ಕೋಡಿಯಾಲ್‌ಬೈಲ್, ಪಿವಿಎಸ್ ವೃತ್ತದಲ್ಲಿ ಸ್ವಚ್ಛತಾ ಕಾರ್ಯ
Team Udayavani, Jan 15, 2018, 10:47 AM IST
ಮಹಾನಗರ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 11ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ರವಿವಾರ ಕೋಡಿಯಾಲ್‌ಬೈಲ್‌ಪಿವಿಎಸ್ ವೃತ್ತದ ಪ್ರದೇಶದಲ್ಲಿ ನಡೆಯಿತು.
ಅಭಿಯಾನಕ್ಕೆ ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ರಮೇಶ್ ರಾವ್ ಹಾಗೂ ಬೆಸೆಂಟ್ ಕಾಲೇಜಿನ ಉಪನ್ಯಾಸಕ ಬೀಡುಬೈಲು ಗಣಪತಿ ಭಟ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ಬ್ರಹ್ಮಚಾರಿ ಶಿವಕುಮಾರ್, ಸುಬ್ರಾಯ್ ನಾಯಕ್ ಸೇರಿದಂತೆ ಸುಮಾರು 200 ಕಾರ್ಯಕರ್ತರು ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಸ್ವಚ್ಛತೆ
ಬೆಸೆಂಟ್ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಉಪನ್ಯಾಸಕ ಆ್ಯಂಡ್ರೂ ರೋಡ್ರಿಗಸ್, ಪ್ರೊ| ಅಮಿತಾ ಮಾರ್ಗದರ್ಶನದಲ್ಲಿ ಪಿವಿ ಎಸ್ ವೃತ್ತದಿಂದ ಕರಂಗಲ್ಪಾಡಿ ಸಾಗುವ ಮುಖ್ಯರಸ್ತೆಯ ಬದಿಗಳನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸಿದರು. ಮತ್ತೊಂದು ಗುಂಪು ಚೇತನಾ ಕಾಟಿಯಾರ್ ಹಾಗೂ ಬಳಗ ತೋಡಿನಲ್ಲಿದ್ದ ಕಸಕಡ್ಡಿ ತೆಗೆದು ಹಸನು ಮಾಡಿದರು. ನಿವೇದಿತಾ ಬಳಗದ ಸದಸ್ಯೆಯರು ಉಷಾ ದಿನಕರ್ ರಾವ್ ಹಾಗೂ ವಾಸಂತಿ ನಾಯಕ್ ಜತೆಯಾಗಿ ಒಟ್ಟುಗೂಡಿದ ತ್ಯಾಜ್ಯವನ್ನು ಟಿಪ್ಪರ್ ಗೆ ತುಂಬಿಸುವ ಕಾರ್ಯ ಮಾಡಿದರು. ಕೆಪಿಟಿ ಎನ್ನೆಸ್ಸೆಸ್ ಯುವ ಕಾರ್ಯಕರ್ತರು ಕಾಂಪೌಂಡಿನ ಮೇಲೆ ಹಾಗೂ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕತ್ತರಿಸಿದರು.
ಫುಟ್ ಪಾತ್ ದುರಸ್ತಿ
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದ ಫುಟ್‌ಪಾತ್ ಅಲ್ಲಲ್ಲಿ ಕಿತ್ತುಹೋಗಿತ್ತು. ತತ್ಪರಿಣಾಮ ಆ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೋಡಿಗೆ ಬೀಳುವ ಅಪಾಯವಿತ್ತು. ಇದನ್ನು ತಪ್ಪಿಸಲು ಸುಮಾರು ಹತ್ತು ಕಲ್ಲಿನ ಸ್ಲಾಬ್ ಗಳನ್ನು ಹೊತ್ತು ತಂದು ಕಾಲುದಾರಿಯನ್ನು ಸರಿಮಾಡಿ, ತೋಡುಗಳನ್ನು ಸ್ವಚ್ಛಗೊಳಿಸಿ ಮುಚ್ಚಲಾಗಿದೆ. ಅಭಿಯಾನದ ಮುಖ್ಯ ಸಂಯೋಜಕ ದಿಲ್‌ರಾಜ್ ಆಳ್ವ ಮಾರ್ಗದರ್ಶನದಲ್ಲಿ ಸಂದೀಪ್‌ಕುಮಾರ್ ತಾರಾನಾಥ್ ಹಾಗೂ ಕುಮಾರ್ ಜಿಮ್ ಗೆಳೆಯರು ಶ್ರಮವಹಿಸಿ ಕಾರ್ಯ ಪೂರ್ಣಗೊಳಿಸಿದರು.
ಆವರಣ ಗೋಡೆಯ ಸ್ವಚ್ಛತೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಆವರಣ ಗೋಡೆಯನ್ನು ನೀರಿನಿಂದ ತೊಳೆಯಲಾಯಿತು. ಅದಕ್ಕೆ
ತಾಗಿಕೊಂಡಿರುವ ಫುಟ್‌ಪಾತ್‌ನಲ್ಲಿ ಹಾಕಿದ್ದ ಕಸದ ರಾಶಿಯನ್ನು ತೆಗೆಯಲಾಯಿತು ಹಾಗೂ ಸುತ್ತಮುತ್ತಲಿನ ಎಲ್ಲ ಅಂಗಡಿಗಳಿಗೆ ಹೋಗಿ ಕಾಲುದಾರಿಯಲ್ಲಿ ಕಸತ್ಯಾಜ್ಯ ಸುರಿಯದಂತೆ ವಿನಂತಿಸಲಾಗಿದೆ. ಕೊಳೆಯಾಗಿದ್ದ ಕಾಂಪೌಂಡ್ ಗೋಡೆಗೆ ಬಣ್ಣ ಬಳಿಯಲಾಯಿತು. ಬರುವ ದಿನಗಳಲ್ಲಿ ತ್ಯಾಜ್ಯ ಬೀಳದಂತೆ ನೋಡಿಕೊಂಡು ಆವರಣಗೋಡೆಯನ್ನು ಅರ್ಥಪೂರ್ಣ ಚಿತ್ರಗಳಿಂದ ಸುಂದರಗೊಳಿಸಲಾಗುವುದು.
ಶುಭೋದಯ ಆಳ್ವ, ಸುರೇಶ್ ಶೆಟ್ಟಿ ಹಾಗೂ ಉಮಾನಾಥ್ ಕೋಟೆಕಾರ್ ಅಭಿಯಾನದ ಉಸ್ತುವಾರಿ ವಹಿಸಿದ್ದರು. ಪಿ.ಎನ್. ಭಟ್, ಜಪಾನಿ ಪ್ರಜೆ ಯೋಕೋ, ರಕ್ಷಿತ್ ಕೆ.ಪಿ.ಆರ್., ರಾಜೇಂದ್ರ ಡಿ.ಎಸ್. ಮೊದಲಾದವರು ಅಭಿಯಾನದಲ್ಲಿ
ಭಾಗವಹಿಸಿದ್ದರು. ಎಲ್ಲ ಕಾರ್ಯಕರ್ತರಿಗೆ ಶ್ರೀ ಲಕ್ಷ್ಮೀ ನಾರಾಯಣಿ ದೇವಸ್ಥಾನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸ್ವಚ್ಛತ ಅಭಿಯಾನಕ್ಕೆ ಎಂಆರ್‌ಪಿಎಲ್ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸಿದೆ.
ಬಸ್ ತಂಗುದಾಣಕ್ಕೆ ಬಣ್ಣ
ಕೊಡಿಯಾಲ್‌ಬೈಲ್ ಬಸ್ ತಂಗುದಾಣ ನಿರ್ವಹಣೆ ಇಲ್ಲದೇ ಪ್ರಯಾಣಿಕರು ಕುಳಿತುಕೊಳ್ಳಲು ಹಿಂಜರಿಯುತ್ತಿದ್ದುದನ್ನು ಗಮನಿಸಿ ಇಂದು ಸ್ವತ್ಛ ಮಂಗಳೂರು ಕಾರ್ಯಕರ್ತರು ಅಲ್ಲಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಜಾಹೀರಾತುಗಳನ್ನು ಕಿತ್ತುಹಾಕಿದರು. ಅನಂತರ ಪಾಚಿಹಿಡಿದ ಮೇಲ್ಛಾವಣಿಯನ್ನು ನೀರಿನಿಂದ ತಿಕ್ಕಿತೊಳೆದು ತಂಗುದಾಣದ ಒಳಭಾಗ ಹಾಗೂ ಹೊರಭಾಗಗಳನ್ನು ಬಣ್ಣ ಹಚ್ಚಿ ಸುಂದರಗೊಳಿಸಿದರು. ರಾಜೇಶ್ವರಿ ಕೊಡಿಕಲ್, ಸುಧೀರ್ ಕೊಕ್ರಾಡಿ ಹಾಗೂ ಹಿಂದೂ ವಾರಿಯರ್ಸ್ ನ ಸದಸ್ಯರು ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿ ತಂಗುದಾಣವನ್ನು ಸುಂದರಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.