ದೇಶದ ಏಕತೆ ಇನ್ನಷ್ಟು ಸದೃಢ: ನ್ಯಾ| ಎಂ . ರಾಮಾ ಜೋಯಿಸ್
Team Udayavani, Jan 15, 2018, 10:13 AM IST
ಮಂಗಳೂರು: ಅನೇಕ ಜಾತಿ, ಭಾಷೆ, ಸಂಪ್ರದಾಯ, ಆಚಾರ ವಿಚಾರಗಳಿದ್ದರೂ ಭಾರತದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅನನ್ಯತೆ ದೇಶವನ್ನು ಭದ್ರವಾಗಿ ಒಂದಾಗಿ ಜೋಡಿಸಿದೆ. ಇದನ್ನು ಇನ್ನಷ್ಟು ಸದೃಢಗೊಳಿಸುವ ಕಾರ್ಯ ನಡೆಯಬೇಕು ಎಂದು ನಿವೃತ್ತ ನ್ಯಾಯಾಧೀಶ ಹಾಗೂ ಬಿಹಾರದ ಮಾಜಿ ರಾಜ್ಯಪಾಲ ನ್ಯಾ| ಎಂ. ರಾಮಾ ಜೋಯಿಸ್ ಹೇಳಿದರು.
ಸನಾತನ ನಾಟ್ಯಾಲಯ ಮಂಗಳೂರು ಕಲಾ ಸಂಸ್ಥೆಯ ನೂತನ ಪ್ರಸ್ತುತಿ “ಪುಣ್ಯಭೂಮಿ ಭಾರತ’ ನುಡಿ ನಾದ ನಾಟ್ಯಾಮೃತವನ್ನು ನಗರದ ಪುರಭವನದಲ್ಲಿ ರವಿವಾರ ಜರಗಿದ ಸಮಾ ರಂಭದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತೀಯರ ಮನಸ್ಸಿನಲ್ಲಿ ದೇಶದ ಬಗ್ಗೆ ಅತ್ಯಂತ ಪೂಜ್ಯ ಭಾವನೆ ಇದೆ. ನಾವು ಎಂದೂ ದೇಶವನ್ನು ಒಂದು ಆಸ್ತಿ ಎಂದೂ ಪರಿಗಣಿಸಿಲ್ಲ, ಮಾತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ವಿದೇಶಿಯರ ಅನೇಕ ಆಕ್ರಮಣಗಳಿಗೆ ತುತ್ತಾದರೂ ದೇಶ ಒಂದಾಗಿ ಮತ್ತೆ ಎದ್ದುನಿಂತಿದೆ. ಇದಕ್ಕೆ ಮುಖ್ಯ ಕಾರಣ ಈ ನೆಲದ ಸಂಸ್ಕೃತಿಯ ಶಕ್ತಿ ಎಂದರು.
ದೇಶದ ಏಕತೆ ಇನ್ನಷ್ಟು ಭದ್ರವಾಗುವ, ವಿಶ್ವದ ಪ್ರಭಾವಿ ರಾಷ್ಟ್ರವಾಗುವ ಸಂಕಲ್ಪ ನಮ್ಮದಾಗ ಬೇಕು. ಸನಾತನ ನಾಟ್ಯಾಲಯ, ಮಂಗಳೂರು ರೂಪಿಸಿರುವ “ಪುಣ್ಯ ಭೂಮಿ ಭಾರತ’ ಕಾರ್ಯಕ್ರಮ ಇದಕ್ಕೆ ಪೂರಕವಾಗಿದೆ. ಇದಕ್ಕಾಗಿ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದರು.
ಸಂಸ್ಕಾರ ಭಾರತಿಯ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ನಲ್ಲಿ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಅವರು “ರಾಷ್ಟ್ರ ದೇವೋಭವ’ದ ಬಗ್ಗೆ ಹಾಗೂ ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಅವರು “ಪುಣ್ಯಭೂಮಿ ಭಾರತ’ದ ಅವಲೋಕನ ಮಾಡಿದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ. ವಿ| ಶಾರದಾ ಮಣಿಶೇಖರ್, ವಿ| ಶ್ರೀಲತಾ ನಾಗರಾಜ್, ಆದರ್ಶ ಗೋಖಲೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.