ಅನಧಿಕೃತ ಕೇಬಲ್‌ ತಡೆದ ಸಿಬ್ಬಂದಿ ಮೇಲೇ ಹಲ್ಲೆ


Team Udayavani, Jan 16, 2018, 11:40 AM IST

ofc-4.jpg

ಬೆಂಗಳೂರು: ನಗರದಾದ್ಯಂತ ಒಎಫ್ಸಿ ಸಂಸ್ಥೆಗಳು ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗ‌ಳಿಂದ ಜನರಿಗೆ ತೊಂದರೆಯಾಗುತ್ತಿರುವುದು ಒಂದೆಡೆಯಾದರೆ, ಮತ್ತೂಂದೆಡೆ ಕೇಬಲ್‌ ಅಳವಡಿಕೆ ತಡೆಯಲು ಮುಂದಾಗುವ ಸಿಬ್ಬಂದಿ ಮೇಲೇ ಸಂಸ್ಥೆಯವರು ಹಲ್ಲೆ ನಡೆಸುವ ಪ್ರಕರಣಗಳು ಬೆಳಕಿಗೆ ಬಂದಿವೆ.

ನಗರದ ಜನರಿಗೆ ಮಾಹಿತಿ ತಂತ್ರಜ್ಞಾನ ಸೇವೆ ಬಳಕೆಗೆ ಸಹಕಾರಿಯಾದ ಒಎಫ್ಸಿ ಕೇಬಲ್‌ಗ‌ಳನ್ನು ಅಳವಡಿಸುತ್ತಿರುವ ಸಂಸ್ಥೆಗಳು ಲಾಭಕ್ಕಾಗಿ ಸಾವಿರಾರು ಕಿ.ಮೀ ಉದ್ದದ ಒಎಫ್ಸಿ ಡಕ್ಟ್ಗಳನ್ನು ಅಳವಡಿಸುತ್ತಿದ್ದು, ನಿಯಮ ಬಾಹಿರವಾಗಿ ರಸ್ತೆ, ಪಾದಚಾರಿ ಮಾರ್ಗ, ಮರಗಳು,  ವಿದ್ಯುತ್‌ ಕಂಬಗಳ ಮೂಲಕ ಹಾದು ಹೋಗಿರುವ ಕೇಬಲ್‌ಗ‌ಳು ನೇತುಬಿದ್ದು ಸಾರ್ವಜನಿಕರಿಗೆ ಮಾರಕವಾಗಿವೆ.

ಇನ್ನೊಂದೆಡೆ ಅನಧಿಕೃತವಾಗಿ ಒಎಫ್ಸಿ ಕೇಬಲ್‌ ಅಳವಡಿಕೆ ತಡೆಯಲು ಯತ್ನಿಸಿದ ಪಾಲಿಕೆ ಸಿಬ್ಬಂದಿ ಮೇಲೆಯೇ ಹಲ್ಲೆಗೈದ ಹಲವು ಪ್ರಕರಣಗಳು ನಡೆದಿವೆ. ಆದರೆ, ಪಾಲಿಕೆ ಹಿರಿಯ ಅಧಿಕಾರಿಗಳು ಮಾತ್ರ ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಸಿಬ್ಬಂದಿಗೆ ಬೀಳುವ ಏಟು, ಅಧಿಕಾರಿಗಳಿಗೆ ಬಿದ್ದರೆ ಕಷ್ಟ ಅರಿವಾಗುತ್ತದೆ ಎಂದು ಪಾಲಿಕೆಯ ಕೆಳಹಂತದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಹುತೇಕ ಒಎಫ್ಸಿ ಸೇವಾ ಸಂಸ್ಥೆಗಳು ಡಕ್ಟ್ ಹಾಗೂ ಕೇಬಲ್‌ಗ‌ಳ ಅಳವಡಿಕೆ ಜವಾಬ್ದಾರಿಯನ್ನು ತಮಗೆ ಪೂರಕವಾಗಿ ಕಾರ್ಯನಿರ್ವಹಿಸುವ ಖಾಸಗಿ ಏಜೆನ್ಸಿಗಳಿಗೆ ನೀಡತ್ತವೆ. ಇಂತಹ ಏಜೆನ್ಸಿಗಳು ರಾತ್ರಿ ವೇಳೆ ಕಾಮಗಾರಿ ಕೈಗೊಂಡು ಅಧಿಕೃತವಾಗಿ ಒಂದು ಡಕ್ಟ್ ಅಳವಡಿಸಿದರೆ, ಅನಧಿಕೃತವಾಗಿ ಮೂರು ಡಕ್ಟ್ಗಳನ್ನು ಅಳವಡಿಸುತ್ತಿದ್ದಾರೆ. ಅದನ್ನು ಪ್ರಶ್ನಿಸುವ ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೇ ಅವರು ಹಲ್ಲೆಗೆ ಮುಂದಾಗುತ್ತಿದ್ದಾರೆ.

ಪಾಲಿಕೆ ಸಿಬ್ಬಂದಿಯಿಂದ ಜನರಿಗೆ ತೊಂದರೆ: ಕೇಬಲ್‌ಗ‌ಳಿಂದ ಸಾರ್ವಜನಿಕರಿಗೆ ತೊಂದರೆಯಾದಾಗ ಅಥವಾ ಮಾಧ್ಯಮಗಳಲ್ಲಿ ವರದಿಯಾದಾಗ ತೋರಿಕೆಗೆ ಪಾಲಿಕೆಯ ಅಧಿಕಾರಿಗಳು ಅನಧಿಕೃತ ಕೇಬಲ್‌ಗ‌ಳ ತೆರವು ಕಾರ್ಯಾಚರಣೆ ನಡೆಸುತ್ತಾರೆ. ಈ ವೇಳೆ ಮರಗಳಿಂದ ಮರಗಳ ಮೂಲಕ ತೆಗೆದುಕೊಂಡು ಹೋಗಿರುವ ಕೇಬಲ್‌ಗ‌ಳ ಅರ್ಧಕ್ಕೆ ತುಂಡರಿಸಿ ಹೋಗುತ್ತಾರೆ. ಹೀಗೆ ತುಂಡರಿಸಿ ಬಿಟ್ಟು ಹೋದ ಕೇಬಲ್‌ಗ‌ಳು ಮರಗಳಿಂದ ನೇತುಬಿದ್ದು ಜನರಿಗೆ ಗಾಯಗೊಳಿಸುತ್ತಿವೆ.

ಶಿಫಾರಸ್ಸುಗಳು ಪಾಲನೆಯಾಗಿಲ್ಲ: ನಗರದಲ್ಲಿ ಸಾರ್ವಜನಿಕರಿಗ ತೊಂದರೆಯಾಗುವಂತೆ ಒಎಫ್ಸಿ ಸಂಸ್ಥೆಗಳು ಅಳವಡಿಸುತ್ತಿರುವ ಎಲ್ಲ ಕೇಬಲ್‌ಗ‌ಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕೆಂದು ಪಾಲಿಕೆಯ ಒಎಫ್ಸಿ ಸಮಿತಿ ವರದಿ ನೀಡಿದೆ.

2012ರ ನೇಮಿಸಿದ ಒಎಫ್ಸಿ ಸಮಿತಿ ಅನಧಿಕೃತ ಒಎಫ್ಸಿ ಅಳವಡಿಕೆಯಿಂದ ಪಾಲಿಕೆಗೆ ಉಂಟಾಗುವ ನಷ್ಟ ಹಾಗೂ ಮರಗಳ ಮೂಲಕ ತೆಗೆದುಕೊಂಡು ಹೋಗುವ ಕೇಬಲ್‌ಗ‌ಳಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿರುವ ಅಂಶವನ್ನು ಉಲ್ಲೇಖೀಸಿ, ಇಂತಹ ಕೇಬಲ್‌ಗ‌ಳ ಯಾವುದೇ ಮುನ್ಸೂಚನೆ ನೀಡಿದೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ವರದಿ ಸಲ್ಲಿಸಿ, ನಾಲ್ಕೈದು ವರ್ಷಗಳು ಕಳೆದರೂ ಅದನ್ನು ಜಾರಿಗೊಳಿಸಲು ಪಾಲಿಕೆ ಮುಂದಾಗಿಲ್ಲ. 

ಹೆಲ್ಮೆಟ್‌ ಇಲ್ಲದಿದ್ದರೆ ಕಣ್ಣೇ ಹೋಗಿತ್ತು…: “ಅಂದು ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ನೃಪತುಂಗ ರಸ್ತೆಯಲ್ಲಿನ ಮರವೊಂದರಲ್ಲಿ ನೇತಾಡುತ್ತಿದ್ದ ಕೇಬಲ್‌ ಜೋರಾಗಿ ಮುಖಕ್ಕೆ ಬಡಿಯಿತು. ಅಂದು ನಾನೇನಾದರೂ ಹೆಲ್ಮೆಟ್‌ ಧರಿಸದೇ ಇದ್ದಿದ್ದರೆ ಕೇಬಲ್‌ ನೇರವಾಗಿ ನನ್ನ ಕಣ್ಣೊಳಗೇ ಹೋಗಿ, ನನ್ನ ಕಣ್ಣೇ ಹೋಗುತ್ತಿತ್ತು.

ಮರಗಳಲ್ಲಿ ನೇತಾಡುವ ಕೇಬಲ್‌ಗ‌ಳು ತುಂಬಾ ಅಪಾಯಕಾರಿಯಾಗಿದ್ದು, ಕೆಲವೊಮ್ಮೆ ಬೈಕ್‌ಗೆ ಅಥವಾ ಬೈಕ್‌ ಸವಾರರಿಗೆ ಸಿಕ್ಕಿಕೊಂಡು ಬಿದ್ದು ಅನಾಹುತ ಸಂಭವಿಸಿದ ಉದಾಹರಣೆಗಳಿವೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಗರದಲ್ಲಿ ನೇತಾಡುವ ಕೇಬಲ್‌ಗ‌ಳನ್ನು ತೆರವುಗೊಳಿಸಬೇಕು,’ ಎನ್ನುತ್ತಾರೆ ಕೆಂಗೇರಿಯ ಮಹದೇವ್‌.

ದೂರು ನೀಡಿದರೂ ತೆರವು ಗೊಳಿಸಿಲ್ಲ: “ಮಗುವನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುವ ಸಂದರ್ಭದಲ್ಲಿ ಪಾದಚಾರಿ ಮಾರ್ಗದಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕೇಬಲ್‌ಗೆ ಎಡವಿ ನೆಲಕ್ಕೆ ಬಿದ್ದು ಮೊಣಕೈಗೆ ಗಾಯ ಮಾಡಿಕೊಂಡಿದ್ದೇನೆ. ವಿಪರ್ಯಾಸವೆಂದರೆ ಈ ಘಟನೆ ನಡೆದಿದ್ದು ಬಿಬಿಎಂಪಿ ಕೇಂದ್ರ ಕಚೇರಿಯ ಎದುರಲ್ಲೇ.

ತಮ್ಮ ಕಚೇರಿ ಎದುರಲ್ಲಿರುವ ಅನಧಿಕೃತ ಕೇಬಲ್‌ ತೆರವುಗೊಳಿಸದ ಪಾಳಿಕೆ ಅಧಿಕಾರಿಗಳು ಇನ್ನು ನಗರದಾದ್ಯಂಥ ಇರುವ ಓಎಫ್ಸಿ ಕೇಬಲ್‌ ತೆರವುಗೊಳಿಸುತ್ತಾರೆ ಎಂದು ನಂಬುವುದಾದರೂ ಹೇಗೆ? ಅಂದಿನ ಘಟನೆ ಕುರಿತು ಖುದ್ದು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ್ದೇನೆ. ಆದರೆ, ಕೇಬಲ್‌ ತೆರವಾಗಿಲ್ಲ. ಅಂದು ನನ್ನ ಅದೃಷ್ಟ ಚೆನ್ನಾಗಿತ್ತು. ಒಂದೊಮ್ಮೆ ಮಕ್ಕಳು ಹೀಗೆ ಬಿದ್ದರೆ ಗತಿಯೇನು? ಅದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದವರು ಸಂಪಂಗಿರಾಮನಗರದ ರೇಣುಕಾ.

ಹಲ್ಗಲೆ ನಡೆಸಿದ ಪ್ರಕರಣಗಳು ಸಾಕಷ್ಟಿವೆ: “ರಾತ್ರಿ 10 ಗಂಟೆ ನಂತರ ಏಜೆನ್ಸಿಗಳು ಅನಧಿಕೃತವಾಗಿ ಡಕ್ಟ್, ಕೇಬಲ್‌ ಅಳವಡಿಸುವ ಕೆಲಸ ಆರಂಭಿಸುತ್ತಾರೆ. ಯಾರಾದರೂ ಕಾಮಗಾರಿ ತಡೆಯಲು ಬರುತ್ತಾರೆಂದು ಏಜೆನ್ಸಿಯು ಕಾಮಗಾರಿ ನಡೆಯುವ ಸ್ಥಳದಲ್ಲಿ 5-10 ಜನರನ್ನು ನಿಯೋಜಿಸಿರುತ್ತಾರೆ.

ಕಾಮಗಾರಿಯನ್ನು ಯಾರಾದರೂ ತಡೆಯಲು ಮುಂದಾದರೆ ಎಲ್ಲರೂ ಏಕಾಏಕಿ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅನಧಿಕೃತ ಕೇಬಲ್‌ ಅಳವಡಿಕೆ ತಡೆಯಲು ಹೋದ ಪಾಲಿಕೆ ಸಿಬ್ಬಂದಿ ಮೇಲೆ ಹಲವೆಡೆ ಹಲ್ಲೆಗಳು ನಡೆದಿವೆ. ಈ ಕಾರಣದಿಂದ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಇಂತಹ ಕಾಮಗಾರಿ ತಡೆಯಲು ಹಿಂಜರಿಯುತ್ತಾರೆ,’ ಎಂದು ಪಾಲಿಕೆಯ ಒಎಫ್ಸಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* ವೆಂ. ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

9-bng

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

8-bng

Bengaluru: ಉದ್ಯಮಿಗೆ ಹನಿಟ್ರ್ಯಾಪ್‌ ಆರೋಪ: ಪೊಲೀಸರಿಂದ ಶೀಘ್ರ ಬಿ ರಿಪೋರ್ಟ್‌  

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.