ಪೊಲೀಸ್‌ ಪತ್ನಿ ಸರವೂ ಚೋರಿ

Team Udayavani, Jan 16, 2018, 11:40 AM IST

chain-snatch.jpg

ಬೆಂಗಳೂರು: ನಗರದಲ್ಲಿ ಸರಗಳ್ಳತನ ಹಾವಳಿ ಮತ್ತೆ ತೀವ್ರಗೊಂಡಿದ್ದು, ಕಳ್ಳರು, ಪೊಲೀಸರ ಕುಟುಂಬದವರ ಕತ್ತಲ್ಲಿರುವ ಸರವನ್ನೂ ಕಿತ್ತೂಯ್ಯುತ್ತಿದ್ದಾರೆ. ಇದು ಇರಾನಿ ಹಾಗೂ ಓಜಿಕುಪ್ಪಂ ಗ್ಯಾಂಗ್‌ನ ಕೃತ್ಯವಿರುಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ವೇಳೆ ನಗರದಲ್ಲಿ ಆಯಕಟ್ಟಿನ ಹಾಗೂ ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ನಡೆಸಿ ಸರಗಳ್ಳರನ್ನು ಪತ್ತೆ ಹಚ್ಚುವಂತೆ ನಗರ ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದಾರೆ. 

ಪೀಣ್ಯ ಹಾಗೂ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ನಡೆದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪತ್ನಿ ಸೇರಿ ಮೂವರು ಮಹಿಳೆಯರ ಒಟ್ಟು 240 ಗ್ರಾಂ. ಚಿನ್ನದ ಸರಗಳನ್ನು ಕಿತ್ತು ಕೊಂಡು ಪರಾರಿಯಾಗಿದ್ದಾರೆ.

ಮತ್ತೂಬ್ಬ ಮಹಿಳೆಯ ಸರ ಕಸಿಯುವ ಯತ್ನ ವಿಫ‌ಲವಾಗಿದ್ದು, ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಬೆಳಗ್ಗೆ ಹಾಗೂ ರಾತ್ರಿ ವೇಳೆ ನಗರದಲ್ಲಿ ನಾಕಾಬಂದಿ ಹಾಕಿ ಪರಿಶೀಲಿಸುವಂತೆ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಡಿಸಿಪಿಗಳಿಗೆ ಆದೇಶಿಸಿದ್ದಾರೆ.

ಇನ್ಸ್‌ಪೆಕ್ಟರ್‌ ಪತ್ನಿ ಸರ ಕಳವು: ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿ ವಾಸವಿರುವ ಹಾಗೂ ಪೊಲೀಸ್‌ ಪ್ರಧಾನ ಕಚೇರಿ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್‌ ಕೆಂಚೇಗೌಡ ಅವರ ಪತ್ನಿ ಗಂಗಮ್ಮ (55) ಸೋಮವಾರ ಮುಂಜಾನೆ 7 ಗಂಟೆಗೆ ಮನೆ ಮುಂದೆ ನೀರು ಹಾಕು ರಂಗೋಲಿ ತರಲು ಒಳ ಹೋಗುವಾಗ ಕಪ್ಪು ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರ ಪೈಕಿ ಒಬ್ಟಾತ,

ಗಂಗಮ್ಮನ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಗಂಗಮ್ಮ ಅವರು ಸರವನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಅವರನ್ನು 10 ಅಡಿವರೆಗೆ ಎಳೆದೊಯ್ದಿದ್ದಾನೆ. ನಂತರ ಗಂಗಮ್ಮ ಅವರು ಆಯತಪ್ಪಿ ಬಿದ್ದಾಗ 100 ಗ್ರಾಂ. ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕೆಂಚೇಗೌಡ ಅವರು ಒಂದು ಕಿ.ಮೀ. ವರೆಗೆ ದುಷ್ಕರ್ಮಿಗಳ ಬೆನ್ನತ್ತಿದರೂ ಕೈಗೆ ಸಿಕ್ಕಿಲ್ಲ. ಪಲ್ಸರ್‌ ಬೈಕ್‌ನ ಚಾಲಕ ಹೆಲ್ಮೆಟ್‌ ಧರಿಸಿದ್ದು, ಹಿಂಬದಿ ಸವಾರ ಕ್ಯಾಪ್‌ ಧರಿಸಿದ್ದ. ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಫಲ ಯತ್ನ: ಚಿಕ್ಕಬಿದಿರೆಕಲ್ಲು ಬಳಿಯ ಕಾಮತ್‌ ಲೇಔಟ್‌ನಲ್ಲಿ ಭಾನುವಾರ ಸಂಜೆ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಸರ ಕಸಿಯುವ ದುಷ್ಕರ್ಮಿಗಳ ಯತ್ನ ವಿಫ‌ಲವಾಗಿದೆ. ಶಾರದಮ್ಮ ಅವರ ಹಿಂದಿನಿಂದ ಬಂದ ದುಷ್ಕರ್ಮಿ, ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಶಾರದಮ್ಮ ಕೂಗಾಡಿದ್ದು ಕೇಳಿ ಪತಿ ಹನುಮಂತರಾಯಪ್ಪ ಬರುತ್ತಿದ್ದಂತೆ ದುಷ್ಕರ್ಮಿ, ಪಲ್ಸರ್‌ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಬಾಗಲೂರು ಠಾಣೆ: ದಾಸರಹಳ್ಳಿ ಪೈಪ್‌ಲೈನ್‌ ರಸ್ತೆ ಬೃಂದಾವನ ಲೇಔಟ್‌ನಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಸೌಧಾಮಿನಿ (45) ಎಂಬುವವರ 55 ಗ್ರಾಂ. ಸರ ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ. ಸೌಧಾಮಿನಿ ಅವರು ಮನೆ ಮುಂದೆ ರಂಗೋಲಿ ಹಕುವಾಗ ಕಪ್ಪು ಪಲ್ಸರ್‌ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಪೈಕಿ ಒಬ್ಬ, ವಿಳಾಸ ಕೇಳುವ ನೆಪದಲ್ಲಿ ಸರ ಕಿತ್ತುಕೊಂಡು,

ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಮತ್ತೂಂದು ಪ್ರಕರಣದಲ್ಲಿ ಹೆಸರುಘಟ್ಟ ಮುಖ್ಯರಸ್ತೆಯ ರಾಮಯ್ಯ ಲೇಔಟ್‌ನಲ್ಲಿ ಮನೆ ಮುಂದೆ ನೀರು ಹಾಕುತ್ತಿದ್ದ ವಿಜಯಲಕ್ಷಿ (45) ಎಂಬುವವರ ಸರ ಕಳುವಾಗಿದೆ. ಭಾನುವಾರ ಸಂಜೆ 7 ಗಂಟೆಗೆ ವಿಜಯಲಕ್ಷ್ಮೀ ಅವರು ಮನೆ ಮುಂದೆ ನೀರು ಹಾಕುವಾಗ ಹಿಂದಿನಿಂದ ಬಂದ ವ್ಯಕ್ತಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಎಳೆದ ರಭಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ ಎಂದು ಬಾಗಲಗುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇರಾನಿ ಹಾಗೂ ಓಜಿಕುಪ್ಪಂ ಗ್ಯಾಂಗ್‌ ಮೇಲೆ ಶಂಕೆ: ಐದಾರು ತಿಂಗಳ ಹಿಂದೆ ನಗರ ಪೊಲೀಸರು ಇರಾನಿ ಗ್ಯಾಂಗ್‌ ಹಾಗೂ ತಮಿಳುನಾಡಿನ ಕುಖ್ಯಾತ ಓಜಿಕುಪ್ಪಂ ತಂಡದ ಪ್ರಮುಖ ಸದಸ್ಯರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಇದೇ ಗ್ಯಾಂಗ್‌ ಇತರೆ ಸದಸ್ಯರು ಮತ್ತೆ ನಗರದಲ್ಲಿ ತಮ್ಮ ಕೃತ್ಯ ಮುಂದುವರಿಸಿದ್ದಾರೆ. ಕಳೆದ 3-4 ದಿನಗಳಿಂದ ನಡೆಯುತ್ತಿರುವ ಸರಗಳ್ಳತನ ಮಾದರಿ ಗಮನಿಸಿದರೆ ಕುಖ್ಯಾತ ತಂಡಗಳೇ ಮಾಡುತ್ತಿರುವ ಬಗ್ಗೆ ಶಂಕೆಯಿದೆ.

ನಡೆದ ಎಲ್ಲ ಘಟನೆಗಳಲ್ಲೂ ಕಪು ಬಣ್ಣದ ಪಲ್ಸರ್‌ ಬೈಕ್‌ ಬಳಸಿದ್ದಾರೆ. ಬೈಕ್‌ ಸವಾರ ಹೆಲ್ಮೆಟ್‌ ಧರಿಸಿದ್ದರೇ ಹಿಂಬದಿ ಸವಾರ ಕ್ಯಾಪ್‌ ಹಾಕಿದ್ದ. ಇಬ್ಬರು ಕಾಲಿಗೆ ಸ್ಫೋರ್ಟ್ಸ್ ಶೂ, ಟೀ ಟಿ ಶರ್ಟ್‌, ಜೀನ್‌ಪ್ಯಾಂಟ್‌ ಹಾಗೂ ಸ್ಪೆಟರ್‌ ಧರಿಸಿದ್ದರು.ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ವೇಳೆ ಬವಾರಿಯಾ ಗ್ಯಾಂಗ್‌ನ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ನಡೆದಿರುವ ಸರಗಳ್ಳತನ ಪ್ರಕರಣದಲ್ಲಿ ಕುಖ್ಯಾತ ಇರಾನಿ ಗ್ಯಾಂಗ್‌ ಸದಸ್ಯರ ಕೈವಾಡ ಇರಬಹುದು ಎಂಬ ಶಂಕೆಯಿದೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆಗೆ ಸೂಚಿಸಿದ್ದೇನೆ. ಅಲ್ಲದೆ ಸಾರ್ವಜನಿಕರಿಗೆ ಪ್ರಮುಖವಾಗಿ ಮಹಿಳೆಯರಿಗೆ ಸರ ಕಳವು ಬಗ್ಗೆ ಕರಪತ್ರ ಮುದ್ರಿಸಿ ಆಟೋದಲ್ಲಿ ಪ್ರಚಾರ ಮಾಡಿ ಅರಿವು ಮೂಡಿಸುವಂತೆಯೂ ಹೇಳಲಾಗಿದೆ. ಇದರ ಹೊಣೆಯನ್ನು ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್‌ ಆಯುಕ್ತರು ವಹಿಸಲಿದ್ದಾರೆ. ಹಾಗೆಯೇ ಬೆಳಗ್ಗೆ ಮತ್ತು ನಾಕಾಬಂದಿ ಹಾಕಬೇಕು. ಇರಾನಿ, ಬವಾರಿಯಾ, ಓಜಿಕುಪ್ಪಂ ಗ್ಯಾಂಗ್‌ ಸದಸ್ಯರ ಮೇಲೆ ನಿಗಾವಹಿಸಬàಕು. ನೈಟ್‌ ಬೀಟ್‌ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
-ಟಿ.ಸುನೀಲ್‌ಕುಮಾರ್‌, ನಗರ ಪೊಲೀಸ್‌ ಆಯಕ್ತರು

ಟಾಪ್ ನ್ಯೂಸ್

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.