ಸೈಯದ್ ಮುಷ್ತಾಕ್ ಅಲಿ ಟಿ20 : ಕರ್ನಾಟಕ ಸೂಪರ್‌ಲೀಗ್‌ಗೆ
Team Udayavani, Jan 15, 2018, 6:30 AM IST
ವಿಶಾಖಪಟ್ಟಣ: ಅಮೋಘ ಹೋರಾಟ ಪ್ರದರ್ಶಿಸಿದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇರಳ ವಿರುದ್ಧ ಗೆಲುವು ಸಾಧಿಸಿ ಸೂಪರ್ ಲೀಗ್ ಹಂತಕ್ಕೇರಿದೆ. ಇದು ಕರ್ನಾಟಕ ತಂಡಕ್ಕೆ ಲೀಗ್ ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ದಕ್ಷಿಣ ವಲಯ ಗುಂಪಿನಲ್ಲಿ ರಾಜ್ಯ ತಂಡ ಒಟ್ಟು 16 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿ ಸೂಪರ್ ಲೀಗ್‌ಗೆ ಪ್ರವೇಶಿಸಿದೆ. ಇದೇ ಗುಂಪಿನಲ್ಲಿರುವ ತಮಿಳುನಾಡು ತಂಡ ಕೂಡ 16 ಅಂಕ ಸಂಪಾದಿಸಿ ರನ್‌ರೇಟ್ ಆಧಾರದಲ್ಲಿ 2ನೇ ತಂಡವಾಗಿ ಸೂಪರ್ ಲೀಗ್‌ಗೇರಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 181 ರನ್ ದಾಖಲಿಸಿತ್ತು. ಗುರಿ ಬೆನ್ನುಹತ್ತಿದ ಕೇರಳ ತಂಡ 19.2 ಓವರ್‌ಗೆ 161 ರನ್ ಬಾರಿಸಿ ಆಲೌಟ್ ಆಗಿದೆ.
ಆರಂಭದಲ್ಲಿ ಮಿನುಗಿದ ಕೇರಳ: ಗುರಿ ಬೆನ್ನುಹತ್ತಿದ ಕೇರಳ ತಂಡಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ವಿಷ್ಣು ವಿನೋದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನ ಭರವಸೆ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 9.3 ಓವರ್‌ಗೆ 109 ರನ್ ಬಾರಿಸಿತ್ತು.
ಈ ಹಂತದಲ್ಲಿ ಕೇರಳ ತಂಡ ಸುಲಭ ಗೆಲುವು ಸಾಧಿಸುತ್ತೆ ಎಂದೇ ಅಂದಾಜಿಸಲಾಗಿತ್ತು. ಆದರೆ ನಂತರ ನಡೆದಿದ್ದೇ
ಬೇರೆ. ಕರ್ನಾಟಕದ ಬೌಲರ್‌ಗಳು ಭರ್ಜರಿ ದಾಳಿ ನಡೆಸುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಆ ನಂತರ ಬಂದ ಯಾವ ಬ್ಯಾಟ್ಸ್‌ಮನ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನೀಲ್ಲದಿರುವುದೇ ಕೇರಳ ಸೋಲಿಗೆ ಕಾರಣವಾಯಿತು.
ಕೇರಳ ಪರ ಸ್ಯಾಮ್ಸನ್ (71 ರನ್), ವಿಷ್ಣು ವಿನೋದ್ (46ರನ್) ಗರಿಷ್ಠ ರನ್ ಬಾರಿಸಿದರು. ಕರ್ನಾಟಕದ ಪರ
ಪ್ರವೀಣ್ ದುಬೆ 3, ವಿನಯ್ ಕುಮಾರ್ 2 ವಿಕೆಟ್ ಪಡೆದರು.
ಅಗರ್ವಾಲ್ ಸ್ಫೋಟಕ ಬ್ಯಾಟಿಂಗ್: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜ್ಯ ತಂಡಕ್ಕೆ ಆರಂಭಿಕ ಆಟಗಾರ
ಮಾಯಾಂಕ್ ಅಗರ್ವಾಲ್ ಆಸರೆಯಾದರು. ಮೊದಲ ವಿಕೆಟ್‌ಗೆ ಮಾಯಾಂಕ್ ಮತ್ತು ಕರುಣ್ ನಾಯರ್ 42 ರನ್
ಬಾರಿಸಿದರು. ಈ ಹಂತದಲ್ಲಿ ಕರುಣ್(18 ರನ್) ವಿಕೆಟ್ ಕಳೆದುಕೊಂಡರು. ನಂತರ ಬಂದ ಮನೀಶ್ ಪಾಂಡೆ (9
ರನ್) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ 3ನೇ ವಿಕೆಟ್‌ಗೆ ಜತೆಯಾದ ಮಾಯಾಂಕ್ ಮತ್ತು ಆರ್.ಸಮರ್ಥ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ನೆರವಾದರು. ಮಾಯಾಂಕ್ 58 ಎಸೆತದಲ್ಲಿ 86 ರನ್ ಬಾರಿಸಿ ಔಟ್ ಆದರು. ಅವರ ಆಟದಲ್ಲಿ 9 ಬೌಂಡರಿ, 3 ಸಿಕ್ಸರ್ ಸೇರಿತ್ತು. ಉಳಿದಂತೆ ಆರ್.ಸಮರ್ಥ (27 ರನ್), ಕೆ.ಗೌತಮ್ (21 ರನ್) ಉತ್ತಮ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 20 ಓವರ್‌ಗೆ 181/6 (ಮಾಯಾಂಕ್ 86, ಆರ್.ಸಮರ್ಥ್ 27, ಕೆಎಂ ಆಸಿಫ್
34ಕ್ಕೆ 2), ಕೇರಳ 19.2 ಓವರ್‌ಗೆ 161/10 (ಸ್ಯಾಮ್ಸನ್ 71, ವಿಷ್ಣು ವಿನೋದ್ 46, ಪ್ರವೀಣ್ ದುಬೆ 35ಕ್ಕೆ 3)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.