ಪೋಸ್ಟಾಫೀಸಿನ ಹೂಡಿಕೆಗಳಲ್ಲಿ ಮತ್ತೆ ದರಕಡಿತ
Team Udayavani, Jan 15, 2018, 6:00 AM IST
ಈ ಬಾರಿ ಅತಿ ಮುಖ್ಯವಾಗಿ ಪಿಪಿಎಫ್ ಖಾತೆಯ ಬಡ್ಡಿ ದರವನ್ನು ಶೇ.8ರಿಂದ ಶೇ.7.9ಕ್ಕೆ ಇಳಿಸಲಾಗಿದೆ. ಅಲ್ಲದೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರವನ್ನು ಶೇ.8.3 ದಿಂದ ಶೇ.8.1 ಕ್ಕೆ ಇಳಿಸಲಾಗಿದೆ. ಆದರೆ ಸೀನಿಯರ್ ಸಿಟಿಜನ್ ಯೋಜನೆಗಳ ಬಡ್ಡಿ ದರಗಳನ್ನು ಮಾತ್ರ ಈ ಹಿಂದಿನಂತೆ ಶೇ.8.3 ದರದಲ್ಲಿಯೇ ಮುಂದುವರಿಸಲಾಗಿದೆ.
ಜನ ಸಾಮಾನ್ಯರ ಆಪತಾºಂಧವನೆಂದೇ ಪ್ರಸಿದ್ಧವಾಗಿರುವ ಅಂಚೆಯಣ್ಣನ ಸಣ್ಣ ಉಳಿತಾಯ ಯೋಜನೆಯಲ್ಲಿ ಮತ್ತೆ ಬಡ್ಡಿ ದರಗಳಲ್ಲಿ ಇಳಿಕೆಯಾಗಿದೆ. ಇದೇ ಜ.1 ರಿಂದ ಆರಂಭಗೊಂಡಂತೆ ಮಾ.30 ರವರೆಗಿನ ಬಡ್ಡಿ ದರಗಳಲ್ಲಿ ಶೇ.0.2 ಕಡಿತವನ್ನು ವಿತ್ತ ಮಂತ್ರಾಲಯವು ಇದೀಗ ಘೋಷಿಸಿದೆ. ದೇಶದಲ್ಲಿ ಬಡ್ಡಿ ದರ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಈ ಕಡಿತ ಬಹುತೇಕ ನಿರೀಕ್ಷಿತವಾಗಿತ್ತು. ನಾವೀಗ ಬಡ್ಡಿ ದರಗಳ ಇಳಿಕೆಯ ಪಥದಲ್ಲಿದ್ದೇವೆ.
ಫೆಬ್ರವರಿ 2016 ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಎಪ್ರಿಲ್ 2016 ರ ನಂತರ ಸಣ್ಣ ಉಳಿತಾಯದ ಬಡ್ಡಿ ದರಗಳು ಪ್ರತಿ ತ್ತೈಮಾಸಿಕಕ್ಕೊಮ್ಮೆ ಬದಲಾಗುತ್ತವೆ. ಆ ಮೊದಲು ಅವು ವರ್ಷಕ್ಕೊಮ್ಮೆ ಬದಲಾಗುತ್ತಿದ್ದವು ಮತ್ತು ಅದಕ್ಕೂ ಮೊದಲು ಯಾವಗಾದರೊಮ್ಮೆ ಅಂಚೆಯಣ್ಣ ಎಚ್ಚೆತ್ತಾಗ ಮಾತ್ರ ಬಡ್ಡಿ ದರಗಳು ಬದಲಾಗುತ್ತಿದ್ದವು. ಸದ್ಯದ ಪದ್ಧತಿಯಲ್ಲಿ ಮಾರುಕಟ್ಟೆಯ ದರಕ್ಕೆ ಅನುಸಾರವಾಗಿ ಪ್ರತಿ ಜನವರಿ, ಎಪ್ರಿಲ…, ಜುಲೈ ಹಾಗೂ ಅಕ್ಟೋಬರ್ 1 ನೆಯ ತಾರೀಕಿನಿಂದ ಅನ್ವಯವಾಗುವಂತೆ ಬಡ್ಡಿ ದರಗಳು ಪರಿಷ್ಕೃತಗೊಳ್ಳುತ್ತವೆ.
ಈ ಬಾರಿ ಅತಿ ಮುಖ್ಯವಾಗಿ ಪಿಪಿಎಫ್ ಖಾತೆಯ ಬಡ್ಡಿ ದರವನ್ನು ಶೇ.8ರಿಂದ ಶೇ.7.9ಕ್ಕೆ ಇಳಿಸಲಾಗಿದೆ. ಅಲ್ಲದೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರವನ್ನು ಶೇ.8.3 ದಿಂದ ಶೇ.8.1 ಕ್ಕೆ ಇಳಿಸಲಾಗಿದೆ. ಆದರೆ ಸೀನಿಯರ್ ಸಿಟಿಜನ್ ಯೋಜನೆಗಳ ಬಡ್ಡಿ ದರಗಳನ್ನು ಮಾತ್ರ ಈ ಹಿಂದಿನಂತೆ ಶೇ.8.3 ದರದಲ್ಲಿಯೇ ಮುಂದುವರಿಸಲಾಗಿದೆ. ಅಷ್ಟೇ ಅಲ್ಲದೆ ಕಿಸಾನ್ ವಿಕಾಸ ಪತ್ರದ ದರವನ್ನು ಶೇ.7.5ದಿಂದ ಶೇ.7.3 ಕ್ಕೂ (118 ಮಾಸ ಅವಧಿ), ರಾಷ್ಟ್ರೀಯ ಉಳಿತಾಯ ಪತ್ರದ ದರವನ್ನು ಶೇ.7.8ರಿಂದ ಶೇ.7.6ಕ್ಕೂ, ಮಂತ್ಲಿ ಇನ್‌ಕಂ ಸ್ಕೀಮ್ ದರವನ್ನು ಶೇ.7.5ರಿಂದ ಶೇ.7.3ಕ್ಕೂ ಇಳಿಸಲಾಗಿದೆ. ಉಳಿದಂತೆ ವಿವಿಧ ಅವಧಿ ಠೇವಣಿಗಳ ದರಗಳನ್ನೂ ಇಳಿಸಲಾಗಿದೆ (ಟೇಬಲ್ ನೋಡಿ). ಅಂಚೆ ಇಲಾಖೆಯ ಸೇವಿಂಗ್ಸ್ ಖಾತೆಯ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಈವರೆಗೆ ಶೇ.4 ಇದ್ದಿದ್ದು ಇನ್ನು ಮುಂದೆಯೂ ಶೇ.4 ಇರಲಿದೆ.
ಈ ದರ ಕಡಿತದಿಂದ ಹಲವರ ಆದಾಯದಲ್ಲಿ ಇಳಿಕೆ ಉಂಟಾಗಲಿದೆ. ಮೊದಲೇ ಕಡಿಮೆಯಿದ್ದ ಬಡ್ಡಿ ಆದಾಯ ಇನ್ನಷ್ಟು ಕಡಿಮೆಯಾಗಲಿದೆ. ಈ ಸಂದರ್ಭದಲ್ಲಿ ಪೋಸ್ಟಾಫೀಸಿನ ಕೆಲ ಮುಖ್ಯ ಹೂಡಿಕೆಗಳ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ
1. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಂ (ಎಸ್.ಸಿ.ಎಸ್.ಎಸ್.)
60 ವರ್ಷ ಮೀರಿದ ಸೀನಿಯರ್ ಸಿಟಿಜನ್‌ಗಳಿಗಾಗಿಯೇ ಸರಕಾರವು ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಈ ನಿಗದಿತ ಆದಾಯದ ಸ್ಕೀಂ ಯಾವುದೇ ರಿಸ್ಕ್ ಇಲ್ಲದೆ ಶೇ.8.3 ಬಡ್ಡಿ ನೀಡುತ್ತದೆ. ಬಡ್ಡಿಯು ಪ್ರತಿ ತ್ತೈಮಾಸಿಕ ಕೈಸೇರುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ ರೂ.1000ದಿಂದ ಆರಂಭಿಸಿ ರೂ. 15 ಲಕ್ಷ ರೂಪಾಯಿಗಳವರೆಗೆ ಇದರಲ್ಲಿ ಹೂಡಬಹುದು. ಇದು 5 ವರ್ಷಗಳ ಸ್ಕೀಂ ಆಗಿದ್ದು, ಅಂತ್ಯದಲ್ಲಿ ಇನ್ನೂ 3 ವರ್ಷಗಳಿಗೆ ಒಂದು ಬಾರಿ ನವೀಕರಿಸಬಹುದಾಗಿದೆ. ಈ ಖಾತೆಯಲ್ಲಿ ಹೂಡಿದ ಮೊತ್ತಕ್ಕೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ವಿನಾಯತಿಯನ್ನು ಪಡೆಯಬಹುದಾಗಿದೆ. ಆದರೆ ಇದರಿಂದ ಪಡೆಯುವ ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ.
2. ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್.ಎಸ್.ಸಿ.)
ಅಂಚೆಯಣ್ಣನ ಇನ್ನೊಂದು ಭದ್ರ ಯೋಜನೆ. 5 ವರ್ಷಗಳ ಅವಧಿಯ ಈ ಸರ್ಟಿಫಿಕೇಟ್ ಅಂತ್ಯದಲ್ಲಿ ಮಾತ್ರ ದುಡ್ಡು ನೀಡುತ್ತದೆ. ಆದರೆ, ವಾರ್ಷಿಕ ಶೇ.7.6 ಲೆಕ್ಕದಲ್ಲಿ ಬಡ್ಡಿ ಕ್ರೆಡಿಟ್ ಆಗುತ್ತದೆ. ಕನಿಷ್ಠ ಮೊತ್ತ ರೂ.500 ಆಗಿದ್ದು, ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದರಲ್ಲಿ ಹೂಡಿದ ಮೊತ್ತ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ವಿನಾಯಿತಿ ಪಡೆಯುತ್ತದಲ್ಲದೆ, ಇದರಿಂದ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿ ಕೈಸೇರದಿದ್ದರೂ ಮರು ಹೂಡಿಕೆಯ ಹೆಸರಿನಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯತಿ ಪಡೆಯುತ್ತದೆ. ಆದರೆ ಅಂತಹ ಬಡ್ಡಿಯನ್ನು ಆ ವರ್ಷದ ತೆರಿಗೆ ಅರ್ಹ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟತಕ್ಕದ್ದು.
3. ಮಂತ್ಲಿ ಇನ್‌ಕಂ ಸ್ಕೀಂ (ಎಮ….ಐ.ಎಸ್.)
ಪ್ರತಿ ತಿಂಗಳೂ ಬಡ್ಡಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ ಶೇ.7.3 ಬಡ್ಡಿ ನೀಡುತ್ತದೆ. ಗರಿಷ್ಠ ಮೊತ್ತ ರೂ 4.5 ಲಕ್ಷ (ಸಿಂಗಲ್ ಎಕೌಂಟ್) ಹಾಗೂ ರೂ. 9 ಲಕ್ಷ (ಜಾಯಿಂಟ್ ಎಕೌಂಟ್) ಆಗಿರುತ್ತದೆ. ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಚೇರಿಯಲ್ಲಿ ಆರ್.ಡಿ. ಮಾಡಿದರೆ ಒಟ್ಟಾರೆ ಪ್ರತಿಫಲ ಶೇ. 7.5 ಅಂದಾಜು ದೊರಕುತ್ತದೆ. ಹಲವಾರು ಅಂಚೆಯ ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿ ಹರಿವು ಇರುವ ಈ ಯೋಜನೆ ತೆರಿಗೆ ಅರ್ಹ ಆದಾಯ. ಹೂಡಿಕೆಯ ಮೇಲೂ ಪ್ರತಿಫಲದ ಮೇಲೂ ಯಾವುದೇ ರೀತಿಯ ಕರ ವಿನಾಯತಿ ಇರುವುದಿಲ್ಲ.
4.ಕಿಸಾನ್ ವಿಕಾಸ ಪತ್ರ (ಕೆ.ವಿ.ಪಿ.)
ಅಂಚೆ ಕಚೇರಿಯ ಇನ್ನೊಂದು ಯೋಜನೆ. 118 ತಿಂಗಳುಗಳಲ್ಲಿ ಡಬಲ್ ಆಗುವ ಈ ಸ್ಕೀಂ ವಾರ್ಷಿಕ ಶೇ.7.3 ಪ್ರತಿಫಲ ನೀಡುತ್ತದೆ. ಕನಿಷ್ಠ ಮೊತ್ತ ರೂ. 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆಯೂ ಇದೆ, ಪ್ರತಿಫಲವೂ ಇದೆ. ಆದರೆ ದಿಢೀರ್ ದುಡ್ಡು ಬೇಕೆಂದಾಗ (ಲಿಕ್ವಿಡಿಟಿ) ಮತ್ತು ತೆರಿಗೆಯ ಮಟ್ಟಿಗೆ ಆಕರ್ಷಕವಲ್ಲ.
ಯೋಜನೆ ಹೆಸರು ಹಳೆ ಬಡ್ಡಿ ದರ % ಹೊಸ ಬಡ್ಡಿ ದರ %
5. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿ.ಪಿ.ಎಫ್)
15 ವರ್ಷಗಳ ಸಂಪೂರ್ಣ ತೆರಿಗೆ ವಿನಾಯತಿ ಇರುವ ಶೇ.7.6 ಬಡ್ಡಿ ದರದ ಈ ಸಿಹಿ ಅಂಬಟೆಕಾಯಿಯ ಬಗ್ಗೆ ಸವಿವರವಾಗಿ ಕಾಕುವಿನಲ್ಲಿ ಈ ಹಿಂದೆ ಎರಡೆರಡು ಬಾರಿ ಬರೆದಿದ್ದೇನೆ. ಇದರಲ್ಲಿ ರೂ. 1,50,000 ವರೆಗೆ ಸೆಕ್ಷನ್ 80ಸಿ ಅಡಿಯಲ್ಲಿ ಹಾಗೂ ಇದರ ಮೇಲಿನ ಬಡ್ಡಿಯು ಸಂಪೂರ್ಣವಾಗಿ ಸೆಕ್ಷನ್ 10ರ ಅನ್ವಯ ಕರ ರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯತಿ ಮಟ್ಟಿಗೆ ಉತ್ತಮವಾದರೂ ಇದರಲ್ಲಿ ಬೇಕೆಂದಾಗ ದುಡ್ಡು ಕೈಗೆ ಸಿಗುವುದಿಲ್ಲÉ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3ನೇ ವರ್ಷದಿಂದ ಸಾಲ ಸೌಲಭ್ಯವೂ 7ನೇ ವರ್ಷದಿಂದ ಅಂಶಿಕ ಹಿಂಪಡೆತವೂ ಇದೆ.
6. ಪೋಸ್ಟಲ್ ಟೈಮ್ ಡೆಪಾಸಿಟ್ (ಟಿ.ಡಿ)
ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ ಪೋಸ್ಟಲ್ ಟೈಮ್ ಡೆಪಾಸಿಟ್ ಎಂಬ ಈ ಎಫ್ಡಿ ಸ್ಕೀಂ ಇನ್ನು ಮುಂದೆ 5 ವರ್ಷಕ್ಕೆ ಶೇ.7.4 ಬಡ್ಡಿ ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳಿಗೆ ಶೇ.6.6, ಶೇ. 6.7, ಶೇ. ಶೇ.6.9 ಬಡ್ಡಿ ನೀಡುತ್ತದೆ. 5 ವರ್ಷಗಳ ಟಿ.ಡಿ.ಗಳು ಮಾತ್ರ ಸೆಕ್ಷನ್ 80ಸಿ ಆದಾಯ ವಿನಾಯತಿಗೆ ಅರ್ಹ, ಅದರಿಂದ ಕಡಿಮೆ ಅವಧಿಯ ಡೆಪಾಸಿಟ್‌ಗಳು ಅಲ್ಲ. ಬ್ಯಾಂಕು ಎಫ್ಡಿಗಳ ಮೇಲಿನ ಬಡ್ಡಿ ಶೇ. 6.0 ಆಸುಪಾಸು ಇಳಿದ ಸಂದರ್ಭದಲ್ಲಿ ಅಂಚೆಯಣ್ಣನೇ ಇನ್ನೂ ಉತ್ತಮ ಅನ್ನಿಸುತ್ತದೆ.
7. ಸುಕನ್ಯಾ ಸಮೃದ್ಧಿ ಯೋಜನೆ
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮಾತ್ರ ಇರುವ ಈ ಯೋಜನೆ ಈಗ ಶೇ.8.1 ಕರಮುಕ್ತ ಪ್ರತಿಫಲ ನೀಡುತ್ತದೆ. ಹೂಡಿಕೆಯ ಮೇಲೂ ಬಡ್ಡಿಯ ಮೇಲೂ ಹಿಂಪಡೆತದ ಮೇಲೂ ಕರ ವಿನಾಯಿತಿ ಉಳ್ಳ ಈ ಯೋಜನೆ ನಿಗದಿತ ಆದಾಯದ ಯೋಜನೆಗಳ ಪೈಕಿ ಅತ್ಯುತ್ತಮವಾದ¨ªೆಂದು ಹೇಳಬಹುದು. ಈ ಬಗ್ಗೆ ವಿಸ್ತೃತವಾಗಿ ಕಾಕುವಿನಲ್ಲಿ ಈ ಹಿಂದೆ ಬರೆಯಲಾಗಿದೆ.
8. ಆರ್.ಡಿ.ಗಳು
ಅಂಚೆ ಕಚೇರಿಯ ರಿಕರಿಂಗ್ ಡೆಪಾಸಿಟ್/ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ. ಇದರಲ್ಲಿ ಶೇ.6.9 ಬಡ್ಡಿದರ ಯಾವುದೇ ಕರ ವಿನಾಯತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ ಸುಮಾರು ಶೇ. 7.1 ಪ್ರತಿಫಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ (ನಗದೀಕರಣ) ಚೆನ್ನಾಗಿಲ್ಲ.
ಗಮನಿಸಿ: ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಈ ಹೊಸ ದರಗಳು ಹಳೆ ಹಾಗೂ ಹೊಸ ಖಾತೆಗಳಿಗೂ ಅನ್ವಯಿಸುತ್ತವೆ. ಉಳಿದೆಲ್ಲಾ ಖಾತೆಗಳಲ್ಲಿ ಬಡ್ಡಿ ದರಗಳು ಜ.1ರ ಬಳಿಕ ತೆರೆಯಲ್ಪಡುವ ಹೊಸ ಖಾತೆಗಳಿಗೆ ಮಾತ್ರ ಅನ್ವಯವಾಗಲಿದೆ. ಅಂದರೆ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳೂ ಪ್ರತಿ ವರ್ಷವೂ ಹೂಡಿಕೆ ಮಾಡುತ್ತಾ ಹೋಗುವ ಖಾತೆಗಳು. ಅಂತಹ ಖಾತೆಗಳ ಮೇಲೆ ಪ್ರತಿ ತ್ತೈಮಾಸಿಕಕ್ಕೆ ಆವಾಗ ಪ್ರಚಲಿತವಾಗಿರುವ ಬಡಿª ದರಗಳನ್ನು ಅನ್ವಯಿಸಲಾಗುತ್ತವೆ. ಉಳಿದೆಲ್ಲಾ ಖಾತೆಗಳು ಸಿಂಗಲ್ ಡೆಪಾಸಿಟ್ ಅಥವಾ ಏಕಗಂಟಿನಲ್ಲಿ ಹೂಡಿಕೆ ಮಾಡುವಂತವುಗಳು. ಅವುಗಳ ಮೇಲೆ ಸಿಗುವ ಅಂತ್ಯದವರೆಗಿನ ಬಡ್ಡಿ ದರವು ಹೂಡಿಕೆಯ ಸಮಯದ ದರವನ್ನು ಅನುಸರಿಸುತ್ತವೆ. ಪ್ರತಿ ತ್ತೈಮಾಸಿಕದಲ್ಲಿ ಬದಲಾಗುವ ಬಡ್ಡಿ ದರಗಳನ್ನು ಅನುಸರಿಸುವುದಿಲ್ಲ. ಅಪವಾದವೆಂಬಂತೆ ಆರ್‌ಡಿ ಖಾತೆಗಳಲ್ಲೂ ಆರಂಭದಲ್ಲಿ ನಮೂದಿತ ಬಡ್ಡಿದರ ಕೊನೆಯವರೆಗೆ ಸಿಗುತ್ತದೆ. ಎಲ್ಲಾ ಹೂಡಿಕೆದಾರರೂ ಇದನ್ನು ಗಮನದಲ್ಲಿಡಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.