ಕುಡಿಯಲು ಅಲ್ಲ; ಕಬ್ಬಿಗಾಗಿ ನೀರಿನ ಬೇಡಿಕೆ
Team Udayavani, Jan 17, 2018, 7:27 AM IST
ಪಣಜಿ: ಮಹದಾಯಿ ವಿಚಾರದಲ್ಲಿ ಇನ್ನೂ ಮೊಂಡುವಾದ ಮಂಡಿಸುತ್ತಿರುವ ಗೋವಾ ಸರ್ಕಾರ, ಕರ್ನಾಟಕ ಕುಡಿಯುವ ಸಲುವಾಗಿ ನೀರನ್ನು ಕೇಳುತ್ತಿಲ್ಲ ಎಂದು ನ್ಯಾಯಾಧಿಕರಣದ ಮುಂದೆ ಅಫಿಡವಿಟ್ ಸಲ್ಲಿಸಿದೆ. ಕಬ್ಬು ಬೆಳೆಯುವ ಉದ್ದೇಶಕ್ಕಾಗಿಯೇ ಕರ್ನಾಟಕ ಸರ್ಕಾರ ಮಹದಾಯಿ ನೀರು ಕೇಳುತ್ತಿದೆ ಎಂದು ಗೋವಾ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಆತ್ಮಾರಾಮ ನಾಡಕರ್ಣಿ ಸೋಮವಾರ 531 ಪುಟಗಳ ವಾದ ಸಲ್ಲಿಸುವ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ.
“ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಹದಾಯಿ ನೀರು ಬೇಕು ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ. ಆದರೆ ಇದು ಶುದ್ಧ ಸುಳ್ಳು. ಮಲಪ್ರಭಾ ಅಣೆಕಟ್ಟಿನಿಂದಲೂ ಕೂಡ ಅವಳಿ ನಗರಕ್ಕೆ ನೀರು ಬೇಕು ಎಂಬ ವಾದವೂ ಸರಿಯಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ. ಕುಡಿವ ನೀರಿಗೆ ಮಹದಾಯಿ ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ ಎನ್ನುವುದನ್ನು ಪ್ರತಿಪಾದಿಸಲು ಹುಬ್ಬಳ್ಳಿ-ಧಾರವಾಡ ಮಹಾ ನಗರಕ್ಕೆ 7.56 ಟಿಎಂಸಿ ನೀರು ಎಂದು ಹೇಳುತ್ತಿದೆ. ಆದರೆ ಮೂಲ ಉದ್ದೇಶ ಕಬ್ಬಿನ ಬೆಳೆಗೆ ನೀರು ಹಾಯಿಸಲು ಬಳಕೆ ಮಾಡುವುದೇ ಆಗಿದೆ ಎಂದು ಗೋವಾ ಪರ ವಕೀಲರು ಆರೋಪಿಸಿದ್ದಾರೆ. 2051ರ ವೇಳೆ
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಆಸುಪಾಸಿನ ಜನಸಂಖ್ಯೆ 28 ಲಕ್ಷ ಆಗಲಿದೆ.
ಗಮನಾರ್ಹ ಅಂಶವೆಂದರೆ 2011ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ 9,43,857. ಹೀಗಾಗಿ 2051ರ ವೇಳೆಗೆ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು ಎಂಬ ವಾದವೇ ಸರಿಯಲ್ಲ ಎಂದು ಆತ್ಮಾರಾಮ ನಾಡಕರ್ಣಿ ತಾವು ಸಲ್ಲಿಸಿದ 531 ಪುಟಗಳ
ವಾದದಲ್ಲಿ ಪ್ರತಿಪಾದಿಸಿದ್ದಾರೆ. ಗೋವಾದ ಜನಸಂಖ್ಯೆ ಕಳೆದ 40 ವರ್ಷಗಳಲ್ಲಿ ಶೇ.10ರ ದರದಲ್ಲಿಯೇ ಬೆಳೆದಿದೆ ಎಂದು ನಾಡಕರ್ಣಿ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡದ ಜನಸಂಖ್ಯೆ 1981ರಲ್ಲಿ 5,27,108 ಆಗಿತ್ತು. 2011ರಲ್ಲಿ 9,43, 857ಕ್ಕೆ ತಲುಪಿತು. ಸಾಂಖೀಕವಾಗಿ ಹೇಳುವುದಿದ್ದರೆ ಕೇವಲ ಮೂರು ಲಕ್ಷ ಮಾತ್ರ ಜನಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ಈ ಬಗ್ಗೆ ಕರ್ನಾಟಕ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಗೋವಾ ಸಲ್ಲಿಸಿದ ವಾದವನ್ನು ಲಘುವಾಗಿಯೇ ಪರಿಗಣಿಸಿ ಕರ್ನಾಟಕ ಸರ್ಕಾರ ವಾದ ಮಂಡಿಸಿದೆ. ನೆರೆಯ ರಾಜ್ಯ ತನ್ನ ಅಹವಾಲಿನಲ್ಲಿ ಮಂಡಿಸಿದ ಯಾವುದೇ ಅಂಶ ಸಮರ್ಥನೀಯವಲ್ಲ ಎಂದು ನಾಡಕರ್ಣಿ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಒಟ್ಟು 12 ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕ್ರಮದಿಂದಾಗಿ ಪರಿಸರಕ್ಕೆ ಮತ್ತು ಈ ಪ್ರದೇಶದ ಭೂಭಾಗಕ್ಕೆ ಹಾನಿಯಾಗಲಿದೆ. ಹೀಗಾಗಿಯೇ ನೆರೆಯ ರಾಜ್ಯದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಿಂದ ಮಹದಾಯಿ ನ್ಯಾಯಾಧಿಕರಣ ನೀರು ಹಂಚಿಕೆ ವಿವಾದದ ಪ್ರಕರಣದ ಅಂತಿಮ ವಿಚಾರಣೆ ಆರಂಭಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.