ನಾನು ಮನುಷ್ಯತ್ವ ಇರುವ ಹಿಂದೂ
Team Udayavani, Jan 16, 2018, 11:40 AM IST
ಬೆಂಗಳೂರು: ನಾನು ಹಿಂದೂಗಳ ವಿರೋಧಿಯಲ್ಲ. ಮನುಷ್ಯತ್ವ ಇರುವ ಹಿಂದೂ ಆಗಿದ್ದೇನೆ. ಮನುಷ್ಯತ್ವ ಇಲ್ಲದವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಬೀರೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ, ಕನಕದಾಸರ 530ನೇ ಜನ್ಮದಿನಾಚರಣೆ ಹಾಗೂ ಕನಕ ದಾಸರ 40 ಅಡಿಯ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಮಲೆಯ ಮಹದೇಶ್ವರ ಬೆಟ್ಟದಲ್ಲಿರುವ ದೇವರಿಗೆ, ನಂಜುಂಡೇಶ್ವರ ಸ್ವಾಮಿ, ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತೇನೆ. ನಾನು ಹಿಂದು ವಿರೋಧಿಯಾಗಿದ್ದರೆ ಈ ಎಲ್ಲ ದೇವಸ್ಥಾನಕ್ಕೆ ಏಕೆ ಹೋಗುತ್ತಿದ್ದೆ? ಮನುಷ್ಯ ಮನುಷ್ಯರ ನಡುವೆ ಭೇದಭಾವ ಮಾಡುವವರು ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದೆ. ಧರ್ಮದ ಹೆಸರಿನಲ್ಲಿ ಯಾರನ್ನು ವಿಂಗಡಿಸುತ್ತಿಲ್ಲ. ಇದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲರ ರಕ್ತ ಒಂದೇ ಅದಕ್ಕೆ ಜಾತಿ, ಧರ್ಮ ಇಲ್ಲ. ಮನುಷ್ಯತ್ವ ಹಾಗೂ ಮಾನವೀಯತೆ ಕಳೆದುಕೊಳ್ಳಬಾರದು ಎಂದರು.
ಕೈಚಳಕ ನಡೆಯಲ್ಲ: ಯಾರೋ ಒಬ್ಬರು ಉತ್ತರ ಭಾರತದಿಂದ ಬಂದು ಕರ್ನಾಟಕದಲ್ಲಿ ಚಮತ್ಕಾರ ಮಾಡಲು ಸಾಧ್ಯವಿಲ್ಲ. ಕುವೆಂಪು, ಬಸವಣ್ಣ, ಕನಕದಾಸ ಹಾಗೂ ಶರೀಫರ ನಾಡಿದು. ಉತ್ತರ ಪ್ರದೇಶದ ಕೈಚಳಕ ಇಲ್ಲಿ ನಡೆಯಲ್ಲ.
ಅಸೂಯೆಯಿಂದ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಗಿನೆಲೆ ಬೆಂಗಳೂರು ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಸಚಿವ ರೋಷನ್ ಬೇಗ್, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಇತರರು ಇದ್ದರು.
ಬೆಂಗಳೂರಿನ ಕನಕಗಿರಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿ. ಭವನ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಕನಕದಾಸರು ಸಮಾಜ ಸುಧಾರಕ: ಕನಕದಾಸರು ಸಂತ ಮಾತ್ರವಲ್ಲ ಬಹುಮುಖ ವ್ಯಕ್ತಿತ್ವದ ದಾರ್ಶನಿಕ. ಅವರನ್ನು ವಿಶ್ವಮಾನವ ಎಂದು ಗುರುತಿಸಿದ್ದಾರೆ. ಸಮಾಜ ಸುಧಾರಕರಾಗಿ, ಸಾಹಿತಿಯಾಗಿ ಜಾತಿ ವ್ಯವಸ್ಥೆ ಗಟ್ಟಿಯಾಗಿದ್ದ ಕಾಲದಲ್ಲಿ ಅದನ್ನು ವಿರೋಧಿಸಿ ಜನರಲ್ಲಿ ಏಕತೆ ಮೂಡಿಸಿದ್ದಾರೆ. ಮೇಲು ಕೀಳು ಬಡವ ಎನ್ನುವುದು ಜನರ ಮಧ್ಯೆ ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.