ತುಂಬೆ ವೆಂಟೆಡ್ ಡ್ಯಾಂ
Team Udayavani, Jan 14, 2018, 11:29 AM IST
ಮಹಾನಗರ: ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ನದಿಯ ತುಂಬೆ ವೆಂಟೆಡ್
ಡ್ಯಾಂನಲ್ಲಿ ಗರಿಷ್ಠ ಮಟ್ಟ 7 ಮೀಟರ್ ನೀರು ಸಂಗ್ರಹಿಸಿದರೆ ಸುಮಾರು 85ರಿಂದ 90 ದಿನಗಳವರೆಗೆ ನಗರಕ್ಕೆ ಕುಡಿಯುವ ನೀರು ಅಬಾಧಿತವಾಗಿ ಸರಬರಾಜು ಮಾಡಬಹುದಾಗಿದೆ. ಪ್ರಸ್ತುತ ವರ್ಷದಿಂದ 6 ಮೀಟರ್‌ವರೆಗೆ ನೀರು ನಿಲ್ಲಿಸಲಾಗುತ್ತಿದ್ದು, 55ರಿಂದ 60 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ.
ತುಂಬೆ ವೆಂಟೆಡ್‌ಡ್ಯಾಂ ಅನ್ನು ಮಂಗಳೂರು ನಗರದ ಮುಂದಿನ 20ರಿಂದ 25 ವರ್ಷಗಳವರೆಗಿನ ನೀರಿನ ಆವಶ್ಯಕತೆಯನ್ನು ಮನಗಂಡು 2009 ರಲ್ಲಿ ರೂಪಿಸಲಾಗಿತ್ತು. ಡ್ಯಾಂನ ಎತ್ತರ 12 ಮೀಟರ್ ಆಗಿದ್ದು, ಗರಿಷ್ಠ ನೀರು 7 ಮೀಟರ್‌ವರೆಗೆ ನೀರು ನಿಲ್ಲಿಸಬಹುದಾಗಿದೆ. ಆದರೆ 7 ಮೀಟರ್ ನೀರು ಸಂಗ್ರಹಿಸಿದರೆ ನದಿಯ ಎರಡೂ ಕಡೆಗಳಲ್ಲಿ ಕೃಷಿ ಭೂಮಿ ಸೇರಿದಂತೆ ಗಣನೀಯ ಪ್ರಮಾಣದಲ್ಲಿ ಪ್ರದೇಶ ಜಲಾವೃತಗೊಳ್ಳುವುದರಿಂದ ಆರಂಭದಲ್ಲಿ ಇಲ್ಲಿ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಲಾಯಿತು. ಇದರಿಂದ ನದಿಪಾತ್ರದ ಎರಡೂ ಕಡೆಗಳಲ್ಲಿ 19 ಎಕ್ರೆ ಜಾಗ ಜಲಾವೃತವಾಗುತ್ತದೆ. ಈ ವರ್ಷದಿಂದ 6 ಮೀಟರ್ ನೀರು ಸಂಗ್ರಹಿಸಲು ಕಾರ್ಯೋನ್ನುಖವಾಗಿದ್ದು ಇದರಿಂದ 50.88 ಎಕ್ರೆ ಪ್ರದೇಶದಲ್ಲಿ ನೀರು ಆವರಿಸಲಿದೆ.
ಎತ್ತರ, ನೀರು ಸಂಗ್ರಹ ಪ್ರಮಾಣ
ಮಂಗಳೂರು ನಗರಕ್ಕೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕಹಾಕಿ 4 ಮೀ. ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು, 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ. 4.50 ಮೀ.ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ ಮತ್ತು 30 ದಿನಗಳವರೆಗೆ ಪೂರೈಕೆ ಮಾಡಬಹುದಾಗಿದೆ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. 6 ಮೀ. ಎತ್ತರಕ್ಕೆ ನಿಲ್ಲಿಸಿದರೆ 10.83 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ದಾಸ್ತಾನು ಆಗಿ 55 ದಿನ ಗಳವರೆಗೆ ಪೂರೈಕೆ ಮಾಡಬಹುದಾಗಿದೆ. 7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದರೆ 14.73 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿ 85 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದಾಗಿದೆ.
ದಿನಕ್ಕೆ 137 ಎಂಎಲ್‌ಡಿ ನೀರು
ನಗರದಲ್ಲಿ ಈಗ ಅಂದಾಜು ಪ್ರಕಾರ ದಿನಂಪ್ರತಿ 137 ಎಂಎಲ್‌ಡಿ ಕುಡಿಯುವ ನೀರಿಗೆ ಬೇಡಿಕೆ ಇದೆ. 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. 2031ರಲ್ಲಿ ಮಂಗಳೂರು ನಗರದ ಜನಸಂಖ್ಯೆ 7,56,093ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ಆಗ 180.01 ಎಂಎಲ್‌ಡಿ ಹಾಗೂ 2046ಕ್ಕೆ ಜನಸಂಖ್ಯೆ 10,33,778 ಕ್ಕೆ ಹೆಚ್ಚಳವಾಗಿ 236 ಎಂಲ್‌ಡಿ ನೀರಿಗೆ ಬೇಡಿಕೆ ಇರಬಹುದು ಎಂದು ಲೆಕ್ಕ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ಈಗ ಸರಬರಾಜು ಆಗುತ್ತಿರುವುದಕ್ಕಿಂತ 2031ರಲ್ಲಿ 20 ಎಂಎಲ್‌ಡಿ ಹಾಗೂ 2046ರಲ್ಲಿ 77 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಸರಬರಾಜು ಮಾಡಬೇಕಾಗುತ್ತದೆ ಎಂದು ಲೆಕ್ಕಚಾರ ಹಾಕಲಾಗಿದೆ. ಕುಡ್ಸೆಂಪ್ ಸರ್ವೆ ಪ್ರಕಾರ 2046ನೇ ಇಸವಿವರೆಗೆ ಮಂಗಳೂರಿಗೆ ನೀರು ಸರಬರಾಜು ಮಾಡಲು ನೇತ್ರಾವತಿ ನದಿಯಿಂದ ಸಾಧ್ಯವಾಗಲಿದೆ. ಶಂಬೂರಿನಲ್ಲಿರುವ ಎಎಂಆರ್ ಡ್ಯಾಂನಲ್ಲಿ 14.25 ಎಂಎಲ್‌ಡಿ ನೀರು ಸಂಗ್ರಹವಾಗುತ್ತಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಕಡಿಮೆಯಾದರೆ ಎಎಂಆರ್ ಡ್ಯಾಂನಿಂದ ನೀರು ಬಿಟ್ಟು ನೀರಿನ ಮಟ್ಟವನ್ನು ಕಾಯ್ದು ಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ನೇತ್ರಾವತಿ ನದಿಯಲ್ಲಿ ಫೆಬ್ರವರಿ ಮಧ್ಯಭಾಗದವರೆಗೆ ಒಳಹರಿವು ಇರುತ್ತದೆ.
10 ಎಂಎಲ್‌ಡಿಯಿಂದ 137 ಎಂಎಲ್‌ಡಿ
1956ರಲ್ಲಿ ಮಂಗಳೂರು ನಗರಕ್ಕೆ ಮೊದಲ ಬಾರಿ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಟಾನಗೊಂಡಿತು. ಆಗ 1,80,000 ಜನಸಂಖ್ಯೆಯನ್ನು ಅಂದಾಜಿಸಿಕೊಂಡು ಈ ಯೋಜನೆ ಸಿದ್ಧಪಡಿಸಲಾಗಿತ್ತು. ಆಗ ಬೇಡಿಕೆ ಇದ್ದದ್ದು 10 ಎಂಎಲ್‌ಡಿ ನೀರಿಗೆ. 1971ರಲ್ಲಿ ನೀರಿನ ಬೇಡಿಗೆ 81.70 ಎಂಎಲ್‌ಡಿ ಗೇರಿತು. ಈಗ ಇದು 137 ಎಂಎಲ್‌ಡಿಗೆ ತಲುಪಿದೆ.
ಲಕ್ಯಾ ಡ್ಯಾಂನೀರು
ಲಕ್ಯ ಅಣೆಕಟ್ಟಿನಿಂದ ಪಣಂಬೂರಿನ ಕುದುರೆಮುಖ ಕಂಪೆನಿ ಪ್ರದೇಶಕ್ಕೆ ಈಗ 2.3 ಎಂಜಿಡಿ ನೀರು ಸರಬರಾಜು ಆಗುತ್ತಿದೆ. ಅಲ್ಲಿಂದ ದಿನವೊಂದಕ್ಕೆ 6 ಎಂಜಿಡಿ ನೀರು ತೆಗೆಯಬಹುದಾಗಿದೆ. ಮನಪಾದ ಪ್ರಸ್ತಾವನೆಯಲ್ಲಿ
ಪಣಂಬೂರಿನಿಂದ ಈಗಾಗಲೇ ಇರುವ ನೀರು ಸರಬರಾಜು ಕೊಳವೆಗೆ ಲಿಂಕ್ ಮಾಡಿ ನೀರು ಸಂಗ್ರಹ ಸ್ಥಾವರಗಳಿಗೆ
ತರುವ ಯೋಜನೆ ರೂಪಿಸಲಾಗಿದೆ. 2011ರ ಎಪ್ರಿಲ್‌ನಲ್ಲಿ ಮಂಗಳೂರಿಗೆ ಕುಡಿಯುವ ನೀರು ಪೂರೈಕೆಯ ಏಕೈಕ
ಮೂಲವಾಗಿರುವ ತುಂಬೆಯಲ್ಲಿ ನೀರು ಸಂಗ್ರಹ ಕಡಿಮೆಯಾದಾಗ ಲಕ್ಯದಿಂದ ನೀರು ಪಡೆಯುವ ಬಗ್ಗೆ
ಆಗಿನ ಶಾಸಕ ಎನ್. ಯೋಗೀಶ್ ಭಟ್ ಪ್ರಸ್ತಾವನೆ ಮಂಡಿಸಿದ್ದರು. ಹಾಲಿ ಶಾಸಕ ಮೊದೀನ್ ಬಾವಾ ಈ ಬಗ್ಗೆ
ರಾಜ್ಯ ಸರಕಾರ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಿ ದ್ದಾರೆ. ಕುದುರೆಮುಖ ಗಣಿಗಾರಿಕೆ ವಿಚಾರ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಇದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಮನಪಾ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನೀರು ತರಲು ಅನುಮತಿ ಕೋರಿದೆ. 1,048 ಮೀಟರ್ ಉದ್ದ , 100 ಮೀ. ಎತ್ತರ ವಿರುವ ಲಕ್ಯಾ ಡ್ಯಾಂ 254 ಚ.ಘ. ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 6.05 ಚದರ ಕಿ.ಮೀ. ವಿಸ್ತೀರ್ಣವಿದ್ದು, 18.20 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.