ಭದ್ರಂ, ಶುಭಂ, ಮಂಗಳಂ…ಬಾಗಿಲು ಭದ್ರವಾಗಿರಬೇಕು…
Team Udayavani, Jan 15, 2018, 3:06 PM IST
ಮರದ ಹಲಗೆಗಳ ದಪ್ಪ ಸುಮಾರು ಒಂದರಿಂದ ಒಂದೂವರೆ ಇಂಚು ಇರುವುದರಿಂದ, ಕೆತ್ತನೆ ಕೆಲಸಮಾಡುವಾಗ ಅರ್ಧದಿಂದ ಮುಕ್ಕಾಲು ಇಂಚಿನಷ್ಟು ಮರ ಕೊರೆದು ಹೋದರೂ ನಮಗೆ ನಂತರದಲ್ಲಿ ಸಿಗುವ ದಪ್ಪ ಕಡಿಮೆ. ಆದುದರಿಂದ, ಬಾಗಿಲಿನ ಹಿಂದೆ ಕಡೇ ಪಕ್ಷ ಅರ್ಧ ಇಂಚಿನ ಪ್ಲೆ„ವುಡ್ ಅನ್ನು, ಅಂಟು ಉಪಯೋಗಿಸಿ ಸಿಗಿಸಿದರೆ, ನಿಮ್ಮ ಮನೆಯ ಬಾಗಿಲು ಸದೃಢ ವಾಗುವುದರ ಜೊತೆಗೆ ಸುಂದರವಾಗಿಯೂ ಕಾಣುತ್ತದೆ!
ಎಲ್ಲರಿಗೂ ಮನೆಯ ಬಾಗಿಲುಗಳ, ಅದರಲ್ಲೂ ಮುಂಬಾಗಿಲಿನ ಭದ್ರತೆಯ ಬಗ್ಗೆ ಹೆಚ್ಚು ಆತಂಕವಿರುತ್ತದೆ. ಮನೆಯ ಒಳಗೆ- ಹೊರಗೆ ಎಂದು ನಿರ್ದಿಷ್ಟವಾಗಿ ಲಕ್ಷ್ಮಣರೇಖೆಯಂತೆ ನಿಲ್ಲುವುದು ಈ ಮುಂಬಾಗಿಲೇ ಆದ ಕಾರಣ ನಮಗೆ ಇದು ಹೆಚ್ಚು ಮುಖ್ಯವಾಗುತ್ತದೆ. ಒಳಗಿನ ಬಾಗಿಲುಗಳು ಹೇಗಿದ್ದರೂ ಪರವಾಗಿಲ್ಲ. ಮುಂದಿನ ಹಾಗೆಯೇ ಹಿಂದಿನ ಬಾಗಿಲು ಇದ್ದರೆ, ಅದೂ ಕೂಡ ಗಟ್ಟಿಮುಟ್ಟಾಗಿರಲಿ ಎಂದು ಆಶಿಸುತ್ತೇವೆ. ಕಳ್ಳಕಾಕರು ಮನೆಯನ್ನು ಪ್ರವೇಶಿಸಲು ಸಾಮಾನ್ಯವಾಗಿ ಪ್ರಯತ್ನಿಸುವುದೇ ಈ ಬಾಗಿಲುಗಳ ಮೂಲಕ. ಆದುದರಿಂದ ಭದ್ರತೆಯ ದೃಷ್ಟಿಯಿಂದಲೂ ನಾವು ಇವನ್ನು ಸದೃಢವಾಗಿ ಮಾಡುವುದರ ಜೊತೆಗೆ, ಕಳ್ಳಕಾಕರಿಗೆ -“ಈ ಮನೆಯ ಬಾಗಿಲು ಒಡೆಯುವುದು ಕಷ್ಟ, ಬೇರೆ ಕಡೆ ಪ್ರಯತ್ನಿಸೋಣ’ಎಂಬಂತಿರಬೇಕು ಎಂದೂ ನಿರ್ಧರಿಸಿರುತ್ತೇವೆ. ಆದರೆ ನಾವು ನಮ್ಮ ಮನೆಯ ಮುಂಬಾಗಿಲನ್ನು ತೀರ ಕೋಟೆ ಬಾಗಿಲಿನಂತೆ ಬಿಗಿಗೊಳಿಸಿದರೂ ಸರಿಬರುವುದಿಲ್ಲ! ನಮ್ಮ ಆಶಯಲುರುವುದು- ನೋಡಲು ಸುಂದರವಾಗಿರುವುದರ ಜೊತೆಗೆ ಗಟ್ಟಿಮುಟ್ಟಾಗಿಯೂ ಇರಲಿ ಎಂದೇ ಆಗಿರುತ್ತದೆ.
ಸಾಮಾನ್ಯವಾಗಿ ಬಹುತೇಕರು ಫ್ರಂಟ್ ಡೋರ್ ಅನ್ನು ಟೀಕ್ ಮರದಲ್ಲೇ ಮಾಡಿಸಲು ಇಚ್ಛಿಸುತ್ತಾರೆ. ತೇಗದ ಮರಕ್ಕೆ ಒಳ್ಳೆಯ ಗ್ರೇನ್ಸ್ ಇರುವುದರ ಜೊತೆಗೆ ಪಾಲಿಶ್ ಮಾಡಿದರೆ ಬಹಳ ಸುಂದರವಾಗಿಯೂ ಕಾಣುತ್ತದೆ. ಹಾಗೆಯೇ ಬಹುಕಾಲ ಮಳೆ ಗಾಳಿ ಬಿಸಿಲಿನ ಹೊಡೆತವನ್ನೂ ಸಮರ್ಪಕವಾಗಿ ಎದುರಿಸಬಲ್ಲ ಮರ ಎಂದರೆ ಅದು ತೇಗದ ಮರವೇ. ಟೀಕ್ ಮರದ ಗ್ರೇನ್‌ಗಳು ಅಡ್ಡಡ್ಡಕ್ಕಾಗಲೀ, ಉದ್ದುದ್ದಕ್ಕಾಗಲೀ ಒಡೆಯದ ಕಾರಣ, ಮರದ ಜಾಯಿಂಟ್‌ಗಳು ಸದೃಢವಾಗಿ ಬಹುಕಾಲ ನಿಲ್ಲಬಲ್ಲದು. ಮಳೆಗೆ ಹೆಚ್ಚು ಹಿಗ್ಗದೆ, ಬಿಸಿಲಿಗೆ ಹೆಚ್ಚು ಕುಗ್ಗದೆ, ಎಲ್ಲಕಾಲದಲ್ಲೂ ಹೆಚ್ಚಾ ಕಡಿಮೆ ಒಂದೇ ರೀತಿಯಾಗಿ ಇರಬಲ್ಲ ಮರ ಎಂದರೆ ಅದು ಟೀಕ್ ಮರವೇ ಎನ್ನಬಹುದು.
ಹೆಚ್ಚು ದುಬಾರಿಯಲ್ಲದ, ಟೀಕ್ ಮರದ ಅನೇಕ ಗುಣಗಳನ್ನು ಹೊಂದಿರುವ ಮತ್ತೂಂದು ಮರ ಎಂದರೆ ಅದು ಹೊನ್ನೆ. ಟೀಕ್ ನಂತೆಯೇ ಒಳ್ಳೆಯ ಪಾಲಿಶ್ ಕೂಡ ತೆಗೆದುಕೊಳ್ಳುವ ಈ ಮರದ ಒಂದು ನ್ಯೂನತೆ ಏನೆಂದರೆ, ಇದರ ಮೇಲೆ ನೀರು ಬಿದ್ದರೆ, ಕರೆ ಬೀಳುತ್ತದೆ ಹಾಗೂ ಮಾರ್ಬಲ್, ಮೊಸೈಕ್ ಇತ್ಯಾದಿಗಳ ಮೇಲೆ ಕರೆ ಆದರೆ, ತೆಗೆಯುವುದು ಬಲು ಕಷ್ಟ! ನೀವು ನಿಮ್ಮ ಮನೆಗೆ ಗಾಢಬಣ್ಣದ ಗ್ರಾನೈಟ್ ಇಲ್ಲ ವೆಟ್ರಿಫೈಡ್ ನೆಲಹಾಸು ಬಳಸುವಂತಿದ್ದರೆ, ಹೊನ್ನೆ ಮರದ ಬಾಗಿಲುಗಳನ್ನು ಬಳಸಬಹುದು. ಸಾಮಾನ್ಯವಾಗಿ ಹೊನ್ನೆ ಮರದ ಬಾಗಿಲಿಗೆ ಸಾಲ್ ಅಥವಾ ಮತ್ತಿ ಮರದ ಫ್ರೆàಮ್ ಅನ್ನು ಹಾಕಲಾಗುತ್ತದೆ.
ರಿಪೀಸುಗಳ ಲೆಕ್ಕಾಚಾರ
ಬಾಗಿಲಿನ ಅಗಲ ಸುಮಾರು ಮೂರು ಅಡಿ ಆರು ಇಂಚಿನಷ್ಟು ಉದ್ದ. ಎತ್ತರ ಏಳು ಅಡಿ ಇರುವುದರಿಂದ, ಇಷ್ಟು ಅಗಲದ ಮರದ ಹಲಗೆ ಒಂದೇ ಸೈಜಿನಲ್ಲಿ ಸಿಗುವುದು ಕಷ್ಟ. ಸಿಕ್ಕರೂ ಅದು ತೀರ ದುಬಾರಿಯಾಗಿರುತ್ತದೆ. ಆದುದರಿಂದ ನಾವು ಅನಿವಾರ್ಯವಾಗಿ ಹೆಚ್ಚು ಅಗಲವಿಲ್ಲದ ಮರದ ಹಲಗೆಗಳನ್ನೂ, ರಿಪೀಸುಗಳನ್ನೂ ಬಳಸಿ ಮರದ ಬಾಗಿಲುಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ.
ಸದೃಢ ವಿನ್ಯಾಸ
ಮರದ ಹಲಗೆಗಳಿಗಿಂತ ಸಾಮಾನ್ಯವಾಗಿ ರಿಪೀಸುಗಳು ಹೆಚ್ಚು ಗಟ್ಟಿಮುಟ್ಟಾಗಿರುತ್ತವೆ. ಹಾಗಾಗಿ ರಿಪೀಸುಗಳನ್ನು ಬಳಸಿ ಚೌಕಟ್ಟುಗಳನ್ನು ಮಾಡಿಕೊಂಡು, ಇವುಗಳ ಮಧ್ಯೆ ಹಲಗೆಗಳನ್ನು ಅಳವಡಿಸಲಾಗುತ್ತದೆ. ಹೀಗೆ ಮಾಡುವುದರಿಂದ, ಮರದ ವಿವಿಧ ತುಂಡುಗಳು ಸಮರ್ಪಕವಾಗಿ ಬೆಸೆಯುವುದರ ಜೊತೆಗೆ ತಮ್ಮ ಅಗಲ, ಉದ್ದ ಹಾಗೂ ಆಕಾರವನ್ನು ಕಾಪಾಡಿಕೊಂಡು ಬರಲು ಈ ಸಂದಿಗಳು ಸಹಾಯಕವಾಗಿರುತ್ತದೆ. ಈ ಜಾಯಿಂಟ್‌ಗಳಲ್ಲಿರುವ ಸಣ್ಣ ಸಣ್ಣ ಸಂದುಗಳು ಮರ ಹಿಗ್ಗಿದಾಗ ಇಲ್ಲ ಕುಗ್ಗಿದಾಗ, ಬಾಗಿಲನ್ನು ತೆಗೆದು ಹಾಕಲು ತೊಂದರೆಯಾಗದಂತೆ- ರಸ್ತೆಯಲ್ಲಿ ಗುಂಡಿಗಳಿದ್ದರೆ, ವಾಹನಗಳಲ್ಲಿ ಅಳವಡಿಸುವ ಶಾಕ್ ಅಬಾÕಸºರ್‌ಗಳಂತೆ ಕಾರ್ಯ ನಿರ್ವಹಿಸುತ್ತವೆ!
ಸುಂದರವಾಗಿ ಕಾಣಲು..,
ಎಲ್ಲರಿಗೂ ತಮ್ಮ ಮನೆಯ ಮುಂಬಾಗಿಲು ಆಕರ್ಷಕವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ಇದನ್ನು ನಾವು ಬಾಗಿಲಿನ ವಿನ್ಯಾಸ ಮಾಡುವಾಗಲೇ
ನಿರ್ಧರಿಸಬೇಕಾಗುತ್ತದೆ. ನಿಮಗೆ ದೊಡ್ಡ ದೊಡ್ಡ ವಿನ್ಯಾಸದ ಕೆತ್ತನೆ ಕೆಲಸ ಬೇಕೆಂದಿದ್ದರೆ, ಸ್ವಲ್ಪ ದೊಡ್ಡ ಹಲಗೆಗಳು ಬರುವಂತೆ ಬಾಗಿಲನ್ನು ಡಿಸೈನ್ ಮಾಡಿಸಬೇಕು. ಹಲಗೆಗಳು ಸಣ್ಣದಿದ್ದರೂ ಹೆಚ್ಚು ಕುಸುರಿ ಕೆಲಸ ಮಾಡಿಸುತ್ತೇವೆ ಎಂದಿದ್ದರೆ, ಮಾಮೂಲಿ ಅಗಲದ ಹಲಗೆ ಸಾಕಾಗುತ್ತದೆ. ಸಾಮಾನ್ಯವಾಗಿ ಮರದ ಹಲಗೆಯ ಅಗಲ ಹೆಚ್ಚಾದಷ್ಟೂ ಅದರ ಬೆಲೆ ಹೆಚ್ಚಾಗುತ್ತದೆ. ಜೊತೆಗೆ ಅಗಲದ ಮರದ ಹಲಗೆ ಬಿರುಕುಬಿಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದುದರಿಂದ, ನಮ್ಮ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಿದ್ದು, ತೀರ ಅಗಲ ಇಲ್ಲದ ಅಳತೆಯ ಹಲಗೆಯನ್ನು ಆಯ್ದುಕೊಳ್ಳುವುದು ಉತ್ತಮ. ಯಾವುದು ಹೆಚ್ಚು ಕಾರ್ಯ ನಿರ್ವಸುತ್ತದೋ, ಯಾವುದು ಹೆಚ್ಚು ಭಾರ ಹೊರುತ್ತದೋ ಅಂಥ ರಿಪೀಸನ್ನು ದೊಡ್ಡದು ಅಂದರೆ ಅಗಲವಾಗಿಯೂ, ಲಘು ಕಾರ್ಯ ನಿರ್ವಹಿಸುವ ರಿಪೀಸನ್ನು ಕಡಿಮೆ ಅಗಲದಲ್ಲಿ ವಿನ್ಯಾಸ ಮಾಡುವುದೂ ರೂಢಿಯಲ್ಲಿದೆ. ಬಾಗಿಲಿನ ಕೆಳಮಟ್ಟದಲ್ಲಿರುವ ರಿಪೀಸು ಹೆಚ್ಚು ಅಗಲರುತ್ತದೆ. ಇಲ್ಲಿ ಬಾಗಿಲಿನ ಇಡಿ ಭಾರ ಬಂದು ಬೀಳುತ್ತದೆ! ಹಾಗೆಯೇ ಬಾಗಿಲಿನ ಮೇಲಿನ ರಿಪೀಸು ಸಾಮಾನ್ಯವಾಗಿ ಕಡಿಮೆ ಅಗಲದ್ದಾಗಿರುತ್ತದೆ!
ಹೆಚ್ಚುವರಿ ಬಿಗಿಗೊಳಿಸುವುದು.
ಸಾಮಾನ್ಯವಾಗಿ ಮನೆಯ ಮುಂಬಾಗಿಲಿಗೆ ವಿನ್ಯಾಸದಂತೆ ಕಾರ್ವಿಂಗ್ ಮಾಡಿಸಿದರೆ, ಸಾಕಷ್ಟು ಮರದ ದಪ್ಪ ಕುಸುರಿ ಕೆಲಸದಲ್ಲಿ ಕೆತ್ತಿಹೋಗಿ, ಮರದ ಬಾಗಿಲುಗಳು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ಮರದ ಹಲಗೆಗಳ ದಪ್ಪ ಸುಮಾರು ಒಂದರಿಂದ ಒಂದೂವರೆ ಇಂಚು ಇರುವುದರಿಂದ, ಕೆತ್ತನೆ ಕೆಲಸಮಾಡುವಾಗ ಅರ್ಧದಿಂದ ಮುಕ್ಕಾಲು ಇಂಚಿನಷ್ಟು ಮರ ಕೊರೆದು ಹೋದರೂ ನಮಗೆ ನಂತರದಲ್ಲಿ ಸಿಗುವ ದಪ್ಪ ಕಡಿಮೆ. ಆದುದರಿಂದ, ಬಾಗಿಲಿನ ಹಿಂದೆ ಕಡೇ ಪಕ್ಷ ಅರ್ಧ ಇಂಚಿನ ಪ್ಲೆ„ವುಡ್ ಅನ್ನು, ಅಂಟು ಉಪಯೋಗಿಸಿ ಸಿಗಿಸಿದರೆ, ನಿಮ್ಮ ಮನೆಯ ಬಾಗಿಲು ಸದೃಢ ವಾಗುವುದರ ಜೊತೆಗೆ ಸುಂದರವಾಗಿಯೂ ಕಾಣುತ್ತದೆ!
ಹೆಚ್ಚುವರಿ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.