ಸರ್ವಧರ್ಮ ಸಮನ್ವಯವೇ ಭಾರತೀಯ ಪರಂಪರೆ
Team Udayavani, Jan 16, 2018, 12:04 PM IST
ಮೈಸೂರು: ಸರ್ವಧರ್ಮ ಸಮನ್ವಯವೇ ಭಾರತೀಯ ಪರಂಪರೆ. ಇಲ್ಲಿ ಯಾವ ಧರ್ಮವು ಮೇಲಲ್ಲ, ಯಾವ ಧರ್ಮವು ಕೀಳಲ್ಲ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಹೇಳಿದರು.
ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇತ್ತೀಚೆಗೆ ಜಾತ್ಯತೀತತೆಯ ಮಾತು ಕೇಳಿಬರುತ್ತಿದೆ.
ಆದರೆ, ಸರ್ವಧರ್ಮ ಸಮನ್ವಯವೇ ನಿಜವಾದ ಜಾತ್ಯತೀತತೆ. ಸತ್ಯದ ಆಚರಣೆ, ಅಹಿಂಸೆ, ಬ್ರಹ್ಮಚರ್ಯೆ ಭಾರತೀಯ ಸಂಸ್ಕೃತಿಯ ಪ್ರತೀಕ. ಹಿಂದೂ, ಮುಸ್ಲಿಂ, ಕ್ರೆ„ಸ್ತ, ಪಾರ್ಶಿ ಯಾರೇ ಆಗಿರಲಿ ತಮ್ಮ ಧರ್ಮವನ್ನು ಪಾಲನೆ ಮಾಡಿದಾಗ ಮಾನವರಾಗುತ್ತಾರೆ ಎಂದರು.
ಸನಾತನ ಪರಂಪರೆ ನಮ್ಮದು: ಭಾರತದ ಸನಾತನ ಧರ್ಮದಲ್ಲಿ ಸರ್ವೇ ಸಂತು ಸುಖೀನಾಃ ಎಂದು ಎಲ್ಲರ ಸುಖವನ್ನು ಹಾರೈಸಲಾಗಿದೆಯೇ ಹೊರತು ನಮ್ಮ ಧರ್ಮ ಮಾತ್ರ ಸುಖವಾಗಿರಲಿ ಎಂದು ಹೇಳಿಲ್ಲ. ವಸುದೈವ ಕುಟುಂಬಕಂ ಎನ್ನುವ ಮೂಲಕ ಇಡೀ ವಿಶ್ವವನ್ನು ಒಂದು ಕುಟುಂಬದಂತೆ ಕಂಡಿರುವ ಸನಾತನ ಪರಂಪರೆ ನಮ್ಮದು ಎಂದು ಹೇಳಿದರು.
ಸಮುದ್ರಕ್ಕೆ ಹಲವಾರು ನದಿಗಳು ಬಂದು ಸೇರುತ್ತವೆ. ಅದರಲ್ಲಿ ಚಿಕ್ಕ ನದಿಯೂ ಇರುತ್ತದೆ, ದೊಡ್ಡ ನದಿಯೂ ಇರುತ್ತದೆ. ಆದರೆ, ಅದು ಸಮುದ್ರ ಸೇರಿದ ಮೇಲೆ ಯಾವುದು ಚಿಕ್ಕ ನದಿ, ಯಾವುದು ದೊಡ್ಡ ನದಿ ಎಂದು ಗುರುತಿಸಲಾಗುವುದಿಲ್ಲ, ಹಾಗೆಯೇ ಧರ್ಮ ಕೂಡ. ಹಿಂದೂ, ಮುಸ್ಲಿಂ, ಕ್ರೆ„ಸ್ತ ಎಲ್ಲಕ್ಕಿಂತ ಮಾನವ ಧರ್ಮ ದೊಡ್ಡದು ಎಂದು ಪ್ರತಿಪಾದಿಸಿದರು.
ಜೆಎಸ್‌ಎಸ್ ಅಕ್ಷರ ಆಂದೋಲನ: ಜೆಎಸ್‌ಎಸ್ ಸಂಸ್ಥೆ ಅತಿದೊಡ್ಡ ಅಕ್ಷರ ಆಂದೋಲನ ಮಾಡುತ್ತಿದೆ. ಬಡವರಿಗೆ ಶಿಕ್ಷಣ, ಆರೋಗ್ಯ, ದಾಸೋಹ ಒದಗಿಸುತ್ತಿರುವುದು ಬಹುದೊಡ್ಡ ಸೇವೆ, ಕರ್ಮವೇ ನಮ್ಮ ಧರ್ಮ ಎಂದು ತಿಳಿದು ಹಸಿದವನಿಗೆ ಅನ್ನ ನೀಡುವುದು ಕೂಡ ಸೇವೆಯೇ ಎಂದರು.
ಶಿವರಾತ್ರಿ ರಾಜೇಂದ್ರ ಶ್ರೀಗಳು ನೆಟ್ಟ ಬೀಜ ಈಗ ವೃಕ್ಷವಾಗಿ ಬೆಳೆದು ನಿಂತು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಬಹುದೊಡ್ಡ ಸಾಧನೆ. ಭಗವಂತ ನೀಡಿರುವ ಜಾnನ-ಶಕ್ತಿಯನ್ನು ಸ್ವಾಮೀಜಿಯವರು ಸಮಾಜಕ್ಕೇ ಸಮರ್ಪಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಸಾಗಿಂತ ಸಾಧನೆಗೈದ ಇಸ್ರೋ: ಆಧುನಿಕ ಜೀವನದಲ್ಲಿ ಶಿಕ್ಷಣ ಬಹುಮುಖ್ಯ. ಅದರಲ್ಲೂ ಆಧುನಿಕ ತಂತ್ರಜಾnನ, ವಿಜಾnನದ ಅಗತ್ಯತೆ ತುಂಬಾ ಇದೆ. ಅಮೆರಿಕಾ, ರಷ್ಯಾದವರು ಬುದ್ಧಿಮತ್ತೆಯಲ್ಲಿ ಮುಂದಿದ್ದರೆ, ಜಪಾನ್, ಇಸ್ರೇಲ್ ದೇಶದವರು ತಂತ್ರಜಾnನದಲ್ಲಿ ಮುಂದೆ ಇದ್ದಾರೆ.
ಹಾಗೆಂದು ಭಾರತವೇನು ತಾಂತ್ರಿಕತೆಯಲ್ಲಿ ಯಾರಿಗೂ ಕಡಿಮೆ ಇಲ್ಲ, ಏಕಕಾಲಕ್ಕೆ ನೂರು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ನಮ್ಮ ಇಸ್ರೋ ಸಂಸ್ಥೆ, ಅಮೆರಿಕಾದ ನಾಸಾಗಿಂತ ಅತಿದೊಡ್ಡ ಸಾಧನೆ ಮಾಡಿದೆ. ಇದು ಭಾರತದ ತಾಕತ್ತು ಎಂದರು.
ಧರ್ಮದ ತಿರುಳು ತಿಳಿಯದೇ ಕಿತ್ತಾಟ: ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿ ಮಾತನಾಡಿ, ಧರ್ಮದ ಒಳಗಿನ ತಿರುಳು ಗೊತ್ತಿಲ್ಲದೆ, ವೀರಶೈವ-ಲಿಂಗಾಯತ ಎಂದು ಕಿತ್ತಾಡುತ್ತಿದ್ದೇವೆ, ವೀರಶೈವ ಧರ್ಮ ಸಂಕುಚಿತವಲ್ಲ,
ವಿಶಾಲವಾದುದು, ಆದರೆ, ನಮ್ಮನ್ನೇ ನಾವು ಅರ್ಥ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ. ಸಮಾಜಕ್ಕೆ ತೊಂದರೆಯಾದಾಗ ಸಮಾಜವೇ ಎದ್ದು ನಿಂತು ಸರಿಪಡಿಸಿಕೊಳ್ಳಬೇಕು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರು, ಆ ಕೆಲಸ ಇಂದಿನ ಅಗತ್ಯವಾಗಿದೆ ಎಂದರು.
ವಿಷದ ವಾತಾವರಣ ತಿಳಿಗೊಳ್ಳಲಿ: ರಂಭಾಪುರಿ ಶ್ರೀ ಮಾತನಾಡಿ, ರಂಭಾಪುರಿ ಪೀಠಕ್ಕೂ ಸುತ್ತೂರು ಮಠಕ್ಕೂ ಇರುವ ಅವಿನಾಭಾವ ಸಂಬಂಧ ಕಂಡು ನಾಡಿನ ಜನತೆ ಸಂತಸಪಡುತ್ತಾರೆ. ಸ್ನೇಹ-ಸೌಹಾರ್ದತೆ-ಸಾಮರಸ್ಯಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಿದೆ. ಸಾಮರಸ್ಯದ ಈ ಸಂಬಂಧ ಮುಂದುವರಿಯಲಿ. ಸಮಾಜದಲ್ಲಿ ಎದ್ದಿರುವ ವಿಷಯ ವಾತಾವರಣ ತಿಳಿಗೊಳಿಸಿ ಆರೋಗ್ಯ ಪೂರ್ಣ ಸಮಾಜ ಕಟ್ಟೋಣ ಎಂದರು.
ಧರ್ಮ ಶ್ರೀಮಂತ: ಸುತ್ತೂರು ಮಠಾಧೀಶರಾದ ಶಿವರಾತ್ರೀದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಆಧ್ಯಾತ್ಮಿಕವಾಗಿ ಸಾಂಸ್ಕೃತಿಕವಾಗಿ ಮಾತ್ರವಲ್ಲ, ವೈಜಾnನಿಕ, ಶೈಕ್ಷಣಿಕವಾಗಿಯೂ ಶ್ರೀಮಂತವಾಗಿದೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಉತ್ಸವದ ಜತೆಗೆ ಭಾರತೀಯ ಸಂಸ್ಕೃತಿಯ ಬೆಳೆವಣಿಗೆಗೆ ಪೂರಕವಾದ ಎಲ್ಲ ರೀತಿಯ ಕಾರ್ಯಕ್ರಮಗಳೂ ಇಲ್ಲಿ ಜರುಗಲಿವೆ ಎಂದರು. ಸುತ್ತೂರು ಪೀಠಕ್ಕೆ ದೊಡ್ಡ ರಥ ಮಾಡಿಸಲು ಶಿವರಾತ್ರಿ ರಾಜೇಂದ್ರ ಶ್ರೀಗಳು, ಸಿದ್ಧಗಂಗಾಶ್ರೀಗಳ ಸಂಕಲ್ಪವಾಗಿತ್ತು, ಅದು ಈಗ ಈಡೇರಿದೆ ಎಂದು ಹೇಳಿದರು.
ಭಾರತ್ ಮಾತಾಕೀ ಜೈ ಎನ್ನಿ
ಜೈಕಾರದ ಶದ್ಧ ಶತ್ರುಗಳಲ್ಲಿ ಕಂಪನ ತರಿಸಲಿ:ವಾಲಾ
ಧಾರ್ಮಿಕ ಸಭೆ ಉದ್ಘಾಟಿಸಿ ಭಾಷಣ ಮಾಡಿದ ರಾಜ್ಯಪಾಲ ವಜೂಭಾಯ್ ವಾಲಾ ಅವರು, ತಮ್ಮ ಭಾಷಣದ ಕೊನೆಯಲ್ಲಿ ಸಭಿಕರಿಗೆ ನೀವೆಲ್ಲ ಧಾರ್ಮಿಕ ಸಭೆಯಲ್ಲಿದ್ದೀರಿ ಭಾರತ ಮಾತೆಗೆ ಜೈಕಾರ ಕೂಗುವ ಮೂಲಕ ನಿಮ್ಮ ತಾಕತ್ತು ತೋರಿಸಿ, ಮಾತೃಭೂಮಿಗೆ ನಾವು ಕೂಗುವ ಜೈಕಾರದ ಶದ್ಧ ಶತ್ರುಗಳಲ್ಲಿ ಕಂಪನ ಉಂಟು ಮಾಡಬೇಕು ಎಂದು ಹೇಳಿ, ಮೂರು ಬಾರಿ ಭಾರತ್ ಮಾತಾಕೀ ಜೈ ಎಂದು ಕೂಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.