ನಾಗರಿಕರಿಗೆ ಕಿರಿಕಿರಿಯಾದ ನೇತಾಡುವ ಒಎಫ್ಸಿ


Team Udayavani, Jan 14, 2018, 11:42 AM IST

ofc-cable.jpg

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸೇವೆ ಬಳಕೆಗೆ ಸಹಕಾರಿಯಾದ ಒಎಫ್ಸಿ ಕೇಬಲ್‌ ಅಳವಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಒಎಫ್ಸಿ ಸೇವಾ ಸಂಸ್ಥೆಗಳು ಅನುಸರಿಸುವ ವಾಮಮಾರ್ಗದಿಂದ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸುರಕ್ಷಿತವಾಗಿ ಓಡಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. 

ನಗರದಲ್ಲಿ 17 ಒಎಫ್ಸಿ ಸೇವಾ ಸಂಸ್ಥೆಗಳು ದೂರ ಸಂಪರ್ಕ, ಟೆಲಿವಿಷನ್‌ ಪ್ರಸಾರ ಹಾಗೂ ಅಂತರ್ಜಾಲ ಸೇವೆ ಒದಗಿಸುತ್ತಿವೆ. ಈ ಸಂಸ್ಥೆಗಳು ಪಾಲಿಕೆ ವ್ಯಾಪ್ತಿಯ 6,140 ಕಿ.ಮೀ ವ್ಯಾಪ್ತಿಯಲ್ಲಿ ಕೇಬಲ್‌ ಅಳಡಿಸಲು ಅಧಿಕೃತವಾಗಿ ಅನುಮತಿ ಪಡೆದಿದ್ದು, ಸುಮಾರು 82 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೇಬಲ್‌ ಡಕ್ಟ್ಗಳನ್ನು ಅಳವಡಿಸಿ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸುತ್ತಿವೆ. ಇದರೊಂದಿಗೆ ನಿಯಮಬಾಹಿರವಾಗಿ ಟೆಲಿಫೋನ್‌, ವಿದ್ಯುತ್‌ ಕಂಬ, ಮರ ಹಾಗೂ ಕಟ್ಟಡ ಮೇಲೆ ಕೇಬಲ್‌ಗ‌ಳನ್ನು ತೂಗು ಹಾಕಲಾಗುತ್ತಿದೆ. ಈ ಕೇಬಲ್‌ಗ‌ಳು ರಸ್ತೆಯಲ್ಲಿ ಸಂಚರಿಸುವವರಿಗೆ ಮಾರಕವಾಗಿ ಪರಿಣಮಿಸಿವೆ.

ಪಾಲಿಕೆಯಿಂದ ಕೆಲ ಹಗುರ ಕೇಬಲ್‌ಗ‌ಳನ್ನು ಪೋಲ್‌ಗ‌ಳ ಮೂಲಕ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದ್ದು, ಪ್ರತಿ ಪೋಲ್‌ ಅಳವಡಿಕೆಗೆ ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಬೇಕು. ಆದರೆ, ಪೋಲ್‌ ಅಳವಡಿಸಿದರೆ ಪಾಲಿಕೆಗೆ ಶುಲ್ಕ ಪಾವತಿಸಬೇಕೆಂಬ ಕಾರಣದಿಂದ ಏಜೆನ್ಸಿಗಳು ಮರದ ಕೊಂಬೆಗಳ ಮೇಲೆ ಕೇಬಲ್‌ ಕೊಂಡೊಯ್ಯುತ್ತಿದ್ದು, ತುಂಡಾದ ಕೇಬಲ್‌ಗ‌ಳು ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವವರಿಗೆ “ಸಾವಿನ ಕುಣಿಕೆ’ ಗಳಾಗಿ ಪರಿಣಮಿಸಿವೆ.

ದೇಶದಲ್ಲೇ ಅತಿ ಕಡಿಮೆ ಶುಲ್ಕ: ಒಎಫ್ಸಿ ಡಕ್ಟ್ ಎಚ್‌ಡಿಡಿ ವಿಧಾನದಲ್ಲಿ ಅಳವಡಿಸಲು ದೇಶದಲ್ಲಿಯೇ ಅತ್ಯಂತ ಕಡಿಮೆ ಶುಲ್ಕವನ್ನು ಪಾಲಿಕೆ ನಿಗದಿಪಡಿಸಿದೆ. ಪ್ರತಿ ರನ್ನಿಂಗ್‌ ಮೀಟರ್‌ಗೆ ತ್ರಿಪುರಾ ರೀತಿಯ ಸಣ್ಣ ರಾಜ್ಯವೇ 260 ರೂ. ಶುಲ್ಕ ವಿಧಿಸುತ್ತಿದ್ದರೂ ಪಾಲಿಕೆ ಪಾಲಿಕೆ ಬರೀ 95 ರೂ. ವಿಧಿಸಿದೆ. ಜಾರ್ಖಂಡ್‌ನ‌ಲ್ಲಿ 546 ರೂ., ಪಾಟ್ನಾದಲ್ಲಿ 754 ರೂ. ಗುಜರಾತ್‌ನಲ್ಲಿ 533 ರೂ. ಸಂಗ್ರಹಿಸಲಾಗುತ್ತಿದೆ. ಆದರೂ ಪಾಲಿಕೆ ವ್ಯಾಪ್ತಿಯಲ್ಲಿ ಒಎಫ್ಸಿ ಅಳವಡಿಸುವ ಸಂಸ್ಥೆಗಳು ಕೋಟ್ಯಂತರ ರೂ. ವಂಚಿಸುತ್ತಿವೆ ಎಂದು ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಅನುಸರಿಬೇಕಾದ ನಿಯಮಗಳೇನು?: ಪಾಲಿಕೆಯಿಂದ ಅನುಮತಿ ಪಡೆದ ಏಜೆನ್ಸಿಗಳು ಕೆಲಸ ಪ್ರಾರಂಭಿಸುವ ಮುನ್ನ ಸಂಬಂಧಿಸಿದ ವಲಯ ಅಧಿಕಾರಿಗಳಿಗೆ, ಪಾಲಿಕೆಯ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ಗಳಿಗೆ ಲಿಖೀತ ರೂಪದಲ್ಲಿ ಮಾಹಿತಿ ನೀಡಬೇಕು. ಕಾಮಗಾರಿಗೆ ಸಂಬಂಧಪಟ್ಟ ಕಾರ್ಯಯೋಜನೆಯನ್ನು ಸಂಬಂಧಪಟ್ಟ ವಾರ್ಡ್‌ ಎಂಜಿನಿಯರ್‌ ಗಮನಕ್ಕೆ ತಂದು, ಸಂಬಂಧಿಸಿದ ವಲಯ ಅಧಿಕಾರಿಗಳು ಅಥವಾ ರಸ್ತೆ ಮೂಲ ಸೌಕರ್ಯ ಎಂಜಿನಿಯರ್‌ಗಳ ಸಲಹೆ ಮೇರೆಗೆ ಮಣ್ಣು ಅಗೆಯುವುದು ಮತ್ತು ಅಗೆತ ನಂತರ ರಸ್ತೆಯ ಪುನರ್‌ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಯಮಗಳಿದ್ದರೂ, ಏಜೆನ್ಸಿಗಳಾಗಲಿ, ಪಾಲಿಕೆಯ ಅಧಿಕಾರಿಗಳಾಗಲಿ ಅವುಗಳ ಪಾಲನೆಗೆ ಮುಂದಾಗಿಲ್ಲ.

ಪ್ರಶ್ನಿಸಿದರೆ ಸಿಬ್ಬಂದಿ ಮೇಲೆ ಹಲ್ಲೆ: ಅನಧಿಕೃತವಾಗಿ ಒಎಫ್ಸಿ ಕೇಬಲ್‌ ಅಳವಡಿಸುವವರು ರಾತ್ರಿ ವೇಳೆ ಕಾಮಗಾರಿ ನಡೆಸುತ್ತಾರೆ. ಏಜೆನ್ಸಿಗಳು ಹತ್ತಾರು ಮಂದಿಯನ್ನು ನೇಮಿಸಿಕೊಂಡು ಕಾಮಗಾರಿ ತಡೆಯಲು ಬಂದವರ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗುತ್ತಾರೆ. ನಗರದ ಪ್ರಮುಖ ಭಾಗದಲ್ಲಿ ಇಂತಹ ಅನಧಿಕೃತ ಕೇಬಲ್‌ ಅಳವಡಿಕೆ ತಡೆಗೆ ಮುಂದಾದ ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳೂ ವರದಿಯಾಗಿವೆ. ಈ ಬಗ್ಗೆ ಪಾಲಿಕೆಯಿಂದ ಹಲವು ಠಾಣೆಗಳಲ್ಲಿ ದೂರು ಸಹ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

* ವೆಂ. ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.