ಸವಣೂರು ಸಬ್‌ಸ್ಟೇಶನ್‌ನಿಂದ ಆಲಂಕಾರಿಗೆ ವಿದ್ಯುತ್ ಪೂರೈಕೆ
Team Udayavani, Jan 15, 2018, 4:06 PM IST
ಬೆಳಂದೂರು: ಸವಣೂರು ಸಬ್‌ಸ್ಟೇಶನ್‌ನ ಚಾರ್ವಾಕ ಫೀಡರ್‌ನಿಂದ ಆಲಂಕಾರು ಗ್ರಾಮಕ್ಕೆ ವಿದ್ಯುತ್ ಪೂರೈಸಲು ಇಲಾಖೆ ಮುಂದಾಗಿರುವುದನ್ನು ವಿರೋಧಿಸಿ ಹಾಗೂ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ಸರಬರಾಜುಗೊಳಿಸುವಂತೆ ಒತ್ತಾಯಿಸಿ ಕುದ್ಮಾರು ಗ್ರಾಮದ ಶಾಂತಿಮೊಗರುವಿನಲ್ಲಿ ಚಾರ್ವಾಕ, ದೋಳ್ಪಾಡಿ, ಕುದ್ಮಾರು ಗ್ರಾಮಗಳ ಕೃಷಿಕರು ಪ್ರತಿಭಟನೆ ನಡೆಸಿದರು.
ಸವಣೂರು 33/11 ಕೆವಿ ವಿದ್ಯುತ್ ಉಪಕೇಂದ್ರದ ಚಾರ್ವಾಕ ಫೀಡರ್‌ನಿಂದ ಈಗಾಗಲೇ ಸವಣೂರು, ಕುದ್ಮಾರು, ಕಾಯಿಮಣ, ಬೆಳಂದೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ ಹಲವಾರು ಟ್ರಾನ್ಸ್‌ಫಾರ್ಮರ್‌ಗಳಿಗೆ ಸಂಪರ್ಕ ಕಲ್ಪಿಸಿದ್ದು, ಅಧಿಕ ಸಂಖ್ಯೆಯ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವೇ ವೋಲ್ಟೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಒಂದು ವೇಳೆ ಆಲಂಕಾರು ಭಾಗದ ಜನರಿಗೆ ಇಲ್ಲಿಂದ ಸಂಪರ್ಕ ನೀಡಿದಲ್ಲಿ ಎರಡು ಪ್ರದೇಶದವರಿಗೂ ತೀವ್ರತರವಾಗಿ ವಿದ್ಯುತ್ ಸಮಸ್ಯೆ ತಲೆದೋರಬಹುದೆಂದು ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ ಹೇಳಿದರು.
ಪ್ರತಿಭಟನೆಯ ಎಚ್ಚರಿಕೆ
ರಾಜೇಶ್ ಇಲೆಕ್ಟ್ರಿಕಲ್ಸ್ ಗುತ್ತಿಗೆದಾರರು ಲೈನ್ ಎಳೆ ಯುವ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ತತ್‌ಕ್ಷಣಕ್ಕೆ ಕೆಲಸವನ್ನು ನಿಲ್ಲಿಸಬೇಕು. ಸವಣೂರಿನ ಪ್ರತ್ಯೇಕ ಫೀಡರ್‌ನಿಂದ ಆಲಂಕಾರಿಗೆ ಸಂಪರ್ಕ ನೀಡವುದಕ್ಕೆ ನಮ್ಮದೇನು ವಿರೋಧವಿಲ್ಲ. ಆದರೆ ಚಾರ್ವಾಕ ಫೀಡರ್ ನಿಂದ ಯಾವುದೇ ಕಾರಣಕ್ಕೂ ಲೈನ್ ಎಳೆಯಲು ನಾವು ಬಿಡುವುದಿಲ್ಲ. ಇಲಾಖೆ ಒಂದು ವೇಳೆ ನಮ್ಮ ನಿಲುವಿಗೆ ವಿರುದ್ಧವಾಗಿ ಕಾರ್ಯಪ್ರವೃತ್ತವಾದಲ್ಲಿ ಸಾವಿರಾರು ಮಂದಿ ಸೇರಿ ಉಗ್ರ ರೂಪದ ಪ್ರತಿಭಟನೆಗೆ ಇಳಿಯಲಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಯಾರಿಗೂ ಪ್ರಯೋಜನವಾಗದು
ಚಾರ್ವಾಕ ಫೀಡರ್‌ನಿಂದ ಆಲಂಕಾರಿಗೆ ವಿದ್ಯುತ್ ಸಂಪರ್ಕ ನೀಡದಲ್ಲಿ ವೋಲ್ಟೇಜ್ ಸಮಸ್ಯೆಯಿಂದ ಎರಡೂ ಭಾಗದ ಕೃಷಿಕರಿಗೂ ತೊಂದರೆಯಾಗಲಿದೆ. ಆಲಂಕಾರಿಗೆ ಸವಣೂರು ಸಬ್‌ಸ್ಟೇಶನ್‌ನಲ್ಲಿ ಫೀಡರ್ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಆಲಂಕಾರಿಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸೀತಾರಾಮ ಗೌಡ ನಾಣಿಲ ಆಗ್ರಹಿಸಿದರು. ಸವಣೂರು ಗ್ರಾ .ಪಂ. ಸದಸ್ಯ ಪ್ರಕಾಶ್ ಕುದ್ಮನಮಜಲು, ಕಾಣಿಯೂರು ಗ್ರಾಪಂ ಮಾಜಿ ಸದಸ್ಯ ಸುಂದರ ಗೌಡ ದೇವಸ್ಯ, ಕೃಷಿಕರಾದ ವಿಶ್ವನಾಥ ಪಾಲ್ತೂರು, ಬಾಲಚಂದ್ರ ಕೆರೆನಾರು, ಬಾಲಚಂದ್ರ ನೂಜಿ, ಪುನೀತ್ ಹೊಸವಕ್ಲು, ಚೇತನ್, ಅಬೂಬಕ್ಕರ್ ಅನ್ಯಾಡಿ, ಇಬ್ರಾಹಿಂ, ಬಾಲಚಂದ್ರ ನೂಜಿ ಸೇರಿದಂತೆ ಸ್ಕಂದಶ್ರೀ ಯುವಕ ಮಂಡಲದ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಗಳಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.