ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಫೋರ್ಟ್‌:74ನೇ ವಾರ್ಷಿಕ ಮಹಾಪೂಜೆ

Team Udayavani, Jan 16, 2018, 12:22 PM IST

1401mum10.jpg

ಮುಂಬಯಿ: ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಫೋರ್ಟ್‌ ಇದರ 74ನೇ ವಾರ್ಷಿಕ ಮಹಾಪೂಜೆ  ನಲಸೊಪರ ಪಶ್ಚಿಮದ ಶ್ರೀ ಪ್ರಸ್ಥ ಕಾಂಪ್ಲೆಕ್ಸ್‌ ಎದುರಿನ ಶ್ರೀಪ್ರಸ್ಥ ಶನಿತೀರ್ಥ ಸ್ಥಳದಲ್ಲಿ ಜ. 13ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 8 ರಿಂದ ಗಣಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ದುರ್ಗಾಹೋಮ, ನವಗ್ರಹ ಶಾಂತಿ, ಆಶ್ಲೇಷ  ಬಲಿ ಮೊದಲಾದ ಕಾರ್ಯಕ್ರಮ  ಜರಗಿತು. ಅಪರಾಹ್ನ ಮೀರಾರೋಡ್‌ ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿಯವರಿಂದ ಭಜನೆ, ಸಂಜೆ 6ರಿಂದ ಉಮೇಶ್‌ ಮೆಂಡನ್‌ ಮತ್ತು ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆಗೊಂಡಿತು.

ಅಹೋರಾತ್ರಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಸದಸ್ಯರಿಂದ ಗ್ರಂಥ ಪಾರಾಯಣ ನಡೆಯಿತು. ಪದಾಧಿಕಾರಿಗಳಾದ ಉಮೇಶ್‌ ಮೆಂಡನ್‌, ವರದರಾಜ ಶೆಟ್ಟಿ, ಸುಂದರ ಬೆಳ್ಚಡ, ಮಹಾಲಿಂಗ ಗಾಣಿಗ, ರಮೇಶ್‌ ಕೊಠರಿ, ವಸಂತ್‌ ಶೆಟ್ಟಿ, ದೇವರಾಜ್‌ ರಾವ್‌, ರಮೇಶ್‌ ಪೂಜಾರಿ, ಶ್ರೀನಿವಾಸ ಆಳ್ವ, ನಂದಕುಮಾರ್‌ ಕುಂಬ್ಳೆ, ಭಾಸ್ಕರ ಬಂಗೇರ, ರಘು ಪುತ್ರನ್‌, ಸಂಜೀವ ಸಾಲ್ಯಾನ್‌, ರಾಮಗೊಂಡ, ಸುನೀಲ್‌ ಶೆಟ್ಟಿ, ಜಯ ಪೂಜಾರಿ, ಸದಾಶಿವ ಕೋಟ್ಯಾನ್‌, ಸದಾನಂದ ಪೂಜಾರಿ, ಸಂತೋಷ್‌ ಪೂಜಾರಿ, ಮಹಿಳಾ ವಿಭಾಗದ ಶಕುಂತಳಾ ಮೆಂಡನ್‌, ಶಕುಂತಳಾ ಶೆಟ್ಟಿ, ಗಿರಿಜಾ ಗಾಣಿಗ, ಸುಜಾತಾ ಪುತ್ರನ್‌, ಸುಜಾತಾ ಶೆಟ್ಟಿ, ಭವಾನಿ ಕರ್ಕೇರ, ಜಯಂತಿ ಪುತ್ರನ್‌, ದಯಾಮಂತಿ ಕುಂಬ್ಳೆ, ಮಲ್ಲಿಕಾ ಪೂಜಾರಿ, ಸುಮಿತ್ರಾ ಶೆಟ್ಟಿ, ತಿಲೋತ್ತಮ ಅಮೀನ್‌, ಸುಮನ್‌ ಬಂಗೇರ, ಪ್ರೇಮಾ ಶೆಟ್ಟಿ, ರತಿ ಶೆಟ್ಟಿ ಮೊದಲಾದವರು ಸಹಕರಿಸಿದರು.

ಶಾಸಕ ಹಿತೇಂದ್ರ ಠಾಕೂರ್‌, ಮೇಯರ್‌ ರೂಪೇಶ್‌ ಜಾಧವ್‌, ನಗರ ಸೇವಕರಾದ ರಾಜು ರಾಧೆ, ರಾಜು ದಾಘೆ, ಕಿಶೋರ್‌ ಪಾಟೀಲ್‌, ಅತುಲ್‌ ಸೋಳಂಕೆ, ಭುಪೇಂದ್ರ ಪಾಟೀಲ್‌, ನಿಲೇಶ್‌ ದೇಶ್‌ಮುಖ್‌, ನಗರ ಸೇವಕಿ ಶುಭಾಂಗಿ ಗಾಯಕ್ವಾಡ್‌, ಉಮೇಶ್‌ ನಾಯಕ್‌, ಶಶಿಧರ ಕೆ. ಶೆಟ್ಟಿ, ಹರೀಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಸದಾಶಿವ ಕರ್ಕೇರ, ಪ್ರವೀಣ್‌ ಕಣಂಜಾರು, ಲಯನ್‌ ಶಂಕರ್‌ ಕೆ. ಟಿ., ಪುರಂದರ ಸಾಲ್ಯಾನ್‌, ದಯಾನಂದ ಶೆಟ್ಟಿ, ಮೋಹನ್‌ ಬಿ. ಶೆಟ್ಟಿ, ನಿತ್ಯಾನಂದ ಶೆಟ್ಟಿ, ಜಯಂತ್‌ ಪಕ್ಕಳ, ಪ್ರವೀಣ್‌ ಶೆಟ್ಟಿ, ಜಯ ಶೆಟ್ಟಿ ವಸಾಯಿ, ವಿಜು ರಾಣೆ, ದೇವೇಂದ್ರ ಬುನ್ನನ್‌, ಮೋಹನ್‌ ಬಂಜನ್‌ ಮತ್ತಿತರ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಸಹಸ್ರಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಧ್ಯ ರಾತ್ರಿವರೆಗೂ ಜರಗಿದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಪರಿಸರದ ಹೊಟೇಲ್‌ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಸಮುದಾಯಗಳ ಪ್ರತಿನಿಧಿಗಳು, ತುಳು- ಕನ್ನಡಿಗರು, ಕನ್ನಡೇತರರು, ವಿವಿಧ ರಾಜಕೀಯ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

1944 ರಲ್ಲಿ ಕೆಲವು ಯುವಕರಿಂದ ಸ್ಥಾಪನೆಗೊಂಡ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯು ಆಧ್ಯಾತ್ಮಿಕ ಚಿಂತನೆಯೊಂದಿಗೆ, ಸಾಮಾಜಿಕ ಕಳಕಳಿಯೊಂದಿಗೆ ಬೆಳೆದು ನಿಂತಿದೆ. ನಲಸೋಪರದ ಶನಿ ದೇವರ ಮಂದಿರದಲ್ಲಿ ದುರ್ಗಾಮಾತೆ, ಗಣಪತಿಯ ಗುಡಿಯನ್ನು ಹೊಂದಿದೆ. ದೇವಸ್ಥಾನದ ಕಾಮಗಾರಿ ಆಕರ್ಷಕ ಶಿಲ್ಪ ಕೆತ್ತನೆಯೊಂದಿಗೆ ರೂಪುಗೊಳ್ಳುತ್ತಿದೆ. ಇದು   ನೆರವೇರಲು ಭಕ್ತರ ಸಹಕಾರ ಅತ್ಯಗತ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು. 

ಚಿತ್ರ-ವರದಿ:ರಮೇಶ್‌ ಅಮೀನ್‌

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.