ಕಾಂಚನಬ್ರಹ್ಮ, ನಾದಬ್ರಹ್ಮ, ಅನ್ನಬ್ರಹ್ಮರು ಒಂದೆಡೆ ಸೇರಿದಾಗ….


Team Udayavani, Jan 16, 2018, 4:41 PM IST

19-40.jpg

ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಜ. 18ರಂದು ಪರ್ಯಾಯ ಪೂಜೆ ಆರಂಭಿಸುವ ಮೂಲಕ 32ನೆಯ ಪರ್ಯಾಯ ಚಕ್ರಕ್ಕೆ ಓಂಕಾರ ಬರೆಯಲಿದ್ದಾರೆ. ತಿರುಪತಿ ಕಾಂಚನಬ್ರಹ್ಮ, ಪಂಢರಪುರ ನಾದಬ್ರಹ್ಮ, ಉಡುಪಿ ಅನ್ನಬ್ರಹ್ಮ ಎಂದು ಪ್ರಸಿದ್ಧ. ಈ ಮೂರೂ ಬ್ರಹ್ಮರು ಇಲ್ಲಿ ಪರೋಕ್ಷವಾಗಿ ಪ್ರಭಾವ ಬೀರುತ್ತಿದ್ದಾರೆಂದೆನಿಸುತ್ತದೆ. ಶಿಬರೂರಿನ ರಮೇಶ ಬಾಲ್ಯದಲ್ಲಿ ಕಾಲಿನ ಶಕ್ತಿ ಕಳೆದುಕೊಂಡಾಗ ತಿರುಪತಿ ಶ್ರೀನಿವಾಸನ ಹರಕೆಯಿಂದ ಯಥಾಸ್ಥಿತಿ ಮರಳಿತು. ಮುಂದೆ ಇವರೇ ಶ್ರೀವಿದ್ಯಾಧೀಶತೀರ್ಥರಾಗಿ ಈಗ ಪರ್ಯಾಯ ಪೀಠಾಧೀಶರಾಗುತ್ತಿದ್ದಾರೆ. ಪಂಢರಪುರ ಭಜನೆಗೆ ಹೆಸರುವಾಸಿ. ಈ ಪರ್ಯಾಯದ ಎರಡೂ ವರ್ಷ ನಿರಂತರ ನಾಮ ಸಂಕೀರ್ತನೆ ನಡೆಯುತ್ತಿದೆ. ಹಿಂದಿನ ಪಲಿಮಾರು ಪರ್ಯಾಯದಲ್ಲಿ ಅನ್ನಬ್ರಹ್ಮನ ನಾಡಿನಿಂದ ಶಾಲಾ ಮಕ್ಕಳಿಗೆ ಊಟ ಕೊಡುವ ಚಿಣ್ಣರ ಸಂತರ್ಪಣೆ ಯೋಜನೆ ಆರಂಭವಾಗಿ ಮತ್ತೆ ಪಲಿಮಾರಿನ ಪರ್ಯಾಯ ಬಂದಿದೆ.  

1956ರ ಮೇ 14ರಂದು ಮಂಗಳೂರು ತಾಲೂಕಿನ ಶಿಬರೂರಿನಲ್ಲಿ ಹಯಗ್ರೀವ ತಂತ್ರಿ ಮತ್ತು ಕಸ್ತೂರಿ ಅಮ್ಮ ದಂಪತಿಗೆ ಜನಿಸಿದ ರಮೇಶನಿಗೆ ಸುಮಾರು ಐದಾರು ವರ್ಷ ಪ್ರಾಯವಾಗುವಾಗ ಕಾಲು, ಸೊಂಟ ಸಂಪೂರ್ಣ ಬಿದ್ದು ಹೋಗಿ ನಡೆಯಲು ಆಗುತ್ತಿರಲಿಲ್ಲ. ಮಾತೃ ಹೃದಯಕ್ಕೆ ಇದಕ್ಕಿಂತ ದೊಡ್ಡ ನೋವು ಬೇರೆ ಇರಲು ಸಾಧ್ಯವಿಲ್ಲ. ತಾಯಿಗೆ ಕೂಡಲೇ ನೆನಪಾದದ್ದು ತಿರುಪತಿಯ ವೆಂಕಟರಮಣ. ಮಗನ ಕಾಲು ಸರಿಯಾದರೆ ತಿರುಪತಿ ಶ್ರೀನಿವಾಸನ ಸನ್ನಿಧಿಗೆ ಕೆಳಗಿನಿಂದ ಬೆಟ್ಟದವರೆಗೆ ನಡೆದುಕೊಂಡು ಹೋಗಿ ಉಪನಯನ ಸಂಸ್ಕಾರ ನಡೆಸುತ್ತೇನೆಂದು ಹರಕೆ ಹೊತ್ತರು. ದೊಡ್ಡವರು 21 ಕಿ.ಮೀ. ನಡೆದು ಹೋಗುವುದನ್ನು ನಿರೀಕ್ಷಿಸಬಹುದು, ಚಿಕ್ಕ ಮಕ್ಕಳು 21 ಕಿ.ಮೀ. ನಡೆದು ಹೋಗುವುದು ಸಾಧ್ಯವೆ ಎಂದು ತಾಯಿ ಯೋಚಿಸಲಿಲ್ಲ, ಕಾರಣವೆಂದರೆ ಮಗ ನಡೆದಾಡುವ ಶಕ್ತಿ ಹೊಂದಿದರೆ ಸಾಕೆಂಬ ಭಾವ ಇತ್ತು. 

ಆಗ ಡಾ|ಶ್ರೀನಿವಾಸರೆಂಬ ಆಯುರ್ವೇದ ವೈದ್ಯರು ಮನೆಗೆ ಬಂದರು. ತಂದೆತಾಯಿ ಮಗನ ಸಮಸ್ಯೆಯನ್ನು ವಿವರಿಸಿದರು. ತಾನೊಂದು ಎಣ್ಣೆ ಕೊಡುತ್ತೇನೆ, ಹುಡುಗ ಸರಿಯಾಗುತ್ತಾನೆಂದು ಭರವಸೆ ನೀಡಿದರು. ಸೊಂಟ ಬಿದ್ದು ಹೋಗಿದ್ದ ರಮೇಶ ಒಂದು ವಾರದಲ್ಲಿ ನಡೆಯಲು ಶುರುಮಾಡಿದ. ಒಂಭತ್ತು ವರ್ಷ ಪ್ರಾಯವಾಗುವಾಗ ತಂದೆತಾಯಿ ಮಗನನ್ನು ತಿರುಪತಿಗೆ ಕರೆದೊಯ್ದರು. ಬೆಟ್ಟದ ಬುಡದಿಂದ ಮೇಲಿನವರೆಗೆ 21 ಕಿ.ಮೀ. ದೂರವನ್ನು 9 ವರ್ಷ ಪ್ರಾಯದ ಹುಡುಗ ಹತ್ತುವುದು ಸುಲಭವೇ? “ಉಪನಯನವೂ ಬೇಡ, ಕಾಲೂ ಬೇಡ’ ಎಂದು ರಮೇಶ ಬೊಬ್ಬೆ ಹೊಡೆದಿದ್ದ. ಕಾಲ ಉರುಳುತ್ತದೆ, ಅದೇ ರಮೇಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಾಗಿ ತಿರುಪತಿ ದೇವಸ್ಥಾನಕ್ಕೆ ಹೋದಾಗ ಶ್ರೀನಿವಾಸ ಛತ್ರ, ಮಕರತೋರಣ, ಓಲಗವನ್ನು ಕೊಟ್ಟು ತನ್ನ ದರ್ಶನಕ್ಕೆ ಕರೆಸಿಕೊಳ್ಳುತ್ತಾನೆ. ಶ್ರೀನಿವಾಸನ ದಯೆಯಿಂದ ಇದೆಲ್ಲ ಸಾಧ್ಯವಾದದ್ದು….

ಶಿಬರೂರು, ಕಡಂದಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ರಮೇಶ ಕಟೀಲು ದೇವಳದ ಪ್ರೌಢಶಾಲೆಗೆ ಹೋದರೂ ಅಧ್ಯಾತ್ಮದ ಸೆಳೆತ ಉಂಟಾಗಿ ಉಡುಪಿಗೆ ಬಂದು ಸೇರಿಕೊಂಡ. ಆಗ ಶ್ರೀವಿದ್ಯಾಮಾನ್ಯತೀರ್ಥರ ಸಂಪರ್ಕ ಉಂಟಾದದ್ದು ಕೊನೆಗೆ ಅವರ ಪಟ್ಟ ಶಿಷ್ಯರಾಗುವವರೆಗೆ ಮುಂದುವರಿಯಿತು. ಅದೇ ವೇಳೆ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್‌ ಪದವಿಯನ್ನು ಪಡೆದರು. 1979-80ರಲ್ಲಿ ಅದಮಾರು ಮೂಲಮಠದಲ್ಲಿ ಶ್ರೀವಿಬುಧೇಶತೀರ್ಥ ಶ್ರೀಪಾದರು ಶ್ರೀವಿದ್ಯಾಮಾನ್ಯತೀರ್ಥರ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೀವಿದ್ಯಾಧೀಶತೀರ್ಥರೆಂದು ನಾಮಕರಣ ಮಾಡಿದರು. ಅದೇ ವೇಳೆ ಅದಮಾರಿನಲ್ಲಿ ಶ್ರೀವಿದ್ಯಾಮಾನ್ಯತೀರ್ಥರಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯೆಶತೀರ್ಥರೊಂದಿಗೆ ವೇದಾಂತದ ಉದ್ಗ†ಂಥಗಳನ್ನು ಅಧ್ಯಯನ ನಡೆಸಿದವರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು. 

1986-87ರಲ್ಲಿ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು ಎರಡನೆಯ ಬಾರಿಗೆ ಪರ್ಯಾಯ ಪೂಜೆಯನ್ನು ಶ್ರೀಕೃಷ್ಣಮಠದಲ್ಲಿ ನಡೆಸಿದಾಗ ಅವರಿಗೆ ಸಹಾಯಕರಾಗಿ ತರಬೇತಿ ಹೊಂದಿದ ಶ್ರೀವಿದ್ಯಾಧೀಶತೀರ್ಥರು ಶಾಸ್ತ್ರಾಧ್ಯಯನ, ಅಧ್ಯಾಪನ, ಆಚಾರ ವಿಚಾರದಲ್ಲಿ ಗುರುಗಳಿಗೆ ಅಚ್ಚುಮೆಚ್ಚಿನ ನಡೆಯವರು. ಇದರ ಪರಿಣಾಮವೇ ಪಲಿಮಾರು ಮೂಲಮಠದಲ್ಲಿ ಜನ್ಮತಳೆದ “ಯೋಗದೀಪಿಕಾ’ ಗುರುಕುಲ. ಈ ಗುರುಕುಲವೀಗ ಅನೇಕ ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸಿದೆ. ಶ್ರೀವಿದ್ಯಾಧೀಶತೀರ್ಥರು ಮಾಡುವ ಖರ್ಚುಗಳೆಲ್ಲ ಇಂಥದ್ದೇ, ಈ ಯಾವ ಹೂಡಿಕೆಯೂ ನಗದು (ಲಾಭ) ರೂಪದಲ್ಲಿ ಹಿಂದಿರುಗುವ ಸಂಸ್ಥೆಗಳಲ್ಲ. 1991ರಲ್ಲಿ ಬದರಿಯಲ್ಲಿ ಮೈಕೊರೆಯುವ ಚಳಿಯಲ್ಲಿ ಚಾತುರ್ಮಾಸ್ಯವ್ರತ, 1997ರಲ್ಲಿ ಅಲ್ಲೇ ಪಾಠಪ್ರವಚನ ಹೊರತುಪಡಿಸಿ ಕಾಷ್ಠಮೌನವ್ರತವೇ ಮೊದಲಾದ ಕಠಿನ ವ್ರತಜೀವನಗಳು ಗುರುಗಳ ಮಾದರಿಯವು. “ಮಂಗಲಾಷ್ಟಕ’ವನ್ನು ಬರೆದ ತಮ್ಮದೇ ಪರಂಪರೆಯ ಶ್ರೀರಾಜರಾಜೇಶ್ವರಯತಿಗಳ ಹೆಸರಿನಲ್ಲಿ ಹಿರಿಯ ವಿದ್ವನ್ಮಣಿಗಳಿಗೆ ಪ್ರಶಸ್ತಿ ಪ್ರದಾನವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದಾರೆ. 

ಶ್ರೀವಿದ್ಯಾಮಾನ್ಯತೀರ್ಥರ ಏಕಾದಶಿ ನಿಷ್ಠೆ ಎಷ್ಟಿತ್ತೆನ್ನುವುದಕ್ಕೆ ಅನಾರೋಗ್ಯದ ಕೊನೆಯ ಕಾಲದಲ್ಲಿ ಬೇರೆ ಬೇರೆ ತಿಥಿಗಳು ಬಂದರೂ ಏಕಾದಶಿವರೆಗೆ ಕಾದು ಇಹಲೋಕಯಾತ್ರೆಯನ್ನು (2000ರ ಮೇ 14 ಏಕಾದಶಿ) ನಡೆಸಿದ್ದನ್ನು ಉಲ್ಲೇಖೀಸಬಹುದು. ಗುರುಗಳು ಪರ್ಯಾಯ ಪೂಜೆ ನಡೆಸುವಾಗ ಸಹಕಾರಿಯಾಗಿ ನಿಂತ ಅನುಭವ ಪಡೆದ ಶ್ರೀವಿದ್ಯಾಧೀಶತೀರ್ಥರು 2002-04ರ ಅವಧಿಯಲ್ಲಿ ಒಂದು ಬಾರಿ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನಡೆಸಿದರು. ಆಗ ಶ್ರೀಕೃಷ್ಣನಿಗೆ ವಜ್ರದ ಕವಚವನ್ನು ಸಮರ್ಪಿಸಿದ ಶ್ರೀವಿದ್ಯಾಧೀಶತೀರ್ಥರು ಶಾಲಾ ಮಕ್ಕಳಿಗೆ ಊಟ ಒದಗಿಸುವ ಚಿಣ್ಣರ ಸಂತರ್ಪಣೆ ಯೋಜನೆಯನ್ನೂ ಆರಂಭಿಸಿ ಸಾಮಾಜಿಕ ಬದ್ಧತೆಯನ್ನು ತೋರಿದರು. ಬಳಿಕ ಅದು ರಾಜ್ಯ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿ ಮುನ್ನಡೆಯುತ್ತಿದೆ, ಇತ್ತ ಶ್ರೀಕೃಷ್ಣಮಠದಲ್ಲಿಯೂ ಯೋಜನೆ ಮುಂದುವರಿಯುತ್ತಿದೆ. 

ಹಲವು ಆಯಾಮಗಳ ಆರಾಧನೆಗೆ ಪಲಿಮಾರುಶ್ರೀ ಸಜ್ಜು
·   ಈ ಬಾರಿಯ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣಮಠದ ಗರ್ಭಗುಡಿಗೆ ಚಿನ್ನದ ತಗಡು ಹೊದೆಸುವ ಗುರಿ ಇರಿಸಿಕೊಂಡಿದ್ದಾರೆ. ಎಲ್ಲಿಯದ್ದೇ ಆಗಲೀ, ಯಾರದ್ದೇ ಆಗಲೀ ಉಡುಪಿಗೆ ಈ ಹೆಸರಿನಲ್ಲಿಯಾದರೂ 100 ಕೆ.ಜಿ. ಬಂಗಾರ ಬರುವುದು ಮಾತ್ರ ಅಸಾಮಾನ್ಯ ವಿಷಯ.

·   ಪ್ರತಿನಿತ್ಯ ಲಕ್ಷ ತುಳಸಿ ಅರ್ಚನೆ ನಡೆಸಲು ಬೇಕಾದ ತುಳಸಿ ವನದ ನಿರ್ಮಾಣವಾಗಿದೆ. ಪೆರಂಪಳ್ಳಿಯಲ್ಲಿ ಮನೋಹರ ಶೆಟ್ಟಿಯವರು ನೀಡಿದ ಜಾಗದಲ್ಲಿ, ಪಲಿಮಾರು ಮೂಲಮಠದಲ್ಲಿ ತುಳಸಿ ವನಗಳನ್ನು ನಿರ್ಮಿಸಲಾಗಿದೆ. ನಿತ್ಯ ಲಕ್ಷ ತುಳಸಿ ಕುಡಿಗಳನ್ನು ಸ್ವಾಮೀಜಿಯವರು ಅರ್ಚಿಸುವುದಲ್ಲದೆ ಕನಿಷ್ಠ 60 ವೈದಿಕರನ್ನು ವಿಷ್ಣುಸಹಸ್ರನಾಮ ಪಠನಕ್ಕೆ ಗುರುತಿಸಲಾಗಿದೆ. ಇವರು ಎರಡು ಬಾರಿ ಪಠಿಸಿದರೆ ಲಕ್ಷ ನಾಮಗಳನ್ನು ಪಠಿಸಿದಂತಾಗುತ್ತದೆ. ಇವರು ಎರಡು ವರ್ಷ ಖಾಯಂ ಆಗಿ ಪಾರಾಯಣ ನಡೆಸಬೇಕು. ಇವರಿಗೆ ಸಂಭಾವನೆಯನ್ನೂ ನಿಗದಿಪಡಿಸಲಾಗಿದೆ. ಉಚಿತವಾಗಿ ಮಾಡುವವರಿಗೂ ಅವಕಾಶವಿದೆ. ಇದು ಹೊರತಾಗಿಯೂ ಅವರವರ ಮನೆಯಲ್ಲಿ -ಮನದಲ್ಲಿ ವಿಷ್ಣುಸಹಸ್ರನಾಮ ಪಠಿಸಿ ಶ್ರೀಕೃಷ್ಣನಿಗೆ ತಲುಪಿಸಬಹುದು. ತುಳಸಿಯನ್ನು ನಾವು ಧಾರ್ಮಿಕವಾಗಿ ನೋಡುತ್ತಿದ್ದೇವೆ ವಿನಾ ಇದರ ಔಷಧೀಯ ಮುಖವನ್ನು ನೋಡುತ್ತಿಲ್ಲ. ಇಷ್ಟೊಂದು ದೊಡ್ಡ ತುಳಸಿ ವನದಿಂದ ಪರಿಸರದ ಮೇಲೆ ಎಂತಹ ಜೈವಿಕ ಪರಿಣಾಮ ಬೀರಬಹುದು ಎಂದು ಕಲ್ಪಿಸಲೂ ನಾವು ಅಶಕ್ತರು.

·  ಕನಕಗೋಪುರದ ಬಳಿ ನಿರ್ಮಿಸುವ ವೇದಿಕೆಯಲ್ಲಿ ಇನ್ನೆರಡು ವರ್ಷ ನಿರಂತರ ಭಜನೆ ನಡೆಯುವುದು ಕನಕದಾಸರಿಗೊಂದು ಸಲ್ಲಿಸುವ ಗೌರವವೂ ಆಗಿದೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಸರದಿಯಂತೆ ಭಜನೆ ನಡೆಸಲಾಗುತ್ತದೆ. ಎರಡು ವರ್ಷವೆಂದರೆ 730 ದಿನಗಳು. ಪ್ರತಿ ಮೂರು ದಿನಗಳಲ್ಲಿ ಆರು ಭಜನಾ ತಂಡಗಳು ಕಾರ್ಯನಿರ್ವಹಿಸಲಿವೆ. ಇವುಗಳಲ್ಲಿ ಒಂದು ತಂಡ ಎರಡು ಗಂಟೆ ಭಜನೆ ಮಾಡಿದ ಬಳಿಕ ಇನ್ನೊಂದು ತಂಡ, ಬಳಿಕ ಮತ್ತೂಂದು ತಂಡ ಭಜನೆ ಮಾಡಲಿವೆ. ಒಂದು ತಂಡಕ್ಕೆ ನಾಲ್ಕು ಗಂಟೆಗಳ ವಿಶ್ರಾಂತಿ ದೊರಕುತ್ತದೆ. ಆರು ತಂಡಗಳು ಮೂರು ದಿನ ಇಲ್ಲಿರಬೇಕು. ಎಲ್ಲ ಭಜನೆಗಳನ್ನೂ ಕುಳಿತುಕೊಂಡೇ ಮಾಡಲಾಗುವುದು. ಎರಡು ವರ್ಷಗಳಲ್ಲಿ ಒಂದು ಸಾರಿ ಬಂದ ತಂಡ ಇನ್ನೊಮ್ಮೆ ಬರುವುದಿಲ್ಲ. ಈ ಲೆಕ್ಕಾಚಾರದಲ್ಲಿ ಎರಡು ವರ್ಷಕ್ಕೆ 1,440 ಭಜನಾ ತಂಡಗಳ ಅಗತ್ಯವಿದೆ. ಆದರೂ ತಂಡಗಳು ಕೊನೆ ಕ್ಷಣದಲ್ಲಿ ಬರಲು ಅನನುಕೂಲವಾದರೆ ಇನ್ನೊಂದು ತಂಡ ಇರಬೇಕಾಗುತ್ತದೆ. ಹೀಗಾಗಿ ಸುಮಾರು 1,800 ಭಜನಾ ತಂಡಗಳು ಬೇಕೆಂದು ಅಂದಾಜಿಸಲಾಗಿದೆ.

·  14 ವರ್ಷಗಳ ಹಿಂದೆ ತಮ್ಮದೇ ಪರ್ಯಾಯದಲ್ಲಿ ಆರಂಭಿಸಿ ಬಳಿಕ ರಾಜ್ಯ ಸರಕಾರದ ಮೇಲೂ ಪರಿಣಾಮ ಬೀರಿದ ಚಿಣ್ಣರ ಸಂತರ್ಪಣೆ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಶ್ರೀವಿದ್ಯಾಧೀಶತೀರ್ಥರಿಗೆ ಇದೆ.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.