ಟಿ20 ಇತಿಹಾಸದ 2ನೇ ವೇಗದ ಶತಕ ಸಿಡಿಸಿದ ರಿಷಭ್
Team Udayavani, Jan 15, 2018, 6:35 AM IST
ನವದೆಹಲಿ: ಹಿಮಾಚಲ ಪ್ರದೇಶ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ ಉತ್ತರ ವಲಯ ಟಿ20 ಟೂರ್ನಿಯಲ್ಲಿ ದೆಹಲಿಯ ರಿಷಭ್ ಪಂತ್ ಕೇವಲ 32 ಎಸೆತದಲ್ಲಿ ಶತಕ ಸಿಡಿಸಿದ್ದಾರೆ.
ಇದು ಟಿ20 ಇತಿಹಾಸದಲ್ಲಿಯೇ ಎರಡನೇ ಅತೀವೇಗದ ಶತಕವಾಗಿದೆ. ಐಪಿಎಲ್‌ನಲ್ಲಿ ಕೇವಲ 30 ಎಸೆತದಲ್ಲಿ ಶತಕ
ಬಾರಿಸಿರುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.
ಹಿಮಾಚಲ ಪ್ರದೇಶದ ಬೌಲರ್‌ಗಳನ್ನು ಅಕ್ಷರಶಃ ಬೆಂಡೆತ್ತಿದ್ದ ಪಂತ್ ಅಂತಿಮವಾಗಿ 38 ಎಸೆತದಲ್ಲಿ ಅಜೇಯ 116
ರನ್ ಬಾರಿಸಿದರು. ಅದರಲ್ಲಿ 8 ಬೌಂಡರಿ, 12 ಸಿಕ್ಸರ್ ಸೇರಿತ್ತು. ಬೌಂಡರಿ, ಸಿಕ್ಸರ್‌ಗಳ ಮೂಲಕವೇ 104 ರನ್ ದಾಖಲಾಗಿದೆ. ಈ ಪಂದ್ಯದಲ್ಲಿ ದೆಹಲಿ 10 ವಿಕೆಟ್ ಗೆಲುವು ಸಾಧಿಸಿದೆ.
ಪಂತ್ 2016-17ನೇ ರಣಜಿ ಋತುವಿನಲ್ಲಿ ಜಾರ್ಖಂಡ್ ವಿರುದ್ಧ 48 ಎಸೆತದಲ್ಲಿ ಶತಕ ಸಿಡಿಸಿ ಪ್ರಥಮ ದರ್ಜೆಯಲ್ಲಿ
ಅತೀ ವೇಗದ ಶತಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಅ-19 ವಿಶ್ವಕಪ್‌ನಲ್ಲಿ ನೇಪಾಳ ವಿರುದಟಛಿ 18 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಇದು ಅ-19 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತೀ ವೇಗದ ಅರ್ಧಶತಕವಾಗಿದೆ.
30 ಎಸೆತದಲ್ಲೇ ಗೇಲ್ ಶತಕ
ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 30 ಎಸೆತದಲ್ಲಿಯೇ ಶತಕ ಬಾರಿಸಿ ದಾಖಲೆ
ನಿರ್ಮಿಸಿದ್ದರು. 2013ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದಲ್ಲಿ ಆಡಿದ ಗೇಲ್ ಪುಣೆ ವಾರಿಯರ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಆ ಪಂದ್ಯದಲ್ಲಿ ಗೇಲ್ ಒಟ್ಟು 66 ಎಸೆತದಲ್ಲಿ ಅಜೇಯ 175 ರನ್ ಬಾರಿಸಿದ್ದರು. ಅದರಲ್ಲಿ 13 ಬೌಂಡರಿ, 17 ಸಿಕ್ಸರ್ ಸೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.