ಸಿದ್ಧರಾಮೇಶ್ವರ ಜಯಂತ್ಯುತ್ಸವ
Team Udayavani, Jan 16, 2018, 4:44 PM IST
ಸುರಪುರ: ಕಲ್ಯಾಣ ನಾಡಿನ ಅನೇಕ ಶರಣರಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ಸರ್ವಶ್ರೇಷ್ಠ ಶರಣನಾಗಿದ್ದ. ಅವರು ಕೇವಲ ಅಧ್ಯಾತ್ಮ ಜ್ಞಾನಕ್ಕೆ ಮಾತ್ರ ಸಿಮೀತನಾಗಿರಲಿಲ್ಲ. ಅನೇಕ ಕರೆ ಕಟ್ಟೆಗಳನ್ನು ಕಟ್ಟಿಸಿ ಜನಸಾಮಾನ್ಯರಿಗೆ ನೆರವಾಗುವ ಮೂಲಕ ಅಪ್ಪಟ ಸಮಾಜ ಸುಧಾರಕನಾಗಿದ್ದ ಎಂದು ತಹಶೀಲ್ದಾರ್ ಸುರೇಶ ಅಂಕಲಗಿ ಹೇಳಿದರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ ಕಂದಾಚಾರಗಳನ್ನು ಬೇರುಮಟ್ಟದಿಂದ ಕಿತ್ತೂಗೆಯಲು ಶ್ರಮಿಸಿದರು. ಕ್ರಾಂತಿಕಾರಿ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಬೇರೂರಿದ್ದ ಜಾತೀಯತೆ, ಅಸಮಾನತೆಯನ್ನು ತೊಲಗಿಸುವಲ್ಲಿ ಶ್ರಮಿಸಿದ್ದರು.
ಅವರ ವಚನಗಳು ಮತ್ತು ಅವರು ಹಾಕಿಕೊಟ್ಟ ಮಾರ್ಗ ಅನುಸರಿಸುವುದು ಹೆಚ್ಚು ಪ್ರಸ್ತುತವಾಗಿದೆ ಎಂದರು. ಸಮಾಜದ ಮುಖಂಡ ವೆಂಕಟೇಶ ಅಮ್ಮಾಪುರ ಮಾತನಾಡಿ, ತಾಲೂಕಿನಲ್ಲಿ ಬೆರಣಿಕೆಯಷ್ಠಿರುವ ಬೋವಿವಡ್ಡರ ಸಮಾಜ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದದೆ. ಸಮಾಜದ ಜನರಿಗೆ ಹೊಲಮನೆ ಇಲ್ಲ. ರಟ್ಟೆಯೊಳಗಿನ ಶಕ್ತಿಯೇ ಅವರ ಆಸ್ತಿ. ಗುಡ್ಡದ ಕಲ್ಲು ಬಂಡೆಗಳೆ ಜೀವನಕಾಶ್ರಯ. ನಮ್ಮ ವಾಸ್ತವಿಕತೆಯನ್ನು ಅರಿತ ಸರಕಾರ ಒಂದಿಷ್ಟು ಮೀಸಲಾತಿ ನೀಡಿದೆ. ಆದರೆ ಇದನ್ನು ಸಹಿಸಲಾಗದ ಕೆಲ ದುಷ್ಟ ಶಕ್ತಿಗಳು ಅದನ್ನು ಕಿತ್ತಿಕೊಳ್ಳಲು ಅವಣಿಸುತ್ತಿವೆ. ತರೆಮರೆಯಲ್ಲಿ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಸಮುದಾಯ ಬಾಂಧವರು ಎಚ್ಚೆತ್ತುಕೊಳ್ಳಬೇಕು. ಇದರ ವಿರುದ್ಧ ಹೋರಾಡಲು ನಾವೆಲ್ಲ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಡಾ| ಬಾಬಾ ಸಾಹೇಬರು ಹೇಳುವಂತೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಾವು ಮೊದಲು ಶಿಕ್ಷಣವಂತ್ತರಾಗಬೇಕು. ಮೂಢನಂಬಿಕೆ, ಕಂದಾಚಾರದಿಂದ ಹೊರಬರಬೇಕು. ಕುಡಿತದಂತ ಕೆಟ್ಟ ಅವ್ಯಾಸಗಳನ್ನು ಕೈ ಬಿಡಬೇಕು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ರವುಕುಮಾರ ಭೋವಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಕವಿತಾ ಎಲಿಗಾರ, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ಸೂಗೂರೇಶ ವಾರದ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ, ಗ್ರೇಡ್-2 ತಹಶೀಲ್ದಾರ್ ಸೋಪಿಯಾ ಸುಲ್ತಾನ ವೇದಿಕೆಯಲ್ಲಿದ್ದರು. ಹಣಮಂತ ಪೂಜಾರಿ ಸ್ವಾಗತಿಸಿ, ವಂದಿಸಿದರು. ಸಮಾಜದ ನಾಗಪ್ಪ ಜಾಲಳ್ಳಿ, ಜೆಟ್ಟೆಪ್ಪ ಪೂಜಾರಿ, ನಾಗೇಶ ಪೂಜಾರಿ, ಆನಂದ ಅಮ್ಮಾಪುರ, ವೆಂಕಟೇಶ ಮಡ್ಡಿ, ಲಕ್ಕಪ್ಪ ಭೋವಿ, ಭೀಮಣ್ಣ ಪೂಜಾರಿ, ಹಣಮಂತ ಕೊದ್ದಡ್ಡಿ, ನಾಗಪ್ಪ ದಂಡ, ಮಲ್ಲೇಶಿ ಬೋವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.