ ಮೊತ್ತ  ವಿತರಿಸಬೇಕು. ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಹೋರಾಟ ಮುಂದುವರಿಸಲಾಗುವುದು. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ  ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇರಳ ಸರಕಾರ ಕೂಡ ಮೀನಮೇಷ ಎಣಿಸುವುದನ್ನು  ಬಿಟ್ಟು  ನೋವಿನಿಂದ ಬದುಕು ಸಾಗಿಸುವವರ ನೆರವಿಗೆ ಧಾವಿಸಬೇಕು. ಈ ವಿಷಯದಲ್ಲಿ  ಯಾವುದೇ ರಾಜಕೀಯ ಮಾಡಬಾರದು.
ಪದಾಧಿಕಾರಿಗಳು ಎಂಡೋಸಲ್ಫಾನ್‌ ವಿರುದ್ಧ  ಹೋರಾಟ ಕ್ರಿಯಾ ಸಮಿತಿ

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.