ಮಹಾವೀರ ಕಾಲೇಜಿನಲ್ಲಿ ಅಂಗಾಂಗ ದಾನ


Team Udayavani, Jan 17, 2018, 12:03 PM IST

18-Jan-10.jpg

ಮೂಡಬಿದಿರೆ: ಶ್ರೀ ಮಹಾವೀರ ಕಾಲೇಜಿನ ಯುವ ರೆಡ್‌ ಕ್ರಾಸ್‌ ಘಟಕ ಮತ್ತು ಲಯನ್ಸ್‌ ಕ್ಲಬ್‌, ಮಂಗಳೂರು ನೇತ್ರಾವತಿ ಇವುಗಳ ಜಂಟಿ ಆಶ್ರಯದಲ್ಲಿ ದೇಹದ ಅಂಗಾಂಗ ದಾನದ ಮಹತ್ವ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಮಹಾವೀರ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿ, ಎ.ಜೆ. ಶೆಟ್ಟಿ ಆಸ್ಪತ್ರೆಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಮಾತನಾಡಿ, ಅಂಗಾಂಗ ದಾನಿಗಳ ಕೊರತೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದು, ಅಂಗಾಂಗ ದಾನದ ಮಹತ್ತ್ವದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಅಪಘಾತ ಸಂದರ್ಭ ವ್ಯಕ್ತಿಯ ಮಿದುಳು ನಿಷ್ಕ್ರಿಯವಾದಲ್ಲಿ, ವ್ಯಕ್ತಿಯ ಅಂಗಾಂಗಳನ್ನು ಅವರ ಸಂಬಂಧಿಕರ ಒಪ್ಪಿಗೆ ಪಡೆದು, ನಿಯಮಗಳ ಪ್ರಕಾರ, ಅಂಗಾಂಗ ವೈಫಲ್ಯದ ವ್ಯಕ್ತಿಗಳಿಗೆ ದಾನ ಮಾಡಬಹುದು ಎಂದು ತಿಳಿಸಿದರು. ಕೆಡಾವರಿಕ್‌ ಅಂಗಾಂಗ ದಾನದ ಬಗ್ಗೆ ಸವಿವರ ಮಾಹಿತಿ ನೀಡಿದ ಅವರು, ಈ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು.

ಆರೋಗ್ಯ ಕಾಪಾಡಿಕೊಳ್ಳಿ
ಆರೋಗ್ಯ ಅರಿವು ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ| ಶಿಲ್ಪಾ ಮೂಲ್ಕಿ ಮಾತನಾಡಿ, ಜಂಕ್‌ ಫುಡ್‌ ಕೈಬಿಡಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿರಿ. ಒಂದೇ ಸಲ ಬಹಳ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು ಉತ್ತಮ. ವ್ಯಾಯಾಮ, ವಾಕಿಂಗ್‌ ಮಾಡಿರಿ, ಈ ಜೀವನ ಶೈಲಿಯಿಂದ ದೈಹಿಕ, ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ. ಓದಿನಲ್ಲಿ ಏಕಾಗ್ರತೆಯೂ ಲಭಿಸುತ್ತದೆ ಎಂದರು.

ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಚಂದ್ರಶೇಖರ ದೀಕ್ಷಿತ್‌ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಧರಮೇಶ್‌ ಭಟ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಹರೀಶ್‌, ರೆಡ್‌ಕ್ರಾಸ್‌ ಅಧಿಕಾರಿ ಡಾ| ಜಯಲಕ್ಷ್ಮೀ, ಲಯನ್ಸ್‌ ಸದಸ್ಯರಾದ ಮಂದಾಕಿನಿ ಉಪಾಧ್ಯಾಯ, ಗೀತಾ ಕಲ್ಯಾಣಪುರ ಮತ್ತು ವಿದ್ಯಾರ್ಥಿ ನಾಯಕ ಅಶ್ವಿ‌ತ್‌ ಜೀವನ್‌ ರಾಡ್ರಿಗಸ್‌ ಉಪಸ್ಥಿತರಿದ್ದರು. ನೇತ್ರಾವತಿ ಮಂಗಳೂರು ಲಯನ್ಸ್‌ ಕ್ಲಬ್‌ನ ಅಧ್ಯಕ್ಷೆ ಸಬಿತಾ ಶೆಟ್ಟಿ ಪ್ರಾಸ್ತಾವನೆಗೈದರು. ಸ್ನೋವಾ ಸ್ವಾಗತಿಸಿ, ಶೈನಿ ವಂದಿಸಿದರು. ರೆಡ್‌ಕ್ರಾಸ್‌ ಘಟಕದ ಕಾರ್ಯದರ್ಶಿ ಕೇಲ್ರೊಯ್‌ ಪೇಟ್ರಿಕ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ಮತ್ತೆ ಚಿರತೆ ಪ್ರತ್ಯಕ್ಷ, ಹೆಚ್ಚಿದ ಭೀತಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿMulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

Mulki: ರೈಲು ಪ್ರಯಾಣಿಕನ ಹಂತಕ ಅಂತಾರಾಜ್ಯ ಕುಖ್ಯಾತ ಪಾತಕಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.