ಮನೆಯ ನಂದಾದೀಪ ಆರಿ ಹೋದರೆ ಬರೀ ಕತ್ತಲು
Team Udayavani, Jan 14, 2018, 3:51 PM IST
ಬೆಳ್ತಂಗಡಿ: ಆ ಮನೆಯ ಆಜುಬಾಜಿನಲ್ಲಿ ಜನ. ಮನೆಮಂದಿಗೆ ದುರ್ಘಟನೆಯ ಪೂರ್ಣ ಮಾಹಿತಿ ನೀಡಿ ವಯಸ್ಸಾದ ತಾಯಿಯ ಮನಸ್ಸಿಗೆ ಆಘಾತ ಕೊಡಲು ಒಪ್ಪದ ಮನಸ್ಸುಗಳು. ಮುಂಜಾನೆ ಬರಬೇಕಿದ್ದ ಮಗನ ಕಾಯುವಿಕೆಯಲ್ಲೇ ಆಗಾಗ ಹೊರಬಂದು ರಸ್ತೆ ಮೇಲೆಲ್ಲ ಕಣ್ಣಾಡಿಸಿ ಮನೆಯೊಳಗೆ ಸೇರುತ್ತಿದ್ದ ತಾಯಿ. ನಿಜಕ್ಕೂ ಯಾರಿಗೂ ಬರಬಾರದಂಥ ಸಂದರ್ಭ.
ಇದು ಕನ್ಯಾಡಿಯ ರಾಕೇಶ್ ಪ್ರಭು ಮನೆಯಲ್ಲಿ ಶನಿವಾರ 12 ಗಂಟೆಗೆ ಕಂಡ ದೃಶ್ಯ. ಹಸುಗೂಸು ಹಿಡಿದ ತಂಗಿ. ವಯಸ್ಸಾದ ತಾಯಿ. ಮನೆಯವರ ದುಃಖಕ್ಕೆ ಅಕ್ಷರಗಳೇ ಇಲ್ಲ. ಯಾರನ್ನೂ ಯಾರೂ ಮಾತನಾಡಿಸುವಂತಿರಲಿಲ್ಲ. ಮೌನದಿಂದ ದುಃಖವನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಸನದ ಶಾಂತಿಗ್ರಾಮದಲ್ಲಿ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪೈಕಿ ರಾಕೇಶ್ ಪ್ರಭು (26)ಕೂಡ ಒಬ್ಬರು. ಮುಂಜಾನೆ 3.30ರ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ಕೃಷಿ ಕಾಲೇಜು ಬಳಿ ಈ ಅಪಘಾತ ಸಂಭವಿಸಿತ್ತು. ರಾಕೇಶ್ ಪ್ರಭು ಅವರು ಕನ್ಯಾಡಿಯ ದಿ| ಎಂ. ರಾಮದಾಸ ಪ್ರಭು ಅವರ ಪುತ್ರ. ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪದವಿ ಪಡೆದು ಬೆಂಗಳೂರಿನ ಎಲ್‌ಟಿಐ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ಓರ್ವ ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದಾರೆ.
2 ವರ್ಷಗಳ ಹಿಂದೆ
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದ ರಾಮದಾಸ ಪ್ರಭು ಎಂ. ಅವರು 2015 ಅ.12ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಮೃತರು ಧರ್ಮಸ್ಥಳ, ಬೆಳ್ತಂಗಡಿ, ದಿಲ್ಲಿ, ಬೆಳಗಾವಿ ಸಹಿತ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಆರ್‌ಎಸ್‌ಎಸ್‌ನ ಮಂಡಲ ಕಾರ್ಯವಾಹ ಆಗಿದ್ದರು. ನಿವೃತ್ತಿ ಹೊಂದಿ ಒಂದೂವರೆ ವರ್ಷದಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮನೆ ನಿರ್ವಹಣೆ ಹೊಣೆ ರಾಕೇಶ್ ಮೇಲಿತ್ತು. ತಂಗಿ ರಕ್ಷಾಗೆ 20 ದಿನಗಳ ಹಿಂದಷ್ಟೇ ಹೆರಿಗೆಯಾಗಿತ್ತು. ಮೂರು ದಿನಗಳ ರಜೆ ಇದ್ದ ಕಾರಣ ರಾಕೇಶ್, ತನ್ನ ತಂಗಿ ಹಾಗೂ ಮಗುವನ್ನು ನೋಡಿ ಅಮ್ಮನನ್ನು ಮಾತನಾಡಿಸಲೆಂದು ಬರುತ್ತಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ಮೂವರು ನೆರಿಯದವರು
ಐರಾವತ ಬಸ್ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಬಸ್ ತಡೆಗೋಡೆಗೆ ಢಿಕ್ಕಿ ಹೊಡೆದು ಕಮರಿಗೆ ಉರುಳಿ ಬಿತ್ತು. ಬಸ್ ನಜ್ಜುಗುಜ್ಜಾಗಿದೆ. ಇಬ್ಬರು ಚಾಲಕರು, ಗಂಗಾಧರ್, ವೈದ್ಯಕೀಯ ವಿದ್ಯಾರ್ಥಿನಿ ಬೆಳ್ತಂಗಡಿ ಗಂಡಿಬಾಗಿಲಿನ ಡಯಾನಾ, ಸೋನಿಯಾ, ಬಿಜೋ ಜಾರ್ಜ್ ಸಹಿತ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
7 ಮಂದಿ ಪೈಕಿ ಮೂವರು ಬೆಳ್ತಂಗಡಿ ತಾ| ನೆರಿಯ ಗ್ರಾಮದ ಗಂಡಿಬಾಗಿಲು ದೇವಗಿರಿ ಪುತ್ತೋಟ್ ಪೊರವಿಲ್ ನಿವಾಸಿಗಳಾದ ಬಿಜೋ (25), ಸೋನಿಯಾ (27), ಡಯಾನಾ (20). ಇವರು ದೇವಗಿರಿ ಚರ್ಚ್‌ನ ವಾರ್ಷಿಕ ಮಹೋತ್ಸವಕ್ಕಾಗಿ ಬರುತ್ತಿದ್ದರು. ಇವರ ಜತೆಗಿದ್ದ ಸೋನಿಯಾ ಅವರ ಪತಿ ವಿನು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.