ಹೀರೋ ಆದ್ರು ಮಂಜು ಮಾಂಡವ್ಯ
Team Udayavani, Jan 17, 2018, 10:45 AM IST
ಮಂಜು ಮಾಂಡವ್ಯ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಗೊತ್ತಿರಬಹುದು. ಕೆಲವು ದಿನಗಳ ಹಿಂದೆಯೇ, ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದ ಮಂಜು, ಚಿತ್ರದ ಹಾಡುಗಳ ರಾಗ ಸಂಯೋಜನೆಗೆ ಚಾಲನೆ ಕೊಟ್ಟಿದ್ದರು. ಆದರೆ, ಮಂಜು ಮಾಂಡವ್ಯ ಅವರ ಹೊಸ ಚಿತ್ರಕ್ಕೆ ನಾಯಕ ಯಾರು, ನಾಯಕಿ ಯಾರೆಲ್ಲಾ, ಯಾರೆಲ್ಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕ್ಯಾಮೆರಾ ಯಾರು ಹಿಡಿಯುತ್ತಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಮಂಜು ಉತ್ತರಿಸುವುದಕ್ಕೆ ಹೋಗಿರಲಿಲ್ಲ. “ಚಿತ್ರಕ್ಕೆ ಶೀರ್ಷಿಕೆಯೂ ಪಕ್ಕಾ ಆಗಿಲ್ಲ. ಈಗಷ್ಟೇ ಸಂಗೀತದ ಕೆಲಸ ಶುರುವಾಗಿದ್ದು ಬಿಟ್ಟರೆ, ಬೇರೇನೂ ಅಂತಿಮವಾಗಿಲ್ಲ ಎಂಬುದು ಮಂಜು ಮಾಂಡವ್ಯ ಹೇಳಿಕೊಂಡಿದ್ದರು. ಈಗ ಕೊನೆಗೂ ಮಂಜು ತಮ್ಮ ಹೊಸ ಚಿತ್ರದ ಕುರಿತು ಹಲವು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಅಂದಹಾಗೆ, ಮಂಜು ಹೊಸ ಚಿತ್ರಕ್ಕೆ “ಶೀ ಭರತ ಬಾಹುಬಲಿ’ ಎಂಬ ಹೆಸರನ್ನು ಇಡಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಮಂಜು ಮಾಂಡವ್ಯ, ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್‌ನಲ್ಲಿ ಚಿತ್ರ ಮಾಡುತ್ತಿದ್ದಾರೆ. ಇದೊಂದು ಎಲ್ಲಾ ಪ್ಯಾಕೇಜ್ ಇರುವಂತಹ ಅಪ್ಪಟ ಮನರಂಜನೆಯ ಚಿತ್ರ ಆಗಿರುತ್ತೆ ಎಂದು ಮಂಜು ಹೇಳುತ್ತಾರೆ.
ಈ ಚಿತ್ರದಲ್ಲಿ ಅವರೇ ನಾಯಕನಾಗಿ ನಟಿಸುತ್ತಿದ್ದು, ಜೊತೆಗೆ ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ, ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. “ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗುತ್ತಿರುವ ನನ್ನ ನಿರ್ದೇಶನದ ಹೊಸ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದೇನೆ. ಜೊತೆಗೆ ನನ್ನ ಕುಚುಕು ಗೆಳೆಯ ಚಿಕ್ಕಣ್ಣ ಸಾಥ್ ನೀಡಲಿದ್ದಾರೆ’ ಎಂದು ಮಂಜು ಮಾಂಡವ್ಯ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.