ಹುಟ್ಟಿದ ದಿನವೇ ಸಾಯುವ ದೃಶ್ಯದ ಚಿತ್ರೀಕರಣ!
Team Udayavani, Jan 17, 2018, 10:45 AM IST
ಕೆಲ ಚಿತ್ರಗಳಲ್ಲಿ ಆಗಾಗ ಒಂದೊಂದು ವಿಶೇಷತೆಗಳು ನಡೆಯುತ್ತಿರುತ್ತವೆ. ಅವುಗಳು ಕಾಕತಾಳೀಯ ಎಂಬಂತೆಯೇ ನಡೆದು ಸುದ್ದಿಯಾಗಿರುತ್ತವೆ. ಅಂಥದ್ದೇ ಮರೆಯಲಾರದ ಘಟನೆಯೊಂದು ಮಧುಸೂದನ್ ನಿರ್ದೇಶನದ “30 ದಿನ 3 ಗಂಟೆ 30 ಸೆಕೆಂಡ್’ ಚಿತ್ರದಲ್ಲಿ ನಡೆದಿದೆ ಅಂದರೆ, ನಂಬಲೇಬೇಕು. ಅಂಥದ್ದೊಂದು ಘಟನೆ ನೆನಪಿಸಿಕೊಂಡು ಹೇಳಿದ್ದು ನಾಯಕ ಅರುಗೌಡ.
ಹೌದು, ಚಿತ್ರದಲ್ಲಿ ಅವರ ಗೆಳೆಯನ ಪಾತ್ರ ಮಾಡಿರುವ ಶಶಿ ಎಂಬ ನಟ, ಸಾಯುವ ದೃಶ್ಯದಲ್ಲಿ ನಟಿಸಬೇಕಿತ್ತಂತೆ. ಆದರೆ, ಆ ದೃಶ್ಯವನ್ನು ಚಿತ್ರೀಕರಿಸಲು ನಿರ್ದೇಶಕರು ಹಲವು ಬಾರಿ ರೆಡಿಯಾಗಿ ಸೆಟ್ಗೆ ಬಂದರೂ, ಅದೇಕೋ ಏನೋ, ಆ ದೃಶ್ಯದ ಚಿತ್ರೀಕರಣ ಮಾತ್ರ ಮುಂದಕ್ಕೆ ಹೋಗುತ್ತಲೇ ಇತ್ತಂತೆ. ಒಂದು ದಿನ ನಿಗದಿಪಡಿಸಿ, ಅದೇ ದಿನ ಸಾಯುವ ದೃಶ್ಯವನ್ನು ಚಿತ್ರೀಕರಿಸೋಕೆ ಅಣಿಯಾದರೂ, ಸಾಧ್ಯವಾಗದೆ ದಿನಗಳನ್ನು ಮುಂದಕ್ಕೆ ಹಾಕುತ್ತಲೇ ಇದ್ದರಂತೆ ನಿರ್ದೇಶಕರು.
ಕೊನೆಗೆ ಏನಾದರೂ ಸರಿ, ಆ ಸಾಯುವ ಎಪಿಸೋಡ್ ಅನ್ನು ಮುಗಿಸಿಬಿಡಬೇಕು ಅಂತ ಒಂದು ದಿನ ಚಿತ್ರೀಕರಣ ನಡೆಸಲು ಫಿಕ್ಸ್ ಆದರಂತೆ ನಿರ್ದೇಶಕರು. ಶಶಿ ಅವರು ಅಂದು ಸಾಯುವ ಹಾಗೆ ನಟಿಸಬೇಕಿತ್ತು. ಹಾಗೆಯೇ ನಟಿಸಿದರೂ ಕೂಡ. ಅದು ಯಶಸ್ವಿಯಾಗಿಯೂ ಮೂಡಿಬಂದಿದೆ. ಕಾಕತಾಳೀಯ ಎಂಬಂತೆ ಅವರು ಸಾಯುವ ದೃಶ್ಯ ಮಾಡಿದ ದಿನವೇ ಅವರ ಹುಟ್ಟುಹಬ್ಬವೂ ಇತ್ತಂತೆ! ಆ ಸೀನ್ ಮುಗಿದ ಮೇಲಷ್ಟೇ ಎಲ್ಲರಿಗೂ ಶಶಿ ಅವರ ಹುಟ್ಟುಹಬ್ಬ ಅಂತ ಗೊತ್ತಾಗಿದೆ.
ಸರಿ, ಆ ದೃಶ್ಯದಲ್ಲಿ ಸತ್ತವರಂತೆಯೇ ಅವರನ್ನು ಬಟ್ಟೆಯಲ್ಲಿ ಸುತ್ತಿ ಸುಮಾರು 4 ತಾಸಿನವರೆಗೆ ಪ್ಯಾಕ್ ಮಾಡಿ ಬಿಡಲಾಗಿತ್ತಂತೆ. ಬಿಸಿಲಿದ್ದರೂ, ಅವರು ಆ ಸೆಕೆಯನ್ನು ತಡೆದು, ತುಂಬ ಡೆಡಿಕೇಟ್ ಆಗಿ ಆ ಪಾತ್ರ ನಿರ್ವಹಿಸಿದ್ದಾರೆ. ಆ ಸೀನ್ ಮುಗಿದ ಮೇಲೆ ಬಟ್ಟೆ ಮತ್ತು ಕವರ್ ಬಿಚ್ಚಿದಾಗ, ಮೈಯಲ್ಲೆಲ್ಲಾ ನೀರು ಹರಿಯುತ್ತಿತ್ತಂತೆ. ಅಷ್ಟೊಂದು ನೀರು ಹರಿದರೂ, ದೇಹವೆಲ್ಲ ತಣ್ಣಗಾಗಿದ್ದರೂ, ಶಶಿ ಮಾತ್ರ ಕೊಟ್ಟ ಪಾತ್ರಕ್ಕೆ ಜೀವ ತುಂಬಿದ ಬಗೆಯನ್ನು ಅರುಗೌಡ ಗುಣಗಾನ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.