ಬಿಕರ್ನಕಟ್ಟೆ : ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
Team Udayavani, Jan 15, 2018, 10:26 AM IST
ಮಂಗಳೂರು: ಬಿಕರ್ನಕಟ್ಟೆಯ ಬಾಲಯೇಸು ಪುಣ್ಯಕ್ಷೇತ್ರದಲ್ಲಿ “ಆಂತರಿಕ ವಿಮೋಚನೆ ಪಡೆಯೋಣ, ಫಲಭರಿತ ಜೀವನ ನಡೆಸೋಣ’ ಎಂಬ ಸಂದೇಶದೊಂದಿಗೆ ಎರಡು ದಿನಗಳ ವಾರ್ಷಿಕ ಮಹೋತ್ಸವ ರವಿವಾರ ಆರಂಭಗೊಂಡಿದ್ದು, ಸಂಜೆ 6 ಗಂಟೆಗೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಲಕ್ನೋ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಜೆ. ಮಥಾಯಸ್ ಅವರು ಪ್ರಧಾನ ಗುರುಗಳಾಗಿ ಭಾಗವಹಿಸಿದ್ದರು. ಮಂಗಳೂರು ಆಸುಪಾಸಿನ ಹಲವಾರು ಮಂದಿ ಧರ್ಮಗುರುಗಳು ಸಹಭಾಗಿಗಳಾದರು.
ಬಿಷಪ್ ರೈ| ರೆ| ಡಾ| ಜೆರಾಲ್ಡ್ ಜೆ. ಮಥಾಯಸ್ ಅವರು ತಮ್ಮ ಸಂದೇಶದಲ್ಲಿ ಬಾಲ ಯೇಸುವಿನ ಭಕ್ತಿ ಆಚರಣೆಯ ಉಗಮವನ್ನು ವಿವರಿಸಿ ಬಾಲಯೇಸುವಿಗೆ ವಿಶೇಷ ಭಕ್ತಿಯನ್ನು ಅರ್ಪಿಸಿದ ಕೆಲವರಿಗೆ ಸಂತ ಪದವಿ ಕೂಡ ಪ್ರಾಪ್ತಿಯಾಗಿದೆ ಎಂದರು.
ಕಿನ್ನಿಗೋಳಿಯ ಸೈಂಟ್ ಮೇರೀಸ್ ಶಾಲೆಯ ಪ್ರಾಂಶುಪಾಲ ಫಾ| ಸುನಿಲ್ ಪಿಂಟೊ ಪ್ರವಚನ ನೀಡಿದರು. ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ಫಾ| ವಿಲ್ಫೆಡ್, ಫಾ| ಪ್ರಕಾಶ್ ಡಿ’ಕುನ್ಹಾ, ಫಾ| ಪಿಯುಸ್ ಜೇಮ್ಸ್ ಡಿ’ಸೋಜಾ ಅವರು ಉಪಸ್ಥಿತರಿದ್ದರು.
ಸೋಮವಾರ ಬೆಳಗ್ಗೆ 10.30ಕ್ಕೆ ನಡೆಯುವ ಹಬ್ಬದ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ವಹಿಸಲಿದ್ದಾರೆ. ಸೋಮವಾರ ಬೆಳಗ್ಗೆ 6.30, 7.30, 9ಕ್ಕೆ ಮತ್ತು ಮಧ್ಯಾಹ್ನ 12 ಗಂಟೆಗೆ (ಕನ್ನಡದಲ್ಲಿ) ಬಲಿ ಪೂಜೆ, ಸಂಜೆ 5ಕ್ಕೆ ಆಂತರಿಕ ಅಸ್ವಸ್ಥತಾ ಪ್ರಾರ್ಥನೆ, 6ಕ್ಕೆೆ ಬಲಿ ಪೂಜೆ ಮತ್ತು 7.15ಕ್ಕೆ ಪರಮ ಪ್ರಸಾದ ಮೆರವಣಿಗೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.