ನನ್ನನ್ನು ಕೊಲ್ಲಲು ಎನ್‌ಕೌಂಟರ್ ಸಂಚು: ಪ್ರವೀಣ್ ತೊಗಾಡಿಯಾ
Team Udayavani, Jan 16, 2018, 12:39 PM IST
ಜೈಪುರ : ಹತ್ತು ವರ್ಷಗಳಷ್ಟು ಹಳೆಯ ಕೇಸೊಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಹೊಂದಿದ್ದಾರೆ ಎಂಬ ಬಗ್ಗೆ ಸುಳಿವು ಪಡೆದ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಪ್ರವೀಣ್ ತೊಗಾಡಿಯಾ ಅವರು ದೃಶ್ಯ ಮಾಧ್ಯಮದ ಮುಂದೆ ಕಣ್ಣೀರು ಸುರಿಸಿ ತಾವೆದುರಿಸುತ್ತಿರುವ ದಾರುಣ ಪರಿಸ್ಥಿತಿಯನ್ನು ವಿವರಿಸಿದರು.
ಪ್ರವೀಣ್ ತೊಗಾಡಿಯಾಅವರು ನಿನ್ನೆ ಸೋಮವಾರ ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಇಂದು ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿ ತಾವು ನಾಪತ್ತೆಯಾಗಬೇಕಾಗಿ ಬಂದ ಅನಿವಾರ್ಯ ಸ್ಥಿತಿಯನ್ನು ವಿವರಿಸಿದರು.
“ನನ್ನ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸುವ ಹುನ್ನಾರದ ಭಾಗವಾಗಿ ನನ್ನನ್ನು ರಾಜಸ್ಥಾನ್ ಪೊಲೀಸರು ಎನ್‌ಕೌಂಟರ್ ಮಾಡಿ ಮುಗಿಸಲಿದ್ದಾರೆ ಎಂದು ಯಾರೋ ಒಬ್ಬರು ನನಗೆ ತಿಳಿಸಿದರು; ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ನಾನು ನಾಪತ್ತೆಯಾಗಬೇಕಾಯಿತು” ಎಂದವರು ಹೇಳಿದರು.
ನಾನು ಯಾವತ್ತೂ ರಾಮ ಮಂದಿರ, ಗೋ ಹತ್ಯಾ ನಿಷೇಧ ಕಾನೂನು, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಎನ್‌ಕೌಂಟರ್ ಮೂಲಕ ನನ್ನ ಧ್ವನಿಯನ್ನು ಅಡಗಿಸುವ ಯತ್ನ ನಡೆದಿದೆ’ ಎಂದು ತೊಗಾಡಿಯಾ ಹೇಳಿದರು.
ವೈದ್ಯರ ಪ್ರಕಾರ ತೊಗಾಡಿಯಾ ಅವರ ಆರೋಗ್ಯ ಸುಧಾರಿಸಿದೆ; ಆದರೆ ತೊಗಾಡಿಯಾ ಅವರು ನನ್ನ ಆರೋಗ್ಯ ಪೂರ್ಣವಾಗಿ ಸುಧಾರಿಸುವ ತನಕ ನಾನು ಆಸ್ಪತ್ರೆಯಿಂದ ಹೋಗುವುದಿಲ್ಲ ಎಂದು ಹೇಳಿದರು. ತೊಗಾಡಿಯಾ ಅವರಿಗೆ ಝಡ್ ಪ್ಲಸ್ ಕೆಟಗರಿಯ ರಕ್ಷಣೆ ಇದೆ.
ದಶಕದಷ್ಟು ಹಳೆಯ ಕೇಸಿಗೆ ಸಂಬಂಧಿಸಿ ರಾಜಸ್ಥಾನದ ಪೊಲೀಸರ ತಂಡ ನಗರದ ಪಾಲ್ಡಿ ಪ್ರದೇಶದಲ್ಲಿನ ವಿಶ್ವ ಹಿಂದು ಪ್ರಧಾನ ಕಾರ್ಯಾಲಯಕ್ಕೆ ತೊಗಾಡಿಯ ಅವರನ್ನು ಅರೆಸ್ಟ್ ಮಾಡಲು ನಿನ್ನೆ ಸೋಮವಾರ ಬಂದಿದ್ದಾಗ ತೊಗಾಡಿಯಾ ವಿಎಚ್‌ಪಿ ಕಾರ್ಯಾಲಯದಿಂದ ಹೊರಬಿದ್ದು ನಾಪತ್ತೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.