ರೈತರ ಆದಾಯ ಹೆಚ್ಚಳದಿಂದ ಅಭಿವೃದ್ಧಿ
Team Udayavani, Jan 16, 2018, 12:01 PM IST
ಕಲಬುರಗಿ: ದೇಶದ ಜನಸಂಖ್ಯೆಯ ಶೇ. 65ರಷ್ಟು ಜನರ ಕಸಬು ಕೃಷಿ ಆಗಿದೆ. ಸರ್ಕಾರ ದೇಶದ ರೈತರ ಆರ್ಥಿಕ ಅಭಿವೃದ್ಧಿಗೆ ವಿವಿಧ ಯೋಜನೆ ತಂದು ಹೆಚ್ಚಿನ ಒತ್ತು ನೀಡಿದೆ. ರೈತರ ಆದಾಯ ಹೆಚ್ಚಾದಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಕೇಂದ್ರೀಯ ಒಣ ಬೇಸಾಯ ಸಂಶೋಧನಾ ಸಂಸ್ಥೆ (ಸಿ.ಆರ್.ಐ.ಡಿ.ಎ.) ಮತ್ತು ನೇಗಿಲಯೋಗಿ ರೈತ ಸಂಘ ಮೇಳಕುಂದಾ (ಬಿ) ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹವಾಮಾನ ವೈಪರೀತ್ಯ ಸೈರಣಾ ಕೃಷಿ ಯೋಜನೆ ಅಡಿಯಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಕೇಂದ್ರ ಕಟ್ಟಡ ಹಾಗೂ ಮಣ್ಣು ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಯುಪಿಎ ಸರ್ಕಾರ ಸುಮಾರು 70 ಸಾವಿರ ಕೋಟಿ ರೂ. ಬೆಳೆ ಸಾಲಮನ್ನಾ ಮಾಡಿದೆ. ಈಗಿನ ರಾಜ್ಯ ಸರ್ಕಾರ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆಗ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ದೇಶದಾದ್ಯಂತ ದೊಡ್ಡ ದೊಡ್ಡ ಡ್ಯಾಂ ನಿರ್ಮಾಣ ಮಾಡಿ ನೀರಾವರಿಯಿಂದ ದೇಶದಲ್ಲಿ ಅನ್ನದ ಭಂಡಾರ ತುಂಬಿ 3 ರೂ. ದರದಲ್ಲಿ ಪಡಿತರ ಅಹಾರ ಧಾನ್ಯ ವಿತರಿಸಲಾಯಿತು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಹೋಬಳಿಗೆ ಒಂದರಂತೆ ಬಾಡಿಗೆ ಯಂತ್ರೋಪಕರಣ ಕೇಂದ್ರ ಇರಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಸಣ್ಣ ಸಣ್ಣ ಹಾಗೂ ಬಡ
ರೈತರಿಗಾಗಿ ಈ ಸೌಲಭ್ಯವನ್ನು ಸರ್ಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ 16 ಲಕ್ಷ ಕ್ವಿಂಟಲ್ ಮಾತ್ರ ತೊಗರಿ ಖರೀಸಬೇಕು ಎಂದು ಆದೇಶಿಸಿದೆ. ಆದರೆ ಜಿಲ್ಲೆಯಿಂದಲೇ 70 ಸಾವಿರ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ ಮಿತಿ ಹೆಚ್ಚಿಸಬೇಕು ಹಾಗೂ ನೋಂದಣಿ
ದಿನಾಂಕ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ನವದೆಹಲಿ ಐಎಆರ್‌ಐ ವಿಶ್ರಾಂತ ನಿರ್ದೇಶಕ ಡಾ| ಎಸ್.ಎ. ಪಾಟೀಲ ಮಾತನಾಡಿ, ದೇಶದಲ್ಲಿ ಒಟ್ಟು 11 ಕೃಷಿ
ಕೇಂದ್ರಗಳಿದ್ದರೂ ರೈತರ ಮೇಲೆ ಪ್ರಭಾವ ಬೀರಿ ನೂತನ ತಳಿ ನೀಡುವಲ್ಲಿ ಕಲಬುರಗಿ ಸಂಶೋಧನಾ ಕೇಂದ್ರ ಮೊದಲನೇ ಸ್ಥಾನದಲ್ಲಿದೆ. ಹೊಸತಳಿ, ತಂತ್ರಜ್ಞಾನ, ರಸಗೊಬ್ಬರ ಸೇರಿಸಿ ಬೆಳೆ ಬೆಳೆದಾಗ 1 ಎಕರೆಗೆ ಹೆಚ್ಚು ಇಳುವರಿ ಪಡೆದು ಹತ್ತಾರು ಲಕ್ಷ ರೂ. ಗಳ ಲಾಭ ಗಳಿಸಬಹುದು. ಆದರೆ ಬೆರಣಿಯಷ್ಟೇ ರೈತರು ಮಾತ್ರ ಇಂತಹ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಮೇಳಕುಂದಾ (ಬಿ) ಪ್ರಗತಿಪರ ರೈತರನ್ನು ಡಾ| ಶರಣಪ್ರಕಾಶ ಪಾಟೀಲ ಸನ್ಮಾನಿಸಿದರು.
ಚಿಣಮಗೇರಾ ಮಹಾಂತೇಶ್ವರ ಮಠದ ಸಿದ್ದರಾಮ ಮಹಾಸ್ವಾಮೀಜಿ, ರಾಯಚೂರು ಕೃ.ವಿ.ವಿ ಆಡಳಿತ ಮಂಡಳಿ
ಸದಸ್ಯ ವೀರನಗೌಡ ಪರಸರೆಡ್ಡಿ, ಕಲಬುರಗಿ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಿಪಂ ಸದಸ್ಯ ಸಂತೋಷ ಪಾಟೀಲ ದಣ್ಣೂರು, ರಾಯಚೂರು ಕೃ.ವಿ.ವಿ ವಿಸ್ತರಣಾ ನಿರ್ದೇಶಕ ಡಾ| ಎಸ್.ಕೆ. ಮೇಟಿ, ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್ ಡಾ| ಜೆ.ಆರ್. ಪಾಟೀಲ, ಮೇಳಕುಂದಾ (ಬಿ) ನೇಗಿಲ ಯೋಗಿ ರೈತ ಸಂಘ ಅಧ್ಯಕ್ಷ ಮಲ್ಲಿನಾಥ ಕೊಳ್ಳೂರ, ಕಲಬುರಗಿ ಕೃವಿ ಕೇಂದ್ರದ ಮುಖ್ಯಸ್ಥ ಡಾ| ರಾಜು ಜಿ. ತೆಗ್ಗಳ್ಳಿ ಇದ್ದರು. ಕೃಷಿ ಸಂಶೋಧಕ ಮುನಿಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.